ETV Bharat / international

ಹೊಸ ಭಾಷ್ಯ ಬರೆಯಲು ಸಜ್ಜಾದ ಕಮಲಾ ಹ್ಯಾರಿಸ್​​.. ಶ್ವೇತಭವನದಲ್ಲಿನ್ಮೇಲೆ 'ಕಪ್ಪು' ಬಂಗಾರ! - ಭಾರತೀಯ ಮೂಲದ ಕಮಲಾ ಹ್ಯಾರೀಸ್

ಭಾರತೀಯ ಮೂಲದ ಕಪ್ಪು ಮಹಿಳೆ ಕಮಲಾ ಹ್ಯಾರಿಸ್ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ 49ನೇ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿ ಹೊಸ ಭಾಷ್ಯ ಬರೆಯಲು ಸಜ್ಜಾಗಿದ್ದಾರೆ..

Harris all set to be America's first female VP
ಕಮಲಾ ಹ್ಯಾರಿಸ್
author img

By

Published : Jan 20, 2021, 8:03 AM IST

ವಾಷಿಂಗ್ಟನ್ ​​: ಎರಡು ಶತಮಾನಗಳಿಂದ ಪುರುಷರೇ ಆಳುತ್ತಿದ್ದ ಅಮೆರಿಕ ರಾಜಕಾರಣದಲ್ಲಿ ಭಾರತೀಯ ಮೂಲದ ಕಪ್ಪು ಮಹಿಳೆ ಕಮಲಾ ಹ್ಯಾರಿಸ್ ವಿಜಯದ ಪತಾಕೆ ಹಾರಿಸಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ 49ನೇ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿ ಹೊಸ ಭಾಷ್ಯ ಬರೆಯಲು ಸಜ್ಜಾಗಿದ್ದಾರೆ. ಕಮಲಾ ಹ್ಯಾರಿಸ್​ ಶ್ವೇತಭವನ ಪ್ರವೇಶ ಭಾರತೀಯರಲ್ಲಿಯೂ ಸಂತಸ ತಂದಿದೆ. ಉಪಾಧ್ಯಕ್ಷೆಯಾಗಿ ಆಯ್ಕೆಯಾಗುತ್ತಿರುವ ಮೊದಲ ಏಷ್ಯಾ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

56 ವರ್ಷದ ಕಮಲಾ ಹ್ಯಾರಿಸ್​ ಅವರು ಕ್ಯಾಲಿಫೋರ್ನಿಯಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಅಮೆರಿಕಾದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಉಪಾಧ್ಯಕ್ಷ ಸ್ಥಾನ ಪಟ್ಟ ಅಲಂಕರಿಸುತ್ತಿದ್ದಾರೆ. ಹ್ಯಾರಿಸ್​ ತಾಯಿ ಭಾರತೀಯರಾದ್ರೆ, ತಂದೆ ಜಮೈಕಾದವರು. ಇವರಿಬ್ಬರು ಹಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ವಾಸ್ತವ್ಯ ಆರಂಭಿಸಿದ್ದರು. ಕಮಲಾ ಅವರು ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ವಕೀಲರಾಗಿದ್ದರು. ಅಲ್ಲದೇ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್​ ಆಗಿ ಕೂಡ ಸೇವೆ ಸಲ್ಲಿಸಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಕಮಲಾ ಹ್ಯಾರಿಸ್​​, ಟ್ರಂಪ್​ ನೇಮಕಾತಿದಾರರು ಮತ್ತು ನ್ಯಾಯಾಲಯದ ನಾಮ ನಿರ್ದೇಶಿತರ ವಿರುದ್ಧ ಹೋರಾಡಿ ಗಮನ ಸೆಳೆದಿದ್ದರು. ಕ್ಯಾಲಿಫೋರ್ನಿಯಾದ ಸೆನೆಟರ್‌ ಆಗಿರುವ ಕಮಲಾ ಹ್ಯಾರಿಸ್‌ ಡೆಮಾಕ್ರೆಟಿಕ್‌ ಪಕ್ಷದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದರು. ಹೀಗಾಗಿ ಅವರಿಗೆ ಉಪಾಧ್ಯಕ್ಷ ಅಭ್ಯರ್ಥಿ ಹುದ್ದೆ ಒಲಿದು ಬಂದಿತ್ತು. ಅಧ್ಯಕ್ಷೀಯ ಚುನಾವಣೆಗೂ ಮುನ್ನ ಜೋ ಬೈಡನ್​ ಅವರ ವಿರೋಧಿಯಾಗಿದ್ದರು. ಚುನಾವಣೆ ಘೋಷಣೆ ಬಳಿಕ ಬೈಡನ್​ ಬೆಂಬಲಕ್ಕೆ ನಿಂತರು.

ಉನ್ನತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಕಮಲಾದೇವಿ ಹ್ಯಾರಿಸ್, ಪೊಲೀಸ್ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಗೆ ಕಾರಣಕರ್ತರೂ ಕೂಡ ಹೌದು. ನಂತರ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಇದೀಗ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಮೈಕ್ ಪೆನ್ಸೆ ಅವರನ್ನು ಎದುರಿಸಿ ಗೆದ್ದು ಶ್ವೇತಭವನ ಪ್ರವೇಶಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.