ವಾಷಿಂಗ್ಟನ್: ಜಾಗತಿಕವಾಗಿ ಕೊರೊನಾ ಪ್ರಕರಣಗಳು ಒಟ್ಟು 422.8 ಮಿಲಿಯನ್ ಗಡಿ ಮುಟ್ಟಿದೆ. ಮಾರಕ ಸೋಂಕಿನಿಂದ ಈವರೆಗೆ 5.88 ಮಿಲಿಯನ್ ಸಾವು ಸಂಭವಿಸಿದೆ. ಸುಮಾರು 10.34 ಬಿಲಿಯನ್‌ಗೂ ಅಧಿಕ ಲಸಿಕೆಯ ಡೋಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗ ಮಾಹಿತಿ ನೀಡಿದ್ದು, ಈವರೆಗೆ ಒಟ್ಟು 422,838,196 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಒಟ್ಟು 5,880,263 ಸಾವು ಸಂಭವಿಸಿದೆ. ಜಾಗತಿಕವಾಗಿ 10,341,207,797 ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದೆ.
ಅಮೆರಿಕದಲ್ಲಿ ಜಗತ್ತಿನಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣ ಮತ್ತು ಸಾವು ಸಂಭವಿಸಿದ್ದು ಒಟ್ಟು 78,457,081 ಕೊರೊನಾ ಪ್ರಕರಣಗಳು, 9,34,951 ಸಾವು ಸಂಭವಿಸಿರುವುದಾಗಿ ವರದಿ ಹೇಳಿದೆ. ಇನ್ನು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದ್ದು, ಒಟ್ಟು 42,780,235 ಪ್ರಕರಣಗಳು ಮತ್ತು 510,905 ಸಾವು ಸಂಭವಿಸಿದೆ. ನಂತರದ ಸ್ಥಾನದಲ್ಲಿ ಬ್ರೆಜಿಲ್ ಇದ್ದು ಒಟ್ಟು 28,178,378 ಕೋವಿಡ್ ಪ್ರಕರಣಗಳು ಮತ್ತು 644,203 ಸಾವು ವರದಿಯಾಗಿದೆ.
ಇದೇ ವೇಳೆ 5 ಮಿಲಿಯನ್‌ಗೂ ಅಧಿಕ ಪ್ರಕರಣಗಳುಳ್ಳ ದೇಶಗಳ ಪಟ್ಟಿ ಮಾಡಿದ್ದು, ಫ್ರಾನ್ಸ್ (22,386,566),ಯುಕೆ (18,676,357), ರಷ್ಯಾ(14,802,439), ಟರ್ಕಿ (13,266,265), ಜರ್ಮನಿ(13,498,312), ಇಟಲಿ (12,323,398), ಸ್ಪೇನ್(10,778,607), ಅರ್ಜೆಂಟೀನಾ(8,799,858), ಇರಾನ್(6,894,110), ನೆದರ್ಲಾಂಡ್ (6,052,374) ,ಕೊಲಂಬಿಯಾ(6,031,130), ಪೋಲಾಂಡ್(5,460,552),ಮೆಕ್ಸಿಕೋ (5,344,840) ಈ ಪಟ್ಟಿಯಲ್ಲಿರುವ ದೇಶಗಳಾಗಿವೆ.
1 ಲಕ್ಷಕ್ಕೂ ಅಧಿಕ ಸಾವು ದಾಖಲಾದ ದೇಶಗಳ ಪಟ್ಟಿಯನ್ನು ನೋಡುವುದಾದರೆ, ರಷ್ಯಾ (337,074), ಮೆಕ್ಸಿಕೋ (314,128), ಪೆರು (208,622), ಯುಕೆ (160,946), ಇಟಲಿ(152,282), ಇಂಡೋನೇಷಿಯಾ (145,622), ಕೊಲಂಬಿಯಾ (137,586), ಫ್ರಾನ್ಸ್ (137,595), ಇರಾನ್ (134,420), ಅರ್ಜೆಂಟೀನಾ (124,924), ಜರ್ಮನಿ (121,218), ಉಕ್ರೇನ್ (110,698) ಮತ್ತು ಪೋಲಾಂಡ್ (109,205) ಸೇರಿದಂತೆ ಹಲವು ದೇಶಗಳಿವೆ.