ETV Bharat / international

ಅಫ್ಘಾನ್​ನಲ್ಲಿನ ಬೆಳವಣಿಗೆಗಳು ಮಧ್ಯ ಏಷ್ಯಾ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ: ಭಾರತ ಕಳವಳ - ಮಧ್ಯ ಏಷ್ಯಾ ಬಗ್ಗೆ ತಿರುಮೂರ್ತಿ ಕಳವಳ

ಅಫ್ಘಾನ್​ನಲ್ಲಿನ ಬೆಳವಣಿಗೆಗಳು, ವಿಶೇಷವಾಗಿ ಅಲ್ಲಿಂದ ಹೊರಹೊಮ್ಮುವ ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಯು ಮಧ್ಯ ಏಷ್ಯಾ ಮೇಲೆ ಪರಿಣಾಮ ಬೀರುತ್ತದೆ ಎಂದು ತಿರುಮೂರ್ತಿ ತಿಳಿಸಿದ್ದಾರೆ.

ತಿರುಮೂರ್ತಿ
ತಿರುಮೂರ್ತಿ
author img

By

Published : Feb 17, 2022, 12:02 PM IST

ನ್ಯೂಯಾರ್ಕ್ (ಅಮೆರಿಕ): ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಮಧ್ಯ ಏಷ್ಯಾ ಪ್ರದೇಶದ ಮೇಲೆ ವ್ಯಾಪಕವಾದ ಪರಿಣಾಮಗಳನ್ನು ಬೀರುತ್ತವೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಭಾಗವಹಿಸಿದ ತಿರುಮೂರ್ತಿ "ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆಯಲ್ಲಿ ವಿಶ್ವಸಂಸ್ಥೆ ಮತ್ತು ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಸಂಸ್ಥೆಗಳ ನಡುವಿನ ಸಹಕಾರ: ವಿಶ್ವಸಂಸ್ಥೆ ಮತ್ತು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (ಸಿಎಸ್‌ಟಿಒ) ನಡುವಿನ ಸಹಕಾರ" - ಈ ವಿಷಯದ ಕುರಿತು ಮಾತನಾಡಿದರು.

ಕಳೆದ ವರ್ಷ ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಉಗ್ರ ಸಂಘಟನೆ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಪರಿಸ್ಥಿತಿಯು ತೀವ್ರವಾಗಿ ಹದಗೆಟ್ಟಿದೆ. ವಿದೇಶಿ ನೆರವಿನ ಅಮಾನತು, ತಾಲಿಬಾನ್ ಮೇಲಿನ ಅಂತಾರಾಷ್ಟ್ರೀಯ ನಿರ್ಬಂಧಗಳು ಈಗಾಗಲೇ ಹೆಚ್ಚಿನ ಬಡತನದಿಂದ ಬಳಲುತ್ತಿರುವ ದೇಶವನ್ನು ಪೂರ್ಣ ಪ್ರಮಾಣದ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿಸಿದೆ. ಅಫ್ಘಾನ್​ನಲ್ಲಿನ ಬೆಳವಣಿಗೆಗಳು, ವಿಶೇಷವಾಗಿ ಅಲ್ಲಿಂದ ಹೊರಹೊಮ್ಮುವ ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಯು ಮಧ್ಯ ಏಷ್ಯಾ ಮೇಲೆ ಪರಿಣಾಮ ಬೀರುತ್ತದೆ ಎಂದು ತಿರುಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವಸಂಸ್ಥೆಯ UNSAAT ತಂಡದಲ್ಲಿ ಭಾರತದ 19 ಮಹಿಳಾ ಅಧಿಕಾರಿಗಳಿಗೆ ಸ್ಥಾನ.. ಇದೇ ಮೊದಲು

ಯುಎನ್ ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಶನ್ ಪ್ರಕಾರ, ಅಫ್ಘಾನ್ ನೆಲವನ್ನು ಭಯೋತ್ಪಾದಕರಿಗೆ ಆಶ್ರಯ, ತರಬೇತಿ ನೋಡಲು ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ಒದಗಿಸಲು ಬಳಸಬಾರದು. ಆದರೆ ಈ ನಿಯಮಗಳು ಪಾಲನೆಯಾಗದ ಕಾರಣ ಇದರ ಪರಿಣಾಮಗಳ ಸುಳಿಗೆ 20ನೇ ಸಂಸ್ಥಾಪನಾ ವರ್ಷವನ್ನು ಆಚರಿಸುತ್ತಿರುವ ಅರ್ಮೇನಿಯಾ, ಬೆಲಾರಸ್, ಕಝಾಕಿಸ್ತಾನ್, ಕಿರ್ಗಿಸ್ತಾನ್ ಮತ್ತು ತಜಿಕಿಸ್ತಾನ್ ಹಾಗೂ ಇತರ ಮಧ್ಯ ಏಷ್ಯಾ ರಾಷ್ಟ್ರಗಳು ಸಿಲುಕಲಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು 30 ಅರ್ಥಪೂರ್ಣ ವರ್ಷಗಳನ್ನು ಪೂರೈಸಿವೆ. ಈ ದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಭಾರತವು ನೆರವು ನೀಡುತ್ತಿದೆ. ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಮಧ್ಯ ಏಷ್ಯಾದ ದೇಶಗಳು ಹೊಂದಿರುವ ಕಳವಳಗಳನ್ನು ಅಂತರರಾಷ್ಟ್ರೀಯ ಸಮುದಾಯವು ಅರಿಯುವ ಅಗತ್ಯವಿದೆ ಎಂದು ತಿರುಮೂರ್ತಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.