ನವದೆಹಲಿ: ಫೆಬ್ರವರಿ 24 ಹಾಗೂ 25ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರವಾಸ ಕೈಗೊಳ್ಳುತ್ತಿದ್ದು, ಅವರೊಂದಿಗೆ ಇದೀಗ ಮಗಳಾದ ಇವಾಂಕಾ ಟ್ರಂಪ್ ಹಾಗೂ ಅಳಿಕ ಜೆರಾಲ್ಡ್ ಕುಶ್ನರ್ ಕೂಡ ಆಗಮಿಸುತ್ತಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಖಚಿತಪಡಿಸಿದೆ.
-
Sources: Ivanka Trump to also be a part of the high-level delegation which will accompany US President Donald Trump to India. (file pic) pic.twitter.com/KYBU547RfO
— ANI (@ANI) February 21, 2020 " class="align-text-top noRightClick twitterSection" data="
">Sources: Ivanka Trump to also be a part of the high-level delegation which will accompany US President Donald Trump to India. (file pic) pic.twitter.com/KYBU547RfO
— ANI (@ANI) February 21, 2020Sources: Ivanka Trump to also be a part of the high-level delegation which will accompany US President Donald Trump to India. (file pic) pic.twitter.com/KYBU547RfO
— ANI (@ANI) February 21, 2020
ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಮಾತ್ರ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಅಮೆರಿಕ ಅಧ್ಯಕ್ಷರ ಮಗಳು, ಅಳಿಯ ಕೂಡಾ ಆಗಮಿಸಲಿದ್ದಾರೆ ಎಂದು ಮಾಹಿತಿ ದೊರೆತಿದೆ.
ಅಮೆರಿಕ ಅಧ್ಯಕ್ಷ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್ನ ಅಹಮದಾಬಾದ್ನ ಮಾರ್ಗದಲ್ಲಿನ ಗೋಡೆಗಳ ಮೇಲೆ ವೆಲ್ಕಮ್ ಬ್ಯಾನರ್ಗಳು ರಾರಾಜಿಸುತ್ತಿದ್ದು, ಅವರನ್ನ ಬರಮಾಡಿಕೊಳ್ಳಲು ಭಾರತ ತುದಿಗಾಲ ಮೇಲೆ ನಿಂತಿದೆ.
ಗುಜರಾತ್ನ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಇದೀಗ ಅವರೊಂದಿಗೆ ಪತ್ನಿ ಮೆಲಾನಿಯಾ, ಮಗಳು ಇವಾಂಕಾ ಟ್ರಂಪ್ ಹಾಗೂ ಅಳಿಯ ಜೆರಾಲ್ಡ್ ಕುಶ್ನರ್ ಕೂಡ ಆಗಮಿಸಲಿದ್ದಾರೆ.