ನ್ಯೂಯಾರ್ಕ್ : ಚೀನಾ ಟೆನಿಸ್ ಆಟಗಾರ್ತಿ(Chinese tennis player) ಪೆಂಗ್ ಶೂಯಿ(Peng Shuai) ಮಾಜಿ ಉನ್ನತ ಅಧಿಕಾರಿ(ಕಮ್ಯುನಿಷ್ಟ ನಾಯಕ) ವಿರುದ್ಧ ಸೆಕ್ಸ್ ಆರೋಪ(sexually assault) ಮಾಡಿದ ಬೆನ್ನಲ್ಲೇ ಇದೀಗ ದಿಢೀರ್ ಆಗಿ ನಾಪತ್ತೆಯಾಗಿದ್ದಾರೆ.
ಚೀನಾದ ಕಮ್ಯುನಿಷ್ಟ್(Communist leader) ನಾಯಕ ಜಾಂಗ್ ಗಾಲಿ ತಮ್ಮೊಂದಿಗೆ ಸೆಕ್ಸ್ ನಡೆಸಲು ಆಹ್ವಾನ ನೀಡಿದ್ದರು ಎಂಬ ಗಂಭೀರ ಆರೋಪ ಮಾಡಿದ್ದ ಬೆನ್ನಲ್ಲೇ ಆಟಗಾರ್ತಿ ನಾಪತ್ತೆಯಾಗಿದ್ದಾರೆಂಬ ಮಾತು ಕೇಳಿ ಬಂದಿದೆ.
ಮೂರು ಬಾರಿ ಒಲಿಂಪಿಯನ್ ಹಾಗೂ ಟೆನಿಸ್ ಚಾಂಪಿಯನ್ ಆಗಿರುವ ಪೆಂಗ್ ಶೂಯಿ ಕಳೆದ ಕೆಲ ದಿನಗಳ ಹಿಂದೆ ಮಾಜಿ ಉನ್ನತ ಅಧಿಕಾರಿ ವಿರುದ್ಧ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ.
ಬೀಜಿಂಗ್ನಲ್ಲಿ ಮುಂದಿನ ಮೂರು ತಿಂಗಳಲ್ಲಿ ಚಳಿಗಾಲದ(Winter Games) ಕ್ರೀಡಾಕೂಟ ನಡೆಯಲಿದೆ. ಅದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮುಂದೆ ಇಂತಹದೊಂದು ಪ್ರಶ್ನೆ ಉದ್ಭವವಾಗಿದೆ. ಇದರ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ತಿಳಿದಿಲ್ಲ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರರು ಮಾಹಿತಿ ಹೊರ ಹಾಕಿದ್ದಾರೆ.
ನವೆಂಬರ್ 2ರಂದು ಜಾಂಗ್ ಗಾಲಿ ವಿರುದ್ಧ ಸೆಕ್ಸ್ ಆರೋಪ ಮಾಡಿದ್ದ ಟೆನಿಸ್ ಆಟಗಾರ್ತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇನ್ನು ಅವರು ಹಾಕಿದ್ದ ಮಾಹಿತಿ ಕೇವಲ 30 ನಿಮಿಷಗಳಲ್ಲಿ ಅಳಿಸಿ ಹಾಕಲಾಗಿತ್ತು. ಇದೀಗ ಅವರು ಎಲ್ಲಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಇದನ್ನೂ ಓದಿರಿ: 2022ರ ಐಪಿಎಲ್ನಲ್ಲಿ ಭಾಗವಹಿಸುವಿಕೆಯ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ ಎಂಎಸ್ ಧೋನಿ
ಪೆಂಗ್ ಶೂಯಿ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಇಡೀ ಟೆನಿಸ್ ಜಗತ್ತು ಆತಂಕ ವ್ಯಕ್ತಪಡಿಸಿದೆ. ಇದೇ ವಿಚಾರವಾಗಿ ಸೆರೆನಾ ವಿಲಿಯಮ್ಸ್(Serena Williams) ಕೂಡ ಟ್ವೀಟ್ ಮಾಡಿ, ತಮ್ಮ ಆಘಾತ ಹೊರ ಹಾಕಿದ್ದಾರೆ.
ಪೆಂಗ್ ಶೂಯಿ ನಾಪತ್ತೆಯಾಗಿರುವ ವಿಚಾರ ಕೇಳಿ ಆಘಾತಕ್ಕೊಳಗಾಗಿದ್ದೇನೆ. ಆಕೆ ಸುರಕ್ಷಿತವಾಗಿದ್ದಾಳೆ ಹಾಗೂ ಆದಷ್ಟು ಬೇಗ ಪತ್ತೆಯಾಗಲಿದ್ದಾಳೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಇದರ ಜೊತೆಗೆ ಜಪಾನಿನ ಟೆನಿಸ್ ಆಟಗಾರ್ತಿ ನವೊಮಿ ಕೂಡ ಟ್ವೀಟ್ ಮೂಲಕ ನಾಪತ್ತೆಯ ವಿಚಾರ ಎತ್ತಿದ್ದಾರೆ. ಇದೇ ವಿಚಾರವಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಷಿಯೇಷನ್ ಕೂಡ ಮೌನ ವಹಿಸಿದ್ದು, ಈ ರೀತಿಯಾ ನಿರ್ಧಾರ ಸರಿಯಲ್ಲ ಎಂದು ಅನೇಕರು ಹೇಳಿದ್ದಾರೆ.
2013ರಲ್ಲಿ ವಿಂಬಲ್ಡನ್, 2014ರಲ್ಲಿ ಫ್ರೆಂಚ್ ಓಪನ್ ಸೇರಿದಂತೆ ಅನೇಕ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಅಗ್ರ ಟೆನಿಸ್ ಆಟಗಾರ್ತಿಯರಲ್ಲಿ ಪೆಂಗ್ ಶೂಯಿ ಕೂಡ ಒಬ್ಬರಾಗಿದ್ದಾರೆ.