ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ/ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತೀಯ ಅಮೆರಿಕನ್ನರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಾವು ಹೊಂದಿರುವ ಸ್ನೇಹವನ್ನು ಉಲ್ಲೇಖಿಸಿ 'ಮೋದಿ ನನ್ನ ಬೆಸ್ಟ್ ಫ್ರೆಂಡ್' ಎಂದು ಹೇಳಿದ್ದರು. ಈಗ ವಾಯುಮಾಲಿನ್ಯದ ವಿಷಯ ಎತ್ತಿಕೊಂಡು ಭಾರತದ ವಿರುದ್ಧ ದೋಷಾರೋಪ ಮಾಡಿದ್ದಾರೆ.
ತಮ್ಮ ದೇಶವು ಅತ್ಯುತ್ತಮ ಪರಿಸರ ಗುಣಮಟ್ಟ ಹೊಂದಿದೆ ಎಂದು ಪ್ರತಿಪಾದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ, ರಷ್ಯಾ ಮತ್ತು ಭಾರತದಂತಹ ದೇಶಗಳು ಜಾಗತಿಕ ವಾಯುಮಾಲಿನ್ಯ ಹೆಚ್ಚಿಸಿವೆ ಎಂದು ದೂಷಿಸಿದ್ದಾರೆ.
ನಮಗೆ ಭಾರತದಿಂದ ಉತ್ತಮವಾದ ಬೆಂಬಲವಿದೆ. ನಮಗೆ ಪ್ರಧಾನಿ ಮೋದಿ ಅವರ ದೊಡ್ಡ ಸಹಾಯವಿದೆ. ಭಾರತೀಯ (ಅಮೆರಿಕನ್) ಜನರು ಟ್ರಂಪ್‌ಗೆ ಮತ ಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಳೆದು ತಿಂಗಳು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ನಿನ್ನೆ ನಾರ್ತ್ ಕೆರೊಲಿನಾದಲ್ಲಿ ಚುನಾವಣಾ ಸಮಾವೇಶದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತನಾಡಿದ ಟ್ರಂಪ್, ತಮ್ಮ ಆಡಳಿತದಲ್ಲಿ ಅಮೆರಿಕ ತನ್ನ ಪ್ರಾಚೀನ ಪರಿಸರ ರಕ್ಷಣೆಯಲ್ಲಿ ಇಂಧನ ಸ್ವಾತಂತ್ರ್ಯ ಸಾಧಿಸಿದೆ. ನಮ್ಮಲ್ಲಿ ಉತ್ತಮ ಪರಿಸರ ಗುಣಮಟ್ಟ ಓಝೋನ್ ಗುಣಮಟ್ಟ ಮತ್ತು ಇತರ ಹಲವು ಉತ್ತಮ ಅಂಶಗಳಿವೆ. ಈ ಮಧ್ಯೆ, ಚೀನಾ, ರಷ್ಯಾ, ಭಾರತ ಈ ಎಲ್ಲ ದೇಶಗಳು ಗಾಳಿಯಲ್ಲಿ ಬೇಡದ ವಸ್ತುಗಳನ್ನು ಚೆಲ್ಲುತ್ತವೆ ಎಂದು ಆರೋಪಿಸಿದರು.
ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರವನ್ನು ಟ್ರಂಪ್ 2017ರ ಜೂನ್‌ನಲ್ಲಿ ಘೋಷಿಸಿದ್ದರು. ಈ ಒಪ್ಪಂದವು ಅಮೆರಿಕಕ್ಕೆ ಲಕ್ಷಾಂತರ ಡಾಲರ್‌ಗಳಷ್ಟು ವೆಚ್ಚ ಮಾಡಲಿದೆ, ಉದ್ಯೋಗಗಳನ್ನು ಕೊಲ್ಲುತ್ತದೆ ಮತ್ತು ತೈಲ, ಅನಿಲ, ಕಲ್ಲಿದ್ದಲು ಹಾಗೂ ಉತ್ಪಾದನಾ ಕೈಗಾರಿಕೆಗಳಿಗೆ ಅಡ್ಡಿಯಾಗುತ್ತದೆ ಎಂದು ಹೇಳಿದರು.
ಪ್ಯಾರಿಸ್ ಒಪ್ಪಂದದಿಂದ ಚೀನಾ ಮತ್ತು ಭಾರತದಂತಹ ದೇಶಗಳು ಹೆಚ್ಚಿನ ಲಾಭವನ್ನು ಪಡೆಯುತ್ತಿವೆ. ಒಪ್ಪಂದವು ಅಮೆರಿಕಕ್ಕೆ ಅನ್ಯಾಯವಾಗಿದೆ. ಅದು ತನ್ನ ವ್ಯವಹಾರ ಮತ್ತು ಉದ್ಯೋಗಗಳನ್ನು ಕೆಟ್ಟದಾಗಿ ಹೊಡೆತ ನೀಡಿದೆ ಎಂದು ದೂರಿದರು.
ಜಾಗತಿಕ ಮಾಲಿನ್ಯಕ್ಕೆ ಕೆಲವು ರಾಷ್ಟ್ರಗಳು ಕೊಡುಗೆ ನೀಡುತ್ತಿವೆ. ನಿಮಗೆ ತಿಳಿದಿರುವ ನನ್ನ ಜನರಿಗೆ ನಾನು ಹೇಳುತ್ತಲೇ ಇರುತ್ತೇನೆ. ನಾನು ಶುದ್ಧ ಗಾಳಿಯನ್ನು ಪ್ರೀತಿಸುತ್ತೇನೆ. ಆದರೆ, ರಷ್ಯಾ ಮತ್ತು ಚೀನಾ ಹೊಂದಿರುವ ಆ ಎಲ್ಲ ತಾಣಗಳ ನಕ್ಷೆಯನ್ನು ನೀವು ನೋಡುತ್ತೀರಿ. ಭಾರತ ಮತ್ತು ಇನ್ನೂ ಅನೇಕರು ಗಾಳಿಯಲ್ಲಿ ಬೇಡದ್ದು ಚೆಲ್ಲುತ್ತಿದ್ದಾರೆ. ನೀವು ಏನು ಸೂಚಿಸುತ್ತೀರಿ ಎಂದು ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರನ್ನು ಭಾಷಣದಲ್ಲಿ ಪ್ರಶ್ನಿಸಿದರು.