ವಾಷಿಂಗ್ಟನ್: ಅಮೆರಿಕಕ್ಕೆ ತೀವ್ರ ತಲೆ ನೋವಾಗಿರುವ ದಕ್ಷಿಣ ಗಡಿಯಲ್ಲಿನ ವಲಸೆ ತಡೆಯಲು ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದ ಉತ್ತರ ತ್ರಿಕೋನ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಪ್ರಯತ್ನಗಳ ಜವಾಬ್ದಾರಿಯನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ವಹಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಮಾಜಿ ಅಟಾರ್ನಿ ಜನರಲ್ ಆಗಿ ಉಪಾಧ್ಯಕ್ಷರ ಅನುಭವ ಉಲ್ಲೇಖಿಸಿ ಬೈಡನ್, ಬುಧವಾರ ಶ್ವೇತಭವನದಲ್ಲಿ ಈ ಘೋಷಣೆ ಮಾಡಿದರು. ಇದನ್ನು ಬೇರೆ ಯಾರಿಗೇ ಹೋಲಿಸಿದರೂ ಹ್ಯಾರಿಸ್ ಹೊರತುಪಡಿಸಿ ಮತ್ತೊಬ್ಬರಿಗೆ ಉತ್ತಮವಾಗಿ ಮಾಡುವ ಅರ್ಹತೆ ಇಲ್ಲ ಎಂದು ಬಣ್ಣಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಭಾರತ - ಅಮೆರಿಕ ನಡುವೆ ಹೋಮ್ಲ್ಯಾಂಡ್ ಸೆಕ್ಯೂರಿಟಿ ಪುನಃ ಸ್ಥಾಪನೆ
ಅಮೆರಿಕ - ಮೆಕ್ಸಿಕೋ ಗಡಿಯಲ್ಲಿ ವಲಸಿಗರ ಉಲ್ಬಣ ನಿಭಾಯಿಸಲು ಉಭಯಪಕ್ಷೀಯ ಒತ್ತಡ ಎದುರಿಸುತ್ತಿವೆ. ವಿಶೇಷವಾಗಿ ಒಂಡಿಯಾದ ಮಕ್ಕಳು, ಅಮೆರಿಕದಲ್ಲಿ ತಮ್ಮ ಹೆತ್ತವರೊಂದಿಗೆ ಮತ್ತೆ ಸೇರಲು ಬಯಸುತ್ತಾರೆ. ಬೈಡನ್ ದಕ್ಷಿಣ ಗಡಿಗೆ ಹೋಗುವ ಜನರಲ್ಲಿ ಗಂಭೀರವಾದ ಹೆಚ್ಚಳವಿದೆ ಎಂದು ಹಿಂದಿನ ಆಡಳಿತದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ನಾವು ಈಗ ವ್ಯವಹರಿಸುತ್ತಿರುವ ಈ ಹೊಸ ಉಲ್ಬಣವು ಹಿಂದಿನ ಆಡಳಿತದಲ್ಲಿ ಪ್ರಾರಂಭವಾಗಿತ್ತು. ಆದರೆ, ಇದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹ್ಯಾರಿಸ್ ಎರಡು ಮಾರ್ಗಳಲ್ಲಿ ಕೆಲಸ ಮಾಡುತ್ತಾರೆ. ಸದ್ಯದಲ್ಲಿ, ಅಮೆರಿಕದಲ್ಲಿ ಅನಿಯಮಿತ ವಲಸಿಗರ ಹರಿವನ್ನು ತಡೆಯುವುದು ಮತ್ತು ದೀರ್ಘಾವಧಿಯಲ್ಲಿ ಮೆಕ್ಸಿಕೊ ಹಾಗೂ ಉತ್ತರ ತ್ರಿಕೋನದ ದೇಶಗಳಾದ ಎಲ್ ಸಾಲ್ವಡಾರ್, ಹೊಂಡುರಾಸ್ ಮತ್ತು ಗ್ವಾಟೆಮಾಲಾಗಳೊಂದಿಗೆ ಕಾರ್ಯತಂತ್ರದ ಸಹಭಾಗಿತ್ವ ಸ್ಥಾಪಿಸುವುದು. ರಾಷ್ಟ್ರಗಳ ನಡುವೆ ಸಮೃದ್ಧಿಯನ್ನು ಹೆಚ್ಚಿಸಲು, ಪ್ರಸ್ತುತ ಭ್ರಷ್ಟಾಚಾರವನ್ನು ಎದುರಿಸಲು ಮತ್ತು ಬಲಪಡಿಸಲು ಕಾನೂನಿನ ನಿಯಮಗಳು ಬಳಸಿಕೊಳ್ಳಲಿದ್ದಾರೆ ಎಂದು ಹಿರಿಯ ಆಡಳಿತ ಅಧಿಕಾರಿಗಳು ವರದಿಗಾರರಿಗೆ ಮಾಹಿತಿ ನೀಡಿದರು.
ಹ್ಯಾರಿಸ್ ಅವರ ಹೊಸ ಪಾತ್ರವು ಉಪಾಧ್ಯಕ್ಷರಾಗಿದ್ದಾಗ ಬೈಡನ್ ಅವರ ಪಾತ್ರವನ್ನು ಹೋಲುತ್ತದೆ. 2014 ಮತ್ತು 2015ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ಉತ್ತರ ತ್ರಿಕೋನದಲ್ಲಿ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಲು ಬೈಡನ್ ಅವರನ್ನು ಕೇಳಿಕೊಂಡಿದ್ದರು. ಆ ದೇಶಗಳಿಂದ ಒಂಟಿ ಅಪ್ರಾಪ್ತ ವಯಸ್ಕರು ಅಮೆರಿಕಕ್ಕೆ ಬರಲು ಪ್ರಾರಂಭಿಸಿದರು.
ಇದು ಸವಾಲಿನ ಪರಿಸ್ಥಿತಿ ಎಂಬುದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಈ ಮಧ್ಯೆ ಕಾನೂನುಗಳನ್ನು ಜಾರಿಗೊಳಿಸುವ ಮತ್ತು ಮೂಲ ಕಾರಣಗಳನ್ನು ತಿಳಿಸುವ ಅಗತ್ಯವಿದೆ. ಈ ಸಂಬಂಧಿತ ದೇಶಗಳೊಂದಿಗೆ ರಾಜತಾಂತ್ರಿಕತೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಖಾಸಗಿ ವಲಯ ತಲುಪಲು ಎದುರು ನೋಡುತ್ತಿದ್ದೇನೆ ಎಂದು ಹ್ಯಾರಿಸ್ ಹೇಳಿದ್ದಾರೆ.