ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅತಿ ಹೆಚ್ಚು ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದು ಜಯ ಸಾಧಿಸಿ, ಮುನ್ನೆಡೆಯುತ್ತಿದ್ದಾರೆ. ಈಗ ಅರಿಝೋನಾ ರಾಜ್ಯವನ್ನು ಗೆಲ್ಲುವ ಮೂಲಕ 11 ಎಲೆಕ್ಟೋರಲ್ ಮತಗಳನ್ನು ಹೊಸದಾಗಿ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಸುಮಾರು 11 ಸಾವಿರ ಮತಗಳು ಅಥವಾ ಶೇಕಡಾ 0.3ರಷ್ಟು ಮತಗಳ ಅಂತದಲ್ಲಿ ಅರಿಝೋನಾ ರಾಜ್ಯವನ್ನು ಬೈಡನ್ ಗೆದ್ದಿದ್ದು, 1996ರ ನಂತರ ಇದೇ ಮೊದಲ ಬಾರಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೊಬ್ಬರು ಈ ರಾಜ್ಯದಲ್ಲಿ ಜನಯ ಸಾಧಿಸಿದ ಹೆಗ್ಗಳಿಕೆಗೆ ಒಳಗಾಗಿದ್ದಾರೆ.
ಈ ಮೊದಲು ಡೆಮಾಕ್ರಟಿಕ್ ಅಭ್ಯರ್ಥಿಯಾದ ಬಿಲ್ ಕ್ಲಿಂಟನ್ ಈ ರಾಜ್ಯವನ್ನು ಗೆದ್ದಿದ್ದರು. ಇದಾದ ನಂತರ ನಾಲ್ಕು ವರ್ಷದ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ರಾಜ್ಯದಲ್ಲಿ ಗೆಲವು ಸಾಧಿಸಿದ್ದರು.
ಈಗ ಬೈಡನ್ ಅರಿಝೋನಾ ಸೇರಿ 290 ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದಿದ್ದು, ಗೆಲುವು ತಮ್ಮದೇ ಎಂಬುದು ಖಚಿತವಾಗಿದ್ದರೂ ಡೊನಾಲ್ಡ್ ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಹಾಗೂ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಈಗ ಟ್ರಂಪ್ ಹಾಗೂ ಅವರ ಬೆಂಬಲಿಗರು ಕೆಲವೊಂದು ರಾಜ್ಯಗಳಲ್ಲಿ ಮತಗಳ ಮರು ಎಣಿಕೆಯಾಗಲಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಡಿಸೆಂಬರ್ ಅಂತ್ಯದ ಒಳಗೆ ಅಧ್ಯಕ್ಷ ಹುದ್ದೆಯ ವಿವಾದ ಕೊನೆಗೊಳ್ಳುವ ಸಾಧ್ಯತೆಯಿದೆ.