ವಾಷಿಂಗ್ಟನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ಹಿರಿಯ ಅಧಿಕಾರಿಗಳನ್ನು ವಾಯ್ಸ್ ಆಫ್ ಅಮೆರಿಕ ಮತ್ತು ಯು.ಎಸ್. ಅನುದಾನಿತ ಎಲ್ಲ ಅಂತಾರಾಷ್ಟ್ರೀಯ ಪ್ರಸಾರಗಳ ಮೇಲ್ವಿಚಾರಣೆಯ ಏಜೆನ್ಸಿಯಿಂದ ತೆಗೆದುಹಾಕಲು ಬೈಡನ್ ಆಡಳಿತ ಮುಂದಾಗಿದೆ.
ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಇದೇ 20 ರಂದು ಪದಗ್ರಹಣ ಮಾಡಿದ್ದು, ಮುಂಬರುವ ಉತ್ತಮ ದಿನಗಳಿಗೆ ನಾಂದಿ ಹಾಡಿದ್ದಾರೆ. ಉತ್ತಮ ಆಡಳಿತ ನಡೆಸಬೇಕೆಂದು ನಿರ್ಧರಿಸಿದ್ದು, ಜನರ ಸಹಕಾರ ಕೋರಿದ್ದಾರೆ.
ಇದೀಗ ತಮ್ಮ ಆಡಳಿತದ ಪ್ರಾರಂಭದ ದಿನಗಳಲ್ಲೇ ಟ್ರಂಪ್ ಅವರ ಹಲವು ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಲು ಬೈಡನ್ ಆಡಳಿತ ನಿರ್ಧರಿಸಿದೆ.