ಕನೋಶ್ (ಅಮೆರಿಕ): ನಗರದ ಉತಾಹ್ ಹೆದ್ದಾರಿಯಲ್ಲಿ 22 ವಾಹನಗಳ ಸರಣಿ ಅಪಘಾತ ಸಂಭವಿಸಿ ನಾಲ್ವರು ಮಕ್ಕಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ವಾರಾಂತ್ಯವಾದ್ದರಿಂದ ಅಂತಾರಾಜ್ಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ 10 ಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಲೆಹಿಯ ರೇಸ್ ಸಾಯರ್ (37), ರೈಡರ್ (12), ಕೊರ್ಟ್ನಿ ಸಾಯರ್(30), ಫ್ರಾಂಕಿ(2), ರಿಗ್ಗಿನ್ಸ್ (6), ರಿಚರ್ಡ್ ಲೊರೆಂಜನ್ (51), ಮಾರಿಸೆಲಾ ಲೊರೆಂಜನ್ (47), ಕ್ಯಾಮರೂನ್ ವ್ಯಾಲೆಂಟೈನ್ (15) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬಸ್ ಚಲಾಯಿಸುತ್ತಿದ್ದಂತೆ ನಿದ್ರೆಗೆ ಜಾರಿದ ಚಾಲಕ.. ಮುಂದಾಗಿದ್ದು ಮಾತ್ರ ಘೋರ ದುರಂತ!
ಕನೋಶ್ ಸಾಲ್ಟ್ ಲೇಕ್ ಸಿಟಿಯಿಂದ ದಕ್ಷಿಣಕ್ಕೆ 258 ಕಿಲೋಮೀಟರ್ ದೂರದಲ್ಲಿದೆ.