ನ್ಯೂಯಾರ್ಕ್: ಕೊರೊನಾ ವೈರಸ್ನಿಂದ ಇಡೀ ಮನುಕುಲವೇ ತತ್ತರಿಸಿ ಹೋಗಿದ್ದರೆ. ಇತ್ತ ವಿಶ್ವದ ಹೆಚ್ಚಿನ ವನ್ಯಜೀವಿಗಳಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಹೆಚ್ಚಿನ ಜನರು ಮನೆಯಲ್ಲಿಯೇ ಉಳಿಯುತ್ತಿದ್ದು ಹಾಗೂ ಕಡಿಮೆ ಪ್ರಯಾಣಿಸುತ್ತಿರುವುದರಿಂದಾಗಿ ಇದೀಗ ಪ್ರಾಣಿಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿವೆ. ಅಲ್ಲದೇ ಈಗ ವಾಯು ಮಾಲಿನ್ಯ ಸಂಪೂರ್ಣ ಕಡಿಮೆಯಾಗಿದೆ.
ಅಧಿಕಾರಿಗಳು ಜಾರಿಗೆ ತಂದಿರುವ ಲಾಕ್ಡೌನ್ ನಿಯಮಗಳಿಂದಾಗಿ ಮನುಷ್ಯರ ಅನವಶ್ಯಕ ತಿರುಗಾಟಕ್ಕೆ ಬ್ರೇಕ್ ಬಿದ್ದಿದ್ದು, ಇದರಿಂದಾಗಿ ಪ್ರಕೃತಿ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ.
ಇದು ಯೋಜಿತವಲ್ಲದ ಉತ್ತಮವಾದ ಪ್ರಯೋಗವಾಗಿದ್ದು,ಪರಿಣಾಮ ವೆಲ್ಷ್ ಪಟ್ಟಣವಾದ ಲ್ಯಾಂಡುಡ್ನೊದಲ್ಲಿ ಪ್ರಾಣಿಗಳು ರಸ್ತೆಗಿಳಿದಿವೆ.
ಚಿಲಿಯ ಸ್ಯಾಂಟಿಯಾಗೊ ಕಾಡಿನ ಮೂಲಕ ಪ್ರಾಣಿಗಳು ಚಲಿಸುತ್ತಿದ್ದು, ಕೊಯೊಟೆ ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಸೇತುವೆಯ ವೀಕ್ಷಣಾ ಪ್ರದೇಶದಲ್ಲಿಯೂ ಕಂಡುಬರುತ್ತವೆ, ಇದು ಸಾಮಾನ್ಯವಾಗಿ ಪ್ರವಾಸಿಗರಿಂದ ತುಂಬಿರುತ್ತಿತ್ತು.