ವಾಷಿಂಗ್ಟನ್ (ಯುಎಸ್): ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಮೆರವಣಿಗೆಯಲ್ಲಿ ಆ್ಯಂಟಿಫಾ ಪ್ರತಿಭಟನಾಕಾರರು ವಾಷಿಂಗ್ಟನ್ ಡಿಸಿಯನ್ನು ಸುಟ್ಟು ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ನಾವು ಇಂದು ರಾತ್ರಿ ಇಲ್ಲಿ ಇರುತ್ತೇವೆ, ಯಾಕೆಂದರೆ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಮುಖ್ಯವಾಗಿದೆ. ನಮ್ಮ ತೆರಿಗೆ ಡಾಲರ್ಗಳಿಂದ ಪಾವತಿಸಿದ ಪೊಲೀಸರ ಕೈಯಲ್ಲಿ ಕಪ್ಪು ಜನರು ಇನ್ನೂ ಸಾಯುತ್ತಿದ್ದಾರೆ ಎಂದು ಎಂದು ಪ್ರತಿಭಟನಾನಿರತ ಗುಂಪು ಹೇಳಿದೆ.
ಡಿಸಿ ಕ್ವೀರ್ ಮತ್ತು ಟ್ರಾನ್ಸ್ ಬ್ಲ್ಯಾಕ್ ಹಿಸ್ಟರಿ ಮಂತ್ ಮಾರ್ಚ್ ಮತ್ತು ರ್ಯಾಲಿ ಬ್ಯಾನರ್ ಅಡಿಯಲ್ಲಿ, ಟೋಟಲ್ ಲಿಬರೇಶನ್ ಕಲೆಕ್ಟಿವ್ ಮತ್ತು ಪಾಮ್ ಕಲೆಕ್ಟಿವ್ ಮಧ್ಯಾಹ್ನ 2 ಗಂಟೆಗೆ (ಸ್ಥಳೀಯ ಸಮಯ) ಪ್ರತಿಭಟನೆ ಆಯೋಜಿಸಿತ್ತು.
ಓದಿ :ಜೂಜಾಟದಲ್ಲಿ ಭಾಗಿ ಆರೋಪ : ಬಾಂಗ್ಲಾದಲ್ಲಿ ಮೂವರು ಭಾರತೀಯರ ಬಂಧನ
ನಂತರ ಸಂಜೆ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನಾಕಾರರು ಡುಪಾಂಟ್ ಸರ್ಕಲ್ನಿಂದ ಉತ್ತರಕ್ಕೆ ಮೆರವಣಿಗೆ ನಡೆಸಿದರು. ಕೆಂಪು ಮತ್ತು ಕಪ್ಪು "ಆ್ಯಂಟಿ ಫ್ಯಾಸಿಸ್ಟ್ ಆ್ಯಕ್ಷನ್ ಧ್ವಜವನ್ನು ಕೆಲವು ಆ್ಯಂಟಿಫಾ ಪ್ರತಿಭಟನಾಕಾರರು ಹಿಡಿದುಕೊಂಡಿದ್ದರು ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಪ್ರತಿಭಟನಾಕಾರರು ರೆಸ್ಟೋರೆಂಟ್ಗಳ ಮುಂದೆ ಜಮಾಯಿಸಿದ್ದರು. ಈ ವೇಳೆ ಕೆಲ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳೊಂದಿಗೆ ಗಲಾಟೆ ಮಾಡಿದ್ದಾರೆ ಎಂದು ಸ್ಥಳೀಯ ಪತ್ರಕರ್ತ ವರದಿ ಮಾಡಿರುವುದಾಗಿ ಫಾಕ್ಸ್ ನ್ಯೂಸ್ ಉಲ್ಲೇಖಿಸಿದೆ.
ಕಳೆದ ವರ್ಷ ಮೇನಲ್ಲಿ ಜಾರ್ಜ್ ಫ್ಲಾಯ್ಡ್ ಸಾವಿನ ನಂತರ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಗುಂಪು ಪೊಲೀಸ್ ಕ್ರೌರ್ಯದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮತ್ತು ರ್ಯಾಲಿಗಳನ್ನು ನಡೆಸುತ್ತಿದೆ.