ETV Bharat / international

ಮಾತಿಗೆ ತಪ್ಪಿದ ತಾಲಿಬಾನ್​​, ಅಲ್​ಖೈದಾ ಜತೆ ಸಖ್ಯ ಮುಂದುವರಿಕೆ: ಪೆಂಟಗನ್​​ ವರದಿ - ಪೆಂಟಗನ್​​ ವರದಿ

ವಾಷಿಂಗ್ಟನ್​​​ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪೆಂಟಗನ್ ವರದಿಯ ಪ್ರಕಾರ, ಫೆಬ್ರವರಿಯಲ್ಲಿ ಟ್ರಂಪ್ ಆಡಳಿತದ ಅಮೆರಿಕ ಮತ್ತು ತಾಲಿಬಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಪ್ರಕಾರ ತಾಲಿಬಾನ್​​ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವನ್ನು ಕೈ ಬಿಡಬೇಕು ಎಂಬುದಾಗಿತ್ತು. ಆದರೆ ಇದೀಗ ತಾಲಿಬಾನ್​​ ಮತ್ತೆ ಅಲ್​ಖೈದಾ ಸಂಘಟನೆಯೊಂದಿಗೆ ತನ್ನ ಸಂಬಂಧವನ್ನು ಮುಂದುವರೆಸಿದೆ.

Pentagon
ಪೆಂಟಗನ್
author img

By

Published : Jul 4, 2020, 2:18 AM IST

ವಾಷಿಂಗ್ಟನ್(ಅಮೆರಿಕ): ವರ್ಷದ ಆರಂಭದಲ್ಲಿ ಸಹಿ ಹಾಕಲಾದ ಅಮೆರಿಕ-ತಾಲಿಬಾನ್ ಒಪ್ಪಂದದ ಪ್ರಕಾರ, ಭಯೋತ್ಪಾದಕ ಸಂಘಟನೆಯೊಂದಿಗಿನ ಸಂಬಂಧವನ್ನು ಕಡಿತಗೊಳಿಸುವುದಾಗಿ ತಾಲಿಬಾನ್​ ಭರವಸೆ ನೀಡಿತ್ತು. ಆದರೆ ಇದೀಗ ತಾಲಿಬಾನ್ ಆ ಮಾತಿಗೆ ತಪ್ಪಿದ್ದು, ಅಲ್-ಖೈದಾ ಜೊತೆಗಿನ ಸಂಬಂಧವನ್ನು ಮುಂದುವರೆಸಿದೆ ಎಂದು ಪೆಂಟಗನ್ ತನ್ನ ವರದಿಯಲ್ಲಿ ತಿಳಿಸಿದೆ.

ವಾಷಿಂಗ್ಟನ್​​​ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪೆಂಟಗನ್ ವರದಿಯ ಪ್ರಕಾರ, ಫೆಬ್ರವರಿಯಲ್ಲಿ ಟ್ರಂಪ್ ಆಡಳಿತದ ಅಮೆರಿಕ ಮತ್ತು ತಾಲಿಬಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಪ್ರಕಾರ ತಾಲಿಬಾನ್​​ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವನ್ನು ಕೈ ಬಿಡಬೇಕು ಎಂಬುದಾಗಿತ್ತು. ಆದರೆ ಇದೀಗ ತಾಲಿಬಾನ್​​ ಮತ್ತೆ ಅಲ್​ಖೈದಾ ಸಂಘಟನೆಯೊಂದಿಗೆ ತನ್ನ ಸಂಬಂಧವನ್ನು ಮುಂದುವರೆಸಿದೆ ಎಂಬುದು ಪೆಂಟಗನ್​ ವರದಿಯ ಹುರುಳಾಗಿದೆ.

ಭಾರತೀಯ ಉಪಖಂಡದ (ಎಕ್ಯೂಐಎಸ್) ಅಲ್-ಖೈದಾ ಸಂಘಟನೆ, ಅಫ್ಘಾನ್​ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನಗಳಲ್ಲಿ ತಾಲಿಬಾನ್ ಸದಸ್ಯರೊಂದಿಗೆ ಬೆಂಬಲಿಸುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದಲ್ಲದೆ ಈ ಪ್ರದೇಶದಲ್ಲಿನ ಅಮೆರಿಕ ಪಡೆಗಳು ಮತ್ತು ಪಾಶ್ಚಿಮಾತ್ಯ ದೇಶದ ಸೈನ್ಯಗಳ ಮೇಲೆ ಆಕ್ರಮಣ ಮಾಡುವಲ್ಲಿ ನಿರಂತರ ಆಸಕ್ತಿಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೈನ್ಯದ ಗಾತ್ರವನ್ನು ಜುಲೈ ಮಧ್ಯದ ವೇಳೆಗೆ 8,600ಕ್ಕೆ ಇಳಿಸುವುದಾಗಿ ಭರವಸೆ ನೀಡಿದ್ದು, ಈಗಾಗಲೇ ಸೈನ್ಯದಲ್ಲಿನ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಇದಕ್ಕೆ ಪ್ರತಿಯಾಗಿ ತಾಲಿಬಾನ್ ಅಲ್ ಖೈದಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸುವುದಾಗಿ ಮತ್ತು ಅಘ್ಘಾನ್​ ಸರ್ಕಾರದೊಂದಿಗೆ ಇನ್ಫ್ರಾ-ಅಫ್ಘಾನ್​ ಮಾತುಕತೆ ನಡೆಸಲು ಭರವಸೆ ನೀಡಿತ್ತು. ಆದರೆ ತಾಲಿಬಾನ್​ ನುಡಿದಂತೆ ನಡೆಯುತ್ತಿಲ್ಲ ಎಂಬುದು ಪೆಂಟಗನ್​ನ ಆರೋಪವಾಗಿದೆ.

ಮಾಧ್ಯಮ ವರದಿಯ ಪ್ರಕಾರ, ತಾಲಿಬಾನ್ ಒಪ್ಪಂದವನ್ನು ಸಂಪೂರ್ಣವಾಗಿ ಪಾಲಿಸುವಲ್ಲಿ ವಿಫಲವಾದರೂ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೈನಿಕರ ಸಂಖ್ಯೆಯನ್ನು ಮತ್ತಷ್ಟು ಗಣನೀಯವಾಗಿ ಕಡಿಮೆ ಮಾಡುವ ಯೋಜನೆಗಳ ಬಗ್ಗೆ ಟ್ರಂಪ್ ಆಡಳಿತ ಆಲೋಚಿಸುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಕಳೆದ ವಾರ ಹೇಳಿದ್ದಾರೆ.

ಅಮೆರಿಕ ಸೈನ್ಯವನ್ನು ಹಿಂತೆಗೆದುಕೊಳ್ಳುವುದನ್ನು ತ್ವರಿತಗೊಳಿಸಲು ರಷ್ಯಾ ಅಫ್ಘಾನಿಸ್ತಾನದೊಳಗಿನ ತಾಲಿಬಾನ್ ಮತ್ತು ಇತರ ಗುಂಪುಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಫೆಬ್ರವರಿ ವೇಳೆಗೆ ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಪ್ರಭಾವವನ್ನು ಪಡೆಯಲು, ಅಮೆರಿಕ ಮಿಲಿಟರಿ ಹಿಂತೆಗೆದುಕೊಳ್ಳುವಿಕೆಯನ್ನು ತ್ವರಿತಗೊಳಿಸಲು ಹಾಗೂ ಮಿಲಿಟರಿ ವಾಪಸಾತಿಯಿಂದ ಉಂಟಾಗಬಹುದಾದ ಭದ್ರತಾ ಸವಾಲುಗಳನ್ನು ಎದುರಿಸಲು ರಷ್ಯಾ ಸರ್ಕಾರ, ಪ್ರಾದೇಶಿಕ ದೇಶಗಳು ಮತ್ತು ತಾಲಿಬಾನ್ ಜೊತೆ ಕೆಲಸ ಮಾಡುತ್ತಿದೆ ಎಂದು ವರದಿ ಹೇಳಿದೆ.

ಕಳೆದ ವಾರ ನ್ಯೂಯಾರ್ಕ್ ಟೈಮ್ಸ್ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ, ಟ್ರಂಪ್​​ಗೆ ಗುಪ್ತಚರ ವರದಿಯನ್ನು ನೀಡಲಾಯಿತು. ಈ ವರದಿಯ ಪ್ರಕಾರ ಅಮೆರಿಕ ಸೈನಿಕರ ಹತ್ಯೆಗೆ ಮಾಸ್ಕೋ, ತಾಲಿಬಾನ್​ಗೆ​ ಕೊಡುಗೆ ನೀಡಿರಬಹುದು ಎಂದು ಆರೋಪಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.