ETV Bharat / international

ಈ ವರ್ಷ 60 ಮಿಲಿಯನ್ ಜನಕ್ಕೆ ಕಾಡಲಿದೆ ಬಡತನ: ವಿಶ್ವ ಬ್ಯಾಂಕ್

ಮಾರಕ ಕೊರೊನಾ ಹಾವಳಿಯಿಂದಾಗಿ ಈ ವರ್ಷ ವಿಶ್ವದಾದ್ಯಂತ 60 ಮಿಲಿಯನ್ ಜನರು ತೀವ್ರ ಬಡತನಕ್ಕೆ ಸಿಲುಕಬಹುದು. ಹೀಗಾಗಿ ಎಲ್ಲಾ ದೇಶಗಳು ದೀರ್ಘಕಾಲೀನ ಬೆಳವಣಿಗೆಯನ್ನು ಹೆಚ್ಚಿಸಲು ಸಮಗ್ರ ನೀತಿಗಳನ್ನು ಅನುಸರಿಸಬೇಕು ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ.

author img

By

Published : Jun 4, 2020, 1:07 PM IST

Adopt comprehensive polices, 60 mn could be pushed into poverty: World Bank
ಈ ವರ್ಷ 60 ಮಿಲಿಯನ್ ಜನ ಬಡತನಕ್ಕೆ ಸಿಲುಕುವ ಸಾಧ್ಯತೆಯಿದೆ: ವಿಶ್ವ ಬ್ಯಾಂಕ್

ವಾಷಿಂಗ್ಟನ್(ಅಮೆರಿಕಾ): ಕೊರೊನಾ ಹಾವಳಿಯಿಂದಾಗಿ ವಿಶ್ವದ ಆರ್ಥಿಕತೆಯ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಮಹಾಮಾರಿ ತಂದಿಟ್ಟಿರುವ ಬಿಕ್ಕಟ್ಟು ಹಲವು ಸಮಸ್ಯೆಗಳನ್ನು ತಂದಿಟ್ಟಿದೆ. ಈ ಮಧ್ಯೆ ವಿಶ್ವ ಬ್ಯಾಂಕ್​ ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದೆ.

ಹೌದು, ಈ ವರ್ಷ ವಿಶ್ವದಾದ್ಯಂತ 60 ಮಿಲಿಯನ್(6 ಕೋಟಿ) ಜನರು ತೀವ್ರ ಬಡತನಕ್ಕೆ ಸಿಲುಕಬಹುದು. ಹೀಗಾಗಿ ಎಲ್ಲಾ ದೇಶಗಳು ದೀರ್ಘಕಾಲೀನ ಬೆಳವಣಿಗೆಯನ್ನು ಹೆಚ್ಚಿಸಲು ಸಮಗ್ರ ನೀತಿಗಳನ್ನು ಅನುಸರಿಸಬೇಕು. ಆರೋಗ್ಯ ತುರ್ತು ಸೇವೆಗಳು ಮತ್ತು ಸುರಕ್ಷಿತ ಸಾರ್ವಜನಿಕ ಸೇವೆಗಳು ಲಭಿಸುವಂತೆ ಜಾಗರೂಕತೆ ವಹಿಸಬೇಕು ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ.

ಕೊರೊನಾವೈರಸ್ ಸಾಂಕ್ರಾಮಿಕದಿಂದಾದ ಆರ್ಥಿಕ ಕುಸಿತವು ಜಾಗತಿಕ ಆರ್ಥಿಕತೆಗೆ, ವಿಶೇಷವಾಗಿ ಬಡ ದೇಶಗಳಿಗೆ ತೀವ್ರ ಹೊಡೆತವನ್ನು ನೀಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಮುದಾಯವು ಆರೋಗ್ಯ ಬಿಕ್ಕಟ್ಟಿನ ಭೀಕರತೆ ಅನುಭವಿಸುವ ಸಾಧ್ಯತೆಗಳಿವೆ. ಈ ಬಿಕ್ಕಟ್ಟಿನಿಂದ ವೇಗವಾಗಿ ಚೇತರಿಸಿಕೊಳ್ಳಲು ಈಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಸಲಹೆಯನ್ನೂ ಕೂಡ ವರದಿಯಲ್ಲಿ ನೀಡಲಾಗಿದೆ.

ಆರೋಗ್ಯ ತುರ್ತುಸ್ಥಿತಿ ಮತ್ತು ಸುರಕ್ಷಿತ ಸಾರ್ವಜನಿಕ ಸೇವೆಗಳನ್ನು ಪರಿಹರಿಸಲು ಅಲ್ಪಾವಧಿಯ ಪ್ರಕ್ರಿಯೆ ಕ್ರಮಗಳು, ಆಡಳಿತ ಮತ್ತು ವ್ಯವಹಾರ ಪರಿಸರವನ್ನು ಸುಧಾರಿಸುವುದು, ಶಿಕ್ಷಣ ಮತ್ತು ಸಾರ್ವಜನಿಕ ಹೂಡಿಕೆಯ ಫಲಿತಾಂಶಗಳನ್ನು ವಿಸ್ತರಿಸುವುದು ಮತ್ತು ಸುಧಾರಿಸುವುದು ಸೇರಿದಂತೆ ದೀರ್ಘಕಾಲೀನ ಬೆಳವಣಿಗೆಯನ್ನು ಹೆಚ್ಚಿಸಲು ಸಮಗ್ರ ನೀತಿಗಳ ಅನುಸರಿಸುವಿಕೆ ಅಗತ್ಯವಾಗಿರುತ್ತದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.