ಅಕ್ರಾ : ಸಾಮಾನ್ಯವಾಗಿ ಊಟದಲ್ಲಿ ಅಪ್ಪಿತಪ್ಪಿ ಕೂದಲು, ಜಿರಳಿ, ಹಲ್ಲಿ ಹೀಗೆ ಸಣ್ಣಪುಟ್ಟ ವಸ್ತು, ಕ್ರಿಮಿ-ಕೀಟಗಳು ಬಿದ್ದಿರುವುದನ್ನು ಕೇಳಿದ್ದೇವೆ. ಆದರೆ, ಘಾನಾ ದೇಶದಲ್ಲಿ ಮಹಿಳೆಯೊಬ್ಬರಿಗೆ ಊಟದಲ್ಲಿ ಸಿಕ್ಕಿರುವ ವಸ್ತು ಆಕೆಯನ್ನು ಬೆಚ್ಚಿ ಬೀಳಿಸಿದೆ.
ಘಾನಾದ ಪ್ರಮುಖ ಆಹಾರವಾಗಿರುವ ತುವೋ ಝಾಪಿ ಎಂಬ ಮಾಂಸದೂಟದಲ್ಲಿ ಮಹಿಳೆಗೆ ಮಾನವನ ಶಿಶ್ನದಂತಹ ತುಂಡು ಸಿಕ್ಕಿರುವುದು ಈಕೆಯನ್ನು ಆಘಾತಕಕ್ಕೀಡು ಮಾಡಿದೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ತಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬೀದಿ ಸ್ಟಾಲ್‌ಗಳಲ್ಲಿ ಖರೀದಿಸಿದ ಆಹಾರ ಸೇವಿಸುವ ಮೊದಲು ಎಚ್ಚರಿಕೆಯಿಂದ ಪರಿಶೀಲಿಸುವಂತೆ ಈ ಮಹಿಲೆ ಜನರಲ್ಲಿ ವಿನಂತಿಸಿದ್ದಾಳೆ.
ಧಾನ್ಯ, ಮಾಂಸದಿಂದ ತಯಾರಿಸಿದ ತುವೋ ಛಾಪಿ ಆಹಾರವು ಬೀದಿ ಬದಿಯ ಆಹಾರ ಮಳಿಗೆಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ. ಈ ಮಹಿಳೆ ಬೀದಿ ಬದಿಯ ಹೋಟೆಲ್‌ನಲ್ಲಿ ಊಟ ಖರೀದಿಸಿದಾಗ ಮಾನವ ಶಿಶ್ನದಂತಹ ವಸ್ತುವನ್ನು ಪತ್ತೆಯಾಗಿದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸುವಂತೆ ಮಹಿಳೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Painless Death : ಒಂದೇ ನಿಮಿಷದಲ್ಲಿ ನೋವು ರಹಿತ ಸಾವು : ಸ್ವಿಟ್ಜರ್ಲ್ಯಾಂಡ್ನಲ್ಲಿ ಕಾನೂನು ಪ್ರಕ್ರಿಯೆ ಪೂರ್ಣ