ಮುಂಬೈ: ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ಇನ್ಸ್ಟಾದಲ್ಲಿ ಮಾಡಿರುವ ಪೋಸ್ಟ್ವೊಂದು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅರ್ಮಾನ್ ಹಾಕಿರುವ ತಮ್ಮಿಬ್ಬರು ಗರ್ಭಿಣಿ ಪತ್ನಿಯರ ಫೋಟೋದಿಂದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.
ಅರ್ಮಾನ್ ತಮ್ಮ ಪತ್ನಿಯರಾದ ಕೃತಿಕಾ ಮತ್ತು ಪಾಯಲ್ ಅವರೊಂದಿಗಿರುವ ಫೋಟೋ ಶೇರ್ ಮಾಡಿದ್ದಾರೆ. ಇಬ್ಬರೂ ಪತ್ನಿಯರು ತಮ್ಮ ಬಸುರಿ ಹೊಟ್ಟೆಯನ್ನು ಫೋಟೋದಲ್ಲಿ ತೋರಿಸಿರುವುದು ಕಾಣಿಸುತ್ತದೆ. ಈ ಕಾರಣದಿಂದ ಈಗ ಕೆಲ ನೆಟಿಜೆನ್ಗಳು ಅರ್ಮಾನ್ರನ್ನು ಟ್ರೋಲ್ ಮಾಡುತ್ತಿದ್ದಾರೆ.
- " class="align-text-top noRightClick twitterSection" data="
">
ಪಾಯಲ್‌ಗೆ ಹೋಲಿಸಿದರೆ ಅರ್ಮಾನ್ ತಮ್ಮ ಪತ್ನಿ ಕೃತಿಕಾ ಅವರೊಂದಿಗಿನ ಹೆಚ್ಚು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಹಲವರು ದೂರಿದ್ದಾರೆ.
ನೀವು ಯಾವಾಗಲೂ ಕೃತಿಕಾಗೆ ಏಕೆ ಹೆಚ್ಚು ಪ್ರೀತಿ ತೋರಿಸುತ್ತೀರಿ ಮತ್ತು ಪಾಯಲ್‌ಗೆ ಕಡಿಮೆ ಪ್ರೀತಿ ಏಕೆ ಎಂಬುದಕ್ಕೆ ನೀವು ಉತ್ತರಿಸುವುದಿಲ್ಲ ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ಯಾವಾಗಲೂ ನೀವು ಕೃತಿಕಾ ಅವರೊಂದಿಗೆ ಮಾತ್ರ ಏಕೆ ಚಿತ್ರಗಳನ್ನು ತೆಗೆದುಕೊಳ್ಳುತ್ತೀರಿ, ಪಾಯಲ್ ಅವರೊಂದಿಗೆ ಏಕೆ ತೆಗೆದುಕೊಳ್ಳುವುದಿಲ್ಲ ಎಂದು ಇನ್ನೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಬರೆದಿದ್ದಾರೆ. ಇಂಥವರನ್ನು ಮೂರ್ಖರು ಯಾಕೆ ಬೆಂಬಲಿಸುತ್ತಾರೆ ಎಂಬುದು ಗೊತ್ತಾಗದು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
- " class="align-text-top noRightClick twitterSection" data="
">
ಏತನ್ಮಧ್ಯೆ, ಇನ್ನೂ ಕೆಲವರು ಇದರ ಬಗ್ಗೆ ಹಾಸ್ಯ ಮಾಡಿದ್ದಾರೆ. ಕೆಲವು ಬಳಕೆದಾರರು ಹಾರ್ಟ್ ಎಮೋಜಿಗಳೊಂದಿಗೆ ಸಕಾರಾತ್ಮಕ ಕಮೆಂಟ್‌ಗಳನ್ನು ಸಹ ಹರಿಬಿಟ್ಟಿದ್ದಾರೆ. ಕೆಲವರು ಈ ಕುಟುಂಬವನ್ನು ಅಭಿನಂದಿಸಿದ್ದಾರೆ. ನಂತರ ಅರ್ಮಾನ್ ಪೋಸ್ಟ್‌ಗೆ ಕಮೆಂಟ್ ಮಾಡುವ ಆಯ್ಕೆಯನ್ನು ಸ್ಥಗಿತಗೊಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ 1.5 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ಮಲಿಕ್, 2011 ರಲ್ಲಿ ಪ್ರಿಯಾ ಅವರನ್ನು ವಿವಾಹವಾದರು ಮತ್ತು ಈ ದಾಂಪತ್ಯದಿಂದ ಚಿರಾಯು ಎಂಬ ಮಗನನ್ನು ಹೊಂದಿದ್ದಾರೆ. ನಂತರ ಅವರು 2018 ರಲ್ಲಿ ಕೃತಿಕಾ ಅವರನ್ನು ವಿವಾಹವಾದರು. ಕೃತಿಕಾ ಪಾಯಲ್ ಅವರ ಉತ್ತಮ ಸ್ನೇಹಿತೆ ಎನ್ನಲಾಗ್ತಿದೆ. ಅಂದಿನಿಂದ ಕುಟುಂಬದ ನಾಲ್ವರು ಒಟ್ಟಿಗೆ ವಾಸಿಸುತ್ತಿದ್ದಾರೆ. ಪಾಯಲ್ ಮತ್ತು ಕೃತಿಕಾ ಆಗಾಗ್ಗೆ ಒಟ್ಟಿಗೆ ಫೋಟೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ: 'ಅಭಿ-ಅವಿವಾ' ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ.. ಎಂಗೇಜ್ಮೆಂಟ್ ಸಂಭ್ರಮದ ಫೋಟೋಗಳನ್ನು ನೋಡಿ