ETV Bharat / entertainment

ಬಿಗ್​ ಬಾಸ್​ ವಿನ್ನರ್​ಗೆ ಬೆದರಿಕೆ ಕರೆ, ₹1 ಕೋಟಿಗೆ ಬೇಡಿಕೆ; ಆರೋಪಿ ಬಂಧಿಸಿದ ಪೊಲೀಸರು - ಈಟಿವಿ ಭಾರತ ಕನ್ನಡ

ಹಿಂದಿ ಬಿಗ್ ಬಾಸ್ ಒಟಿಟಿ 2ರ ವಿಜೇತ ಎಲ್ವಿಶ್ ಯಾದವ್​ಗೆ 1 ಕೋಟಿ ರೂಪಾಯಿ ನೀಡುವಂತೆ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Cyber city gurugram police elvish yadav
ಬಿಗ್​ ಬಾಸ್​ ವಿನ್ನರ್​ಗೆ ಬೆದರಿಕೆ ಕರೆ, ₹1 ಕೋಟಿಗೆ ಬೇಡಿಕೆ; ಆರೋಪಿಯನ್ನು ಬಂಧಿಸಿದ ಪೊಲೀಸರು
author img

By ETV Bharat Karnataka Team

Published : Oct 26, 2023, 1:11 PM IST

ಹಿಂದಿ ಬಿಗ್ ಬಾಸ್ ಒಟಿಟಿ 2ರ ವಿಜೇತ ಎಲ್ವಿಶ್ ಯಾದವ್​ (Elvish Yadav) ಬೆದರಿಕೆ ಕರೆಯೊಂದನ್ನು ಸ್ವೀಕರಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ತನಗೆ ಕರೆ ಮಾಡಿ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಎಲ್ವಿಶ್​ ಗುರುಗ್ರಾಮ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಣ ನೀಡದಿದ್ದರೆ ಕೊಲೆ ಬೆದರಿಕೆ: ಮಾಹಿತಿಯ ಪ್ರಕಾರ, ಎಲ್ವಿಶ್​ ಯಾದವ್​ ಅವರು ಸೈಬರ್​ ಸಿಟಿ ಗುರುಗ್ರಾಮ್​ನ ವಜೀರಾಬಾದ್​ನಲ್ಲಿ ವಾಸಿಸುತ್ತಿದ್ದು, ಅಕ್ಟೋಬರ್​ 25ರಂದು (ಬುಧವಾರ) ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆಯನ್ನು ಸ್ವೀಕರಿಸಿದ್ದಾರೆ. ಕರೆ ಮಾಡಿದ ದುಷ್ಕರ್ಮಿ ಆದಷ್ಟು ಬೇಗನೆ 1 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಕೇಳಿದಷ್ಟು ಹಣವನ್ನು ಕೊಡದೇ ಹೋದಲ್ಲಿ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಆರೋಪಿ ಬಂಧನ: ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆಯನ್ನು ಸ್ವೀಕರಿಸಿದ ತಕ್ಷಣವೇ ಎಲ್ವಿಶ್ ಯಾದವ್​ ಗುರುಗ್ರಾಮ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಹೈ ಪ್ರೊಫೈಲ್​ ಪ್ರಕರಣವಾಗಿದ್ದರಿಂದ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ತನಿಖೆ ಕೈಗೆತ್ತಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆರೋಪಿ ಯಾರು? ಯಾಕಾಗಿ ಬೆದರಿಕೆ? ಯಾವ ಗ್ಯಾಂಗ್​? ಎಂಬೆಲ್ಲಾ ವಿಚಾರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಇದನ್ನೂ ಓದಿ: Bigg Boss OTT 2 day 52 highlights: ಅಂತಿಮ ಹಂತದ ಹಣಾಹಣಿಯಲ್ಲಿ ಬಿಗ್​ಬಾಸ್​ ಸ್ಪರ್ಧಿಗಳು; ಫಿನಾಲೆಗೆ ಇನ್ನೊಂದೇ ವಾರ ಬಾಕಿ

ಸೋಷಿಯಲ್​ ಮೀಡಿಯಾ ಸ್ಟಾರ್​: ಎಲ್ವಿಶ್ ಯಾದವ್ ಹಿಂದಿ ಬಿಗ್ ಬಾಸ್ ಒಟಿಟಿ 2ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದರು. ನಂತರದಲ್ಲಿ ಉತ್ತಮವಾಗಿ ಸ್ಪರ್ಧಿಸಿ ವಿಜೇತರಾಗಿ ಹೊರಹೊಮ್ಮಿದರು. ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಕೈಯಿಂದ ಟ್ರೋಫಿಯನ್ನು ಪಡೆದುಕೊಂಡರು. ಎಲ್ವಿಶ್​ ಯಾದವ್​ ಸೋಷಿಯಲ್​ ಮೀಡಿಯಾ ವೇದಿಕೆಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 'ಎಲ್ವಿಶ್​ ಯಾದವ್​' ಹೆಸರಿನಲ್ಲಿ ಯೂಟ್ಯೂಬ್​ ಚಾನೆಲ್​ ಹೊಂದಿದ್ದು, 14.5 ಮಿಲಿಯನ್​ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ 15.7 ಮಿಲಿಯನ್​, ಫೇಸ್​ಬುಕ್​ನಲ್ಲಿ 4.5 ಮಿಲಿಯನ್​ ಮತ್ತು ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) 701K ಗಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಬಿಗ್​ ಬಾಸ್​ ಓಟಿಟಿ 2ರ ವಿಜೇತರಾದ ಬಳಿಕ ಗುರುಗ್ರಾಮ್‌ನ ತೌ ದೇವಿ ಲಾಲ್ ಸ್ಟೇಡಿಯಂನಲ್ಲಿ ಬಹುದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಪ್ರೋಗ್ರಾಮ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಕೂಡ ಭಾಗವಹಿಸಿ ಎಲ್ವಿಶ್​ ಯಾದವ್​ಗೆ ಶುಭಹಾರೈಸಿದ್ದರು. ಇದಾದ ನಂತರ ಇವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು.

ಇದನ್ನೂ ಓದಿ: ಬಿಗ್​​ ಬಾಸ್​​ ಟ್ರೋಫಿ ಹಿಂದಿರುಗಿಸಲು ಇಚ್ಛಿಸಿದ ವಿಜೇತ: ಇದರ ಹಿಂದಿದೆ ಬಲವಾದ ಕಾರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.