ETV Bharat / entertainment

ಸಿದ್ದಾರ್ಥ್​ ಶುಕ್ಲಾ ಹುಟ್ಟುಹಬ್ಬ: ಅಗಲಿದ ಗೆಳೆಯನ ಅಪರೂಪದ ಫೋಟೋ ಹಂಚಿಕೊಂಡ ಶೆಹನಾಝ್​​ ಗಿಲ್​ - ಬಾಲಿವುಡ್​ ಕಿರುತೆರೆ ನಟ ಸಿದ್ಧಾರ್ಥ್​ ಶುಕ್ಲಾ

ವ್ಯಕ್ತಿಯ ಅಗಲಿಕೆ ಬಳಿಕ ಆ ನೋವನ್ನು ಭರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಗೆಳೆಯನ ಅಗಲಿಕೆಯ ದುಃಖದಲ್ಲಿರುವ ನಟಿಗೆ ಅಭಿಮಾನಿಯೊಬ್ಬರು ಟ್ವಿಟ್​ ಮೂಲಕ ತಿಳಿಸಿದ್ದಾರೆ.

ಸಿದ್ದಾರ್ಥ್​ ಶುಕ್ಲಾ ಹುಟ್ಟುಹಬ್ಬ: ಅಗಲಿದ ಗೆಳೆಯನ ಅಪರೂಪದ ಫೋಟೋ ಹಂಚಿಕೊಂಡ ಶೆಹಾನಸ್​ ಗಿಲ್​
siddharth-shuklas-birthday-shehnaaz-gill-shared-a-rare-photo-of-his-friend
author img

By

Published : Dec 12, 2022, 10:58 AM IST

ಮುಂಬೈ: ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಿವುಡ್​ ಕಿರುತೆರೆ ನಟ ಸಿದ್ಧಾರ್ಥ್​ ಶುಕ್ಲಾ ಜನ್ಮ ದಿನವಿಂದು. ಅವರ ಅಗಲಿಕೆಯ ನಡುವೆಯೂ ನಟನ ಹುಟ್ಟುಹಬ್ಬವನ್ನು ಗೆಳೆಯರು ಮತ್ತು ಗೆಳತಿ ಶೆಹನಾಝ್​​ ಗಿಲ್​ ಸ್ಮರಿಸಿದ್ದಾರೆ. ಸಿದ್ಧಾರ್ಥ್​ ಶುಕ್ಲಾ ಫೋಟೋ ಹಂಚಿಕೊಂಡು ಭಾವನಾತ್ಮಕ ನುಡಿಗಳನ್ನು ಬರೆದಿದ್ದಾರೆ.

'ನಾನು ನಿನ್ನನ್ನು ಮತ್ತೆ ನೋಡುತ್ತೇನೆ'. 12 12ಎಂದು ಅವರ ಹುಟ್ಟುಹಬ್ಬದಂದು ನಗುಮುಖದ ಫೋಟೋವನ್ನು ಗಿಲ್​ ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಮತ್ತು ಉದ್ಯಮದ ಗೆಳೆಯರು ಕೂಡ ಈ ಫೋಟೋಗೆ ಭಾವನಾತ್ಮಕ ಸಂದೇಶ ತಿಳಿಸಿದ್ದಾರೆ. ನಟ ಕ್ಷಮೆರಾ ಶಾ ಕೂಡ ಇದಕ್ಕೆ ಸಂದೇಶ ತಿಳಿಸಿದ್ದು, ಆತ ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತಾನೆ ಎಂದಿದ್ದಾರೆ.

ನನಗೆ ಇನ್ನೂ ಕೂಡ ಆತ ಮೃತಪಟ್ಟಿದ್ದಾನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಬಿಗ್​​ಬಾಸ್​ 13ರಲ್ಲಿ ಅರ್ಧ ಪ್ಯಾಂಟ್​ ತೊಟ್ಟು ನಮ್ಮನ್ನು ಮನರಂಜಿಸುತ್ತಿದ್ದ. ಶುಕ್ಲಾನೇ ನನ್ನ ಕಣ್ಣ ಮುಂದೆ ಬರುತ್ತಾರೆ ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ.

ವ್ಯಕ್ತಿಯ ಅಗಲಿಕೆ ಬಳಿಕ ಆ ನೋವನ್ನು ಭರಿಸಲು ಸಾಧ್ಯವಾಗುವುದಿಲ್ಲ ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ. ದುಬೈನಲ್ಲಿ ಇತ್ತೀಚೆಗೆ ನಡೆದ ಫಿಲ್ಮ್​ಫೇರ್​ ಮಿಡಲ್​ ಈಸ್ಟ್​ ಅಚಿವರ್ಸ್​ ನೈಟ್​ ಪ್ರಶಸ್ತಿ ಪಡೆಯುವಾಗ ಶೆಹನಾಸ್​ ತಮ್ಮ ಪ್ರಶಸ್ತಿಯನ್ನು ಶುಕ್ಲಾಗೆ ಸಮರ್ಪಿಸಿದ್ದರು. ನಾನು ಒಬ್ಬರಿಗೆ ಧನ್ಯವಾದ ಹೇಳಬೇಕು. ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದ. ನಾನು ಇಂದು ಏನಾಗಿದ್ದೇನೆ. ಅದು ನಿಮ್ಮಿಂದ. ಇದು ಸಿದ್ದಾರ್ಥ್​ ಶುಕ್ಲಾಗೆ ಎಂದಿದ್ದರು.

ಬಿಗ್​ ಬಾಸ್​ ಮನೆಯಲ್ಲಿ ಒಟ್ಟಿಗಿದ್ದ ಶೆಹನಾಸ್ ಮತ್ತು ಸಿದ್ಧಾರ್ಥ್​ ನಡುವೆ ಆತ್ಮೀಯ ಸಂಬಂಧ ಇತ್ತು. ಆದರೆ, ಅಧಿಕೃತವಾಗಿ ಇದನ್ನು ಅವರು ಬಯಲು ಮಾಡಿರಲಿಲ್ಲ. ಸಿದ್ದಾರ್ಥ್​ 2020ರಲ್ಲಿ ಬಿಗ್​ಬಾಸ್​ ಪ್ರಶಸ್ತಿ ಗೆದ್ದ ಬಳಿಕ ಸಿದ್​ನಾಸ್​​ ಎಂಬ ಹ್ಯಾಷ್​ಟ್ಯಾಗ್ ಮೂಲಕ ಅವರ ಅಭಿಮಾನಿಗಳು ಸಂಭ್ರಮಿಸಿದ್ದರು. ಇಂದು ಸಿದ್ಧಾರ್ಥ್​ ಬದುಕಿದ್ದರೆ, ಅವರಿಗೆ 41ನೇ ಹುಟ್ಟುಹಬ್ಬ ಆಚರಿಸುತ್ತಿದ್ದರು.

ಇದನ್ನೂ ಓದಿ: 2022ರಲ್ಲಿ ಬಾಲಿವುಡ್​​ ಕ್ಷೇತ್ರವನ್ನು ಬೆಚ್ಚಿ ಬೀಳಿಸಿದ ಘಟನೆಗಳ ಮೆಲುಕು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.