ETV Bharat / entertainment

ಬಿಗ್​ ಬಾಸ್​ ಮನೆಗೆ ಬ್ರಹ್ಮಾಂಡ ಗುರೂಜಿ​ ಪ್ರವೇಶ; ಮನೆ ಮಂದಿಗೆ ಅಚ್ಚರಿ - etv bharat kannada

Brahmanda Guruji in Bigg Boss house: ಏಳನೇ ವಾರದ ಆರಂಭದಲ್ಲೇ ಬಿಗ್​ ಬಾಸ್​ ಮನೆಗೆ ಬ್ರಹ್ಮಾಂಡ ಗುರೂಜಿ ಎಂಟ್ರಿ ಕೊಟ್ಟಿದ್ದಾರೆ.

Brahmanda Guruji in Bigg Boss
ಬಿಗ್​ ಬಾಸ್​ ಮನೆಗೆ ಬ್ರಹ್ಮಾಂಡ ಗುರೂಜಿ​ ಎಂಟ್ರಿ; ಮನೆ ಮಂದಿಗೆ ಅಚ್ಚರಿ!
author img

By ETV Bharat Karnataka Team

Published : Nov 20, 2023, 10:51 AM IST

ಕಿಚ್ಚ ಸುದೀಪ್​ ನಡೆಸಿಕೊಡುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್​ ಬಾಸ್​'. ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ, ಸ್ನೇಹ, ಮನಸ್ತಾಪಗಳ ಮೂಲಕ ಸಿಕ್ಕಾಪಟ್ಟೆ ಮನರಂಜನೆ ಸಲುವಾಗಿ ಶೋ ಮನೆಮಾತಾಗುತ್ತಿದೆ. ಕಾರ್ಯಕ್ರಮ ಶುರುವಾಗಿ ಆರು ವಾರಗಳು ಉರುಳಿವೆ. ಇಂದಿನಿಂದ ಏಳನೇ ವಾರ ಶುರುವಾಗಿದ್ದು, ಸ್ಪರ್ಧೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಈ ವಾರದ ಆರಂಭದಲ್ಲೇ 'ಬಿಗ್​ ಬಾಸ್​' ಮನೆಗೆ ಬ್ರಹ್ಮಾಂಡ ಗುರೂಜಿ ಆಗಮನವಾಗಿದೆ.

ಇಂದು ಕಲರ್ಸ್​ ಕನ್ನಡ ವಾಹಿನಿ 'ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಾಂಡ ಗುರೂಜಿ' ಎಂಬ ಶೀರ್ಷಿಕೆಯೊಂದಿಕೆ ಹೊಸ ಪ್ರೋಮೋವನ್ನು ಹಂಚಿಕೊಂಡಿದೆ. ಮನೆಗೆ ಗುರೂಜಿ ಎಂಟ್ರಿ ಕೊಟ್ಟಿರುವುದು ಸ್ಪರ್ಧಿಗಳಿಗೆ ಅಚ್ಚರಿ ತಂದಿದೆ. ದೊಡ್ಮನೆಗೆ ಪ್ರವೇಶಿಸುತ್ತಿದ್ದಂತೆ ತಮ್ಮ ಟ್ರೇಡ್​ಮಾರ್ಕ್ ಡೈಲಾಗ್‌ಗಳನ್ನೆಲ್ಲಾ ಹೇಳಿದ್ದಾರೆ. ಕ್ಯಾಮರಾ ಮುಂದೆ ಬಂದು ಬಿಗ್​ ಬಾಸ್​ಗೆ ಆರ್ಡರ್​ ಮಾಡುತ್ತಿದ್ದಾರೆ. ಅಂತೂ ಇಂದಿನ ಸಂಚಿಕೆ ಮಾತ್ರ ಕುತೂಹಲ ಮೂಡಿಸುವಂತಿದೆ.

ಒಂದೇ ವಾರ ಇಬ್ಬರು ಎಲಿಮಿನೇಟ್: ಆರನೇ ವಾರದ ಕಿಚ್ಚನ ಪಂಚಾಯತಿಯಲ್ಲಿ ಮನೆಯಿಂದ ಇಬ್ಬರು ಸದಸ್ಯರು ಹೊರ ಹೋಗಿದ್ದಾರೆ. ಐದನೇ ವಾರದಲ್ಲಿ ವರ್ತೂರು ಸಂತೋಷ್​ ಅವರ ಕಾರಣಕ್ಕಾಗಿ ಎಲಿಮಿನೇಷನ್​ ನಡೆದಿರಲಿಲ್ಲ. ಹಾಗಾಗಿ ಆರನೇ ವಾರ ಇಶಾನಿ ಮತ್ತು ಭಾಗ್ಯಶ್ರೀ ಮನೆಯಿಂದ ಹೊರಹೋಗಿದ್ದಾರೆ. ಈ ವಾರದಿಂದ ಇವರಿಬ್ಬರ ಅನುಪಸ್ಥಿತಿಯಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳು ಮನೆಯಲ್ಲಿ ಮುಂದುವರಿಯಲಿದ್ದಾರೆ. ಮನೆ ಸದಸ್ಯರ ಪೈಕಿ ಇಬ್ಬರು ಕಡಿಮೆಯಾಗಿರುವುದು ಸ್ಪರ್ಧೆಯನ್ನು ಇನ್ನಷ್ಟು ಚುರುಕುಗೊಳಿಸಿದೆ.

ಬಿಗ್​ ಬಾಸ್ ಮನೆಯೊಳಗೆ ಇಲ್ಲಿಯವರೆಗೆ ಶಾಸಕ ಪ್ರದೀಪ್​ ಈಶ್ವರ್​, ಬಿಗ್​ ಬಾಸ್​ ಸೀಸನ್​ 4ರ ವಿಜೇತ ಪ್ರಥಮ್​, ನಟಿ ತಾರಾ ಅನುರಾಧ, 'ಭಾಗ್ಯಲಕ್ಷೀ' ಧಾರಾವಾಹಿ ಖ್ಯಾತಿಯ ನಟಿ ಸುಷ್ಮಾ ಕೆ.ರಾವ್​ ಅತಿಥಿಗಳಾಗಿ ಬಂದಿದ್ದರು. ಇವರೆಲ್ಲಾ ಸ್ಪರ್ಧಿಗಳಿಗೆ ಟಾಸ್ಕ್​ ಜೊತೆಗೆ ಸಲಹೆ ನೀಡಿದ್ದರು. ನೋವಿನಲ್ಲಿದ್ದ ಮನೆ ಮಂದಿಯನ್ನು ಸಂತೈಸಲು ಬಂದಿದ್ದರು.

ಆದರೆ, ಇದೀಗ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಯಾಕಾಗಿ ಬಂದಿದ್ದಾರೆ? ಬಿಗ್​ ಬಾಸ್​ ಸ್ಪರ್ಧಿಗಳಿಗೆ ಇವರಿಂದ ಸಲಹೆ ಸಿಗುತ್ತಾ? ಸ್ಪರ್ಧಿಯಾಗಿ ಮನೆಯಲ್ಲೇ ಉಳಿಯುತ್ತಾರಾ? ಎಂಬೆಲ್ಲಾ ಕುತೂಹಲಕ್ಕೆ ಉತ್ತರ ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ ನೇರ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ಕನ್ನಡವನ್ನು ವೀಕ್ಷಿಸಬಹುದಾಗಿದೆ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರ ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಭಾಗ್ಯಶ್ರೀ ಔಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.