ETV Bharat / entertainment

ಬಿಗ್​ ಬಾಸ್​: ಮನೆಯವರಿಂದ 'ಕಳಪೆ' ಪಟ್ಟ ಸ್ವೀಕರಿಸಿ ಜೈಲಿಗೆ ಹೋದ ಕಾರ್ತಿಕ್​ - ವಿನಯ್​

BBK10: ಬಿಗ್​ ಬಾಸ್​ ಸ್ಪರ್ಧಿಗಳು ಈ ವಾರದ 'ಕಳಪೆ' ಪಟ್ಟವನ್ನು ಕಾರ್ತಿಕ್​ಗೆ ನೀಡಿದ್ದಾರೆ.

Bigg Boss
ಬಿಗ್​ ಬಾಸ್​: ಮನೆಯವರಿಂದ 'ಕಳಪೆ' ಪಟ್ಟ ಸ್ವೀಕರಿಸಿ ಜೈಲಿಗೆ ಹೋದ ಕಾರ್ತಿಕ್​
author img

By ETV Bharat Karnataka Team

Published : Dec 8, 2023, 5:57 PM IST

ಬಿಗ್​ ಬಾಸ್​ ಮನೆ ಸದ್ಯ ರಣರಂಗವಾಗಿದೆ. ವಾರವಿಡೀ ನಡೆದ ರಕ್ಕಸರು ಮತ್ತು ಗಂಧರ್ವರ ಕಾಳಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ವೀಕೆಂಡ್​ ಎಪಿಸೋಡಿನ ಹೊಸ್ತಿಲಲ್ಲಿ ಎಲ್ಲಾ ಸ್ಪರ್ಧಿಗಳೂ ನಿಂತಿದ್ದಾರೆ. ಈ ನಡುವೆ ಪ್ರತಿ ವಾರದ ವಾಡಿಕೆಯಂತೆ ಕಳಪೆ ಮತ್ತು ಉತ್ತಮ ಪಟ್ಟಗಳನ್ನು ಯಾರಿಗೆ ನೀಡಬೇಕು ಎಂದು ಮನೆಯ ಸದಸ್ಯರು ನಿರ್ಧರಿಸಿದ್ದಾರೆ. ಈ ಕುರಿತಾದ ಪ್ರೋಮೋವನ್ನು ಜಿಯೋಸಿನಿಮಾ ಬಿಡುಗಡೆ ಮಾಡಿದೆ.

ಸ್ನೇಹಿತ್​, ನಮ್ರತಾ, ವಿನಯ್​ ಸೇರಿದಂತೆ ಬಹುತೇಕ ಸದಸ್ಯರು ಕಳಪೆ ಪಟ್ಟವನ್ನು ಕಾರ್ತಿಕ್​ಗೆ ನೀಡಿದ್ದಾರೆ. ಅವರು ನೀಡಿದ ಕಾರಣ, ಕಾರ್ತಿಕ್​ ಚಪ್ಪಲಿಯಲ್ಲಿ ಹೊಡೆಯಲು ಮುಂದಾಗಿದ್ದು ಎಂಬುದಾಗಿದೆ. ವಿನಯ್​ ಅವರಂತೂ, ಈ ವಾರ ಖಂಡಿತವಾಗಿಯೂ ನೀನು ಕಳಪೆ ಪಟ್ಟಕ್ಕೆ ಅರ್ಹ ಎಂದು ನೇರವಾಗಿಯೇ ಹೇಳಿ ಕಳಪೆ ಪಟ್ಟ ನೀಡಿದ್ದಾರೆ. ಅದನ್ನು ಕಾರ್ತಿಕ್​ ಕೈ ಮುಗಿದು ನಗುನಗುತ್ತಲೇ ಸ್ವೀಕರಿಸಿದ್ದಾರೆ.

ಜೈಲು ಉಡುಗೆ ತೊಟ್ಟ ಕಾರ್ತಿಕ್‌, 'ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ' ಎಂದು ಹೇಳಿ ಜೈಲು ಕೊಠಡಿಯೊಳಗೆ ಇಳಿದಿದ್ದಾರೆ. ವರ್ತೂರು ಮತ್ತು ತನಿಷಾ ಇಬ್ಬರೂ ಸೇರಿ ಕಾರ್ತಿಕ್ ಅವರನ್ನು ಜೈಲಿನ ಬಾಗಿಲಿಗೆ ಬಂದು ಬೀಳ್ಕೊಟ್ಟಿದ್ದಾರೆ. ಮತ್ತೊಂದೆಡೆ, ಮನೆಯ ಕ್ಯಾಪ್ಟನ್​ ಆಗಿರುವ ಸ್ನೇಹಿತ್​ ತಮ್ಮ ಸ್ನೇಹಿತರನ್ನೇ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ.

ಈ ವಾರ ಕ್ಯಾಪ್ಟನ್ ಆಗಿರುವ ಸ್ನೇಹಿತ್‌ ವಿಶೇಷ ಅಧಿಕಾರವನ್ನು ಪಡೆದಿದ್ದರು. ಆ ಅಧಿಕಾರದ ಪ್ರಕಾರ, ಮನೆಯೊಳಗಿನ ಹಲವು ಸಂಗತಿಗಳ ಬಗ್ಗೆ ಅವರ ನಿರ್ಧಾರವೇ ಅಂತಿಮವಾಗಿತ್ತು. ವಾರಾಂತ್ಯದಲ್ಲಿ ಬಿಗ್‌ ಬಾಸ್‌, ಸ್ನೇಹಿತ್‌ಗೆ ಮತ್ತೊಂದು ಜವಾಬ್ದಾರಿ ವಹಿಸಿದ್ದರು. ಮನೆಯ ಸದಸ್ಯರ ಪೈಕಿ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸಲು ಅನರ್ಹರಾದ ಸದಸ್ಯರನ್ನು ಸೂಚಿಸಿ ಎಂದು ಬಿಗ್‌ ಬಾಸ್ ಕೇಳಿದ್ದಾರೆ. ಇದಕ್ಕೆ ಎಲ್ಲರೂ ಅಚ್ಚರಿ ಪಡುವಂತೆ ಸ್ನೇಹಿತ್ ಅವರು ನಮ್ರತಾ ಮತ್ತು ವಿನಯ್ ಅವರನ್ನು ನಾಮಿನೇಟ್​ ಮಾಡಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ.

ವಿನಯ್ ಮತ್ತು ನಮ್ರತಾ ಇಬ್ಬರೂ ಉಸ್ತುವಾರಿಯಾದ ನನ್ನ ಮಾತುಗಳನ್ನು ಮೀರಿದ್ದಾರೆ ಎಂದು ಸ್ನೇಹಿತ್​ ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ. ತಮ್ಮನ್ನು ಖಂಡಿತ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವುದಿಲ್ಲ ಎಂದೇ ನಂಬಿದ್ದ ವಿನಯ್‌ ಮತ್ತು ನಮ್ರತಾ ಇಬ್ಬರಿಗೂ ಸ್ನೇಹಿತ್‌ ಮಾತು ಕೇಳಿ ಆಘಾತವಾಗಿದೆ. ಇವ್ನೆಂತಾ ಫ್ರೆಂಡ್‌ ಗುರು ಎಂದು ನಮ್ರತಾ ಕಣ್ಣಲ್ಲಿ ನೀರು ತುಂಬಿದೆ.

ವಾರಾಂತ್ಯದ ಕಿಚ್ಚನ ಪಂಚಾಯ್ತಿಯಲ್ಲಿ ಈ ವಾರದ ಆಟದ ಬಗ್ಗೆ ಚರ್ಚೆಗಳು ಆಗಲಿಕ್ಕಿವೆ. ಅದಕ್ಕೂ ಮುನ್ನೆ ಈ ವಾರ 'ಉತ್ತಮ' ಪಟ್ಟ ಗಿಟ್ಟಿಸಿಕೊಳ್ಳುವ ಸದಸ್ಯ ಯಾರು? ವಾರವಿಡೀ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾವ ತಂಡ ಗೆದ್ದಿದೆ? ಯಾರು ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: ಬಿಗ್​ ಬಾಸ್​: 'ಆನೆಯನ್ನು ಪಳಗಿಸುವ ಮಾವುತ' ಅಂತಿದ್ದ ಅವಿನಾಶ್​ ಮೇಕೆಯಾದ್ರು ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.