ETV Bharat / entertainment

ಯೋಗರಾಜ್​ ಭಟ್​ 'ಗರಡಿ' ಸಿನಿಮಾಕ್ಕಾಗಿ ಆ್ಯಂಕರ್​ ಆದ ಚಿಕ್ಕಣ್ಣ - etv bharat kannada

'ಉಪಾಧ್ಯಕ್ಷ' ಸಿನಿಮಾದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಚಿಕ್ಕಣ್ಣ 'ಗರಡಿ' ಸಿನಿಮಾಕ್ಕಾಗಿ ಆ್ಯಂಕರ್​ ಆಗಿದ್ದಾರೆ.

Yogaraj Bhat garadi movie trailer will be release on november 1
ಯೋಗರಾಜ್​ ಭಟ್​ 'ಗರಡಿ' ಸಿನಿಮಾಕ್ಕಾಗಿ ಆ್ಯಂಕರ್​ ಆದ ಚಿಕ್ಕಣ್ಣ
author img

By ETV Bharat Karnataka Team

Published : Oct 31, 2023, 12:33 PM IST

ಯೋಗರಾಜ್​ ಭಟ್​ 'ಗರಡಿ' ಸಿನಿಮಾಕ್ಕಾಗಿ ಆ್ಯಂಕರ್​ ಆದ ಚಿಕ್ಕಣ್ಣ

ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಕೌರವ' ಖ್ಯಾತಿಯ ಬಿ.ಸಿ ಪಾಟೀಲ್ ಹಾಗೂ ಸೂರ್ಯ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಗರಡಿ'. ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಚಾರವಾಗಿ ಟಾಕ್​ ಆಗುತ್ತಿದೆ. ಇದೀಗ ಚಿತ್ರತಂಡದೊಂದಿಗೆ ನಟ ಚಿಕ್ಕಣ್ಣ ಕೂಡ ಸೇರಿಕೊಂಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅವರು ಗರಡಿ ಸಿನಿಮಾಕ್ಕಾಗಿ ಆ್ಯಂಕರ್​ ಆಗಿದ್ದಾರೆ. ಸದ್ಯ ಗರಡಿ ಚಿತ್ರದ ಪ್ರಮೋಷನ್​ ವಿಡಿಯೋದಲ್ಲಿ ಸುದ್ದಿ ನಿರೂಪಕರಾಗಿ ಚಿಕ್ಕಣ್ಣ ಗಮನ ಸೆಳೆದಿದ್ದು, ವಿಡಿಯೋಗಳು ವೈರಲ್​ ಆಗುತ್ತಿವೆ.

ನಮ್ಮ ದೇಶಿ ಕುಸ್ತಿಯ ಬಗ್ಗೆ ಕಥೆಯನ್ನು ಒಳಗೊಂಡಿರುವ ಗರಡಿ ಚಿತ್ರದ ವಿಶೇಷತೆಗಳ ಬಗ್ಗೆ ನಟ ಚಿಕ್ಕಣ್ಣ ತಮ್ಮ ನಿರೂಪಣೆ ಶೈಲಿಯಿಂದ ಗಮನ ಸೆಳೆದಿದ್ದಾರೆ. ಇದೇ ನವೆಂಬರ್ 1ರಂದು ಗರಡಿ ಚಿತ್ರದ‌ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇದರ ಜೊತೆಗೆ, ಗೆಳೆಯ ಸೂರ್ಯ ಈ ಚಿತ್ರಕ್ಕಾಗಿ ಕುಸ್ತಿ ಪಾತ್ರಕ್ಕೆ ಎಷ್ಟು ಸಿದ್ಧತೆ ಮಾಡಿಕೊಂಡಿದ್ದರು ಎಂದೆಲ್ಲಾ ತಮ್ಮದೇ ಶೈಲಿಯಲ್ಲಿ ಮಾತನಾಡಿದ್ದಾರೆ.

ಇನ್ನು, ಮಾಜಿ ಸಚಿವ ಬಿ ಸಿ ಪಾಟೀಲ್​ಗೆ ಕೌರವ ಎಂಬ ಬಿರುದು ಯಾಕೆ ಬಂತು ಎಂಬುದನ್ನು ನಟ ಚಿಕ್ಕಣ್ಣ ತಮ್ಮದೇ ಮಾತುಗಳಲ್ಲಿ ಬ್ರೇಕಿಂಗ್​ ನ್ಯೂಸ್​ ರೀತಿ ಹೇಳಿದ್ದಾರೆ. ಬಿ ಸಿ ಪಾಟೀಲ್ ತಮ್ಮ ರಾಜಕೀಯ ಬಿಡುವು ಮಾಡಿಕೊಂಡು ಬಹಳ ಇಷ್ಟ ಪಟ್ಟು ಅಭಿನಯಿಸಿರುವ ಸಿನಿಮಾವಿದು. ಈ ಹಿನ್ನೆಲೆಯಲ್ಲಿ ಈ ಚಿತ್ರದ ಟ್ರೈಲರ್ ಕಾರ್ಯಕ್ರಮವನ್ನು ಬಿ ಸಿ ಪಾಟೀಲ್ ಅವರು ತಮ್ಮ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮಾಡಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಬಿ.‌ಸಿ ಪಾಟೀಲ್ 'ಗರಡಿ' ಚಿತ್ರಕ್ಕೆ ಚಾಲೆಂಜಿಂಗ್​ ಸ್ಟಾರ್​ ಸಾಥ್ - ಟ್ರೇಲರ್​ ಅನಾವರಣಗೊಳಿಸಲಿದ್ದಾರೆ ದರ್ಶನ್

ಗರಡಿ ಚಿತ್ರದ ಹೆಸರು ಹೇಳುವ ಹಾಗೆಯೇ ಗರಡಿ ಪೈಲ್ವಾನ್​ಗಳ ಬಗ್ಗೆ ಸಾಕಷ್ಟು ಅಧ್ಯಯನ ಕೈಗೊಂಡು ಮಾಡುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ನಟ‌ ಸೂರ್ಯ, ಸೋನಾಲ್ ಮಾಂಟೆರೊ, ಕೌರವ ಬಿ ಸಿ ಪಾಟೀಲ್ ಅಲ್ಲದೇ, ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್, ನಯನ ಮುಂತಾದವರು ಇದ್ದಾರೆ. ನಟಿ ನಿಶ್ವಿಕಾ ನಾಯ್ಡು ಕೂಡ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಇತ್ತೀಚಿಗೆ ಗರಡಿ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೆ ಯು/ಎ ಸರ್ಟಿಫಿಕೇಟ್ ನೀಡಿದೆ‌. ಚಿತ್ರದಲ್ಲಿ ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿದ್ದಾರೆ. ಸೃಷ್ಟಿ ಪಾಟೀಲ್ ಕಾರ್ಯಕಾರಿ
ನಿರ್ಮಾಪಕಿಯಾಗಿದ್ದಾರೆ. ಗರಡಿ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಾಜ್ಯೋತ್ಸವದ ದಿನ ಗರಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, ನವೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ನವೆಂಬರ್ 1ರಂದು ರಾಣೆಬೆನ್ನೂರು ತಾಲೂಕು ಕ್ರೀಡಾಂಗಣದಲ್ಲಿ 'ಗರಡಿ' ಟ್ರೇಲರ್ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.