ಮುಂಬೈ, ಮಹಾರಾಷ್ಟ್ರ: ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ತಮ್ಮ RRR ಚಿತ್ರದ ಮೂಲಕ ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸುತ್ತಿದ್ದಾರೆ. ಒಂದೆಡೆ, ಆಸ್ಕರ್ ಪ್ರಶಸ್ತಿಗಾಗಿ (ಮಾರ್ಚ್ 13) ದೇಶವಾಸಿಗಳು ಕಾಯುತ್ತಿದ್ದಾರೆ. ಏಕೆಂದರೆ ಅದರ 'ನಾಟು ನಾಟು' ಹಾಡು ನಾಮನಿರ್ದೇಶನಗೊಂಡಿದೆ. ಭಾರತವು ಎಸ್ಎಸ್ ರಾಜಮೌಳಿ ಅವರ ನಿರ್ದೇಶದ ಆರ್ಆರ್ಆರ್ ಚಿತ್ರದ ಸೂಪರ್ ಹಿಟ್ ಹಾಡು ನಾಟು ನಾಟು ಮೇಲೆ ಭರವಸೆ ಇಡುತ್ತಿದೆ. ರಾಜಮೌಳಿ ಅವರು ಆಸ್ಕರ್ ಟ್ರೋಫಿಯನ್ನು ತಮ್ಮ ಕೈಯಲ್ಲಿ ಹಿಡಿದಿಟ್ಟುಕೊಳ್ಳುತ್ತಾರಾ ಎಂದು ಚಿತ್ರರಂಗ ಮಾತನಾಡಿಕೊಳ್ಳುತ್ತಿದೆ.
ಐತಿಹಾಸಿಕ ಚಿತ್ರಗಳ ನಿರ್ದೇಶಕರಾದ ರಾಜಮೌಳಿ ವೈವಿಧ್ಯತೆಗೆ ಹೆಸರುವಾಸಿಯಾದ ಭಾರತದ ಸಾಂಸ್ಕೃತಿಕ ರಂಗದಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು ಮಾಡಿಕೊಂಡಿದ್ದಾರೆ. ವಿಶೇಷವಾಗಿ ಸಾಂಕ್ರಾಮಿಕ ರೋಗದ ನಂತರ ಎಲ್ಲ ವರ್ಗದ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಎಳೆಯುವುದು ಸುಲಭದ ಕೆಲಸವಲ್ಲ. ಆದರೆ, ರಾಜಮೌಳಿ ಅವರು 'RRR' ಚಿತ್ರದ ಮೂಲಕ ಆ ಸಾಧನೆ ಮಾಡಿದ್ದಾರೆ. 'ನಾಟು ನಾಟು' ಹಾಡು ಅತ್ಯುತ್ತಮ ಮೂಲ ಸ್ಕೋರ್ ವಿಭಾಗದಲ್ಲಿ 95ನೇ ಅಕಾಡೆಮಿ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿದೆ. ಈ ಹಾಡು ಹೆವಿವೇಯ್ಟ್‌ಗಳಾದ ಲೇಡಿ ಗಾಗಾ ಮತ್ತು ರಿಹಾನ್ನಾ ವಿರುದ್ಧ ಹೋರಾಟ ನಡೆಸುತ್ತಿದೆ.
ಆಸ್ಕರ್‌ಗೆ ಪ್ರವೇಶಿಸುವ ಮೊದಲು ಈ ಹಾಡು ಜಾಗತಿಕ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜನವರಿಯಲ್ಲಿ, 'ನಾಟು ನಾಟು' ಗೋಲ್ಡನ್ ಗ್ಲೋಬ್ಸ್ ಅನ್ನು 'ಅತ್ಯುತ್ತಮ ಮೂಲ ಹಾಡು' ವಿಭಾಗದಲ್ಲಿ ಗೆದ್ದುಕೊಂಡಿತು. ಐದು ದಿನಗಳ ನಂತರ, 'RRR' 28ನೇ ಆವೃತ್ತಿಯ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಒಂದು ಅತ್ಯುತ್ತಮ ಹಾಡು ಮತ್ತು ಇನ್ನೊಂದು 'ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ'. ಅಂದಿನಿಂದ, 'RRR' ಮತ್ತು 'ನಾಟು ನಾಟು' ಜಾಗತಿಕ ಚಾರ್ಟ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಎರಡು ದಿನಗಳ ಹಿಂದೆ, 'RRR' ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್‌ನಿಂದ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ಈ ಚಿತ್ರವು 'ಅತ್ಯುತ್ತಮ ಸಾಹಸ ಚಿತ್ರ', 'ಅತ್ಯುತ್ತಮ ಸಾಹಸಗಳು' ಮತ್ತು 'ಅತ್ಯುತ್ತಮ ಮೂಲ ಗೀತೆ' ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಜೇಮ್ಸ್ ಕ್ಯಾಮರೂನ್ ಮತ್ತು ಸ್ಟೀವನ್ ಸ್ಪೀಲ್ಬರ್ಗ್ ಅವರಂತಹ ದಿಗ್ಗಜರು ರಾಜಮೌಳಿ ಅವರ 'RRR' ಗಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ರಾಜಮೌಳಿ ಬಗ್ಗೆ ಚಿತ್ರ ವಿಮರ್ಶಕರು ಮಾತನಾಡಿದ್ದು, ಅವರು ಸ್ವಂತ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರು ಕಾಲ್ಪನಿಕ ಕಥೆಗಳೊಂದಿಗೆ ಸತ್ಯಗಳನ್ನು ಸಂಯೋಜಿಸುತ್ತಾರೆ. ಅವರ ಚಲನಚಿತ್ರಗಳು ಅವರ ಸಾಮಾಜಿಕ - ಆರ್ಥಿಕ ಅಡೆತಡೆಗಳನ್ನು ಲೆಕ್ಕಿಸದೇ ಜನರನ್ನು ಸ್ಪರ್ಶಿಸುವ ಭಾರತೀಯತೆಯ ಬಗ್ಗೆ ಮಾತನಾಡುತ್ತವೆ. ಅವರ ಚಲನಚಿತ್ರಗಳ ಸಂಗೀತವು ಭಾರತೀಯ ಸಂಪ್ರದಾಯದಲ್ಲಿ ಮುಳುಗಿದೆ. ಈ ಅಂಶಗಳ ಹೊರತಾಗಿ, ರಾಜಮೌಳಿ ಮತ್ತು ಅವರ ತಂಡವು ಆಸ್ಕರ್‌ಗಾಗಿ ಭಾರಿ ಪ್ರಚಾರವನ್ನು ನಡೆಸುತ್ತಿದೆ. ಅಂತಹ ಜಾಗತಿಕ ವೇದಿಕೆಯಲ್ಲಿ ಪ್ರಚಾರವು ಅತ್ಯಗತ್ಯ ಅಂಶವಾಗಿದೆ. ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ, ರಾಜಮೌಳಿಗೆ ಟ್ರೋಫಿ ಗೆಲ್ಲುವ ಸಾಕಷ್ಟು ಅವಕಾಶ ಹೆಚ್ಚಿದೆ ಎಂದು ವಿಶ್ಲೇಷಿಸುತ್ತಿದ್ದಾರೆ. ಭಾರತೀಯರಾಗಿ ನಾವು ಆಶಿಸುತ್ತೇವೆ ಎಂದು ವಿಮರ್ಶಕರ ಮಾತಾಗಿದೆ.
ಓದಿ: 'ನಾಟು ನಾಟು' ಹಾಡಿಗೆ ಕೊರಿಯನ್ಸ್ ಸಖತ್ ಸ್ಟೆಪ್: ವಿಡಿಯೋ ಹಂಚಿಕೊಂಡ ಪಿಎಂ ಮೋದಿ