ETV Bharat / entertainment

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಬೈಜು ಬಾವ್ರಾ'ದಲ್ಲಿ ನಯನತಾರಾಗೆ ಮಹತ್ವದ ಪಾತ್ರ? - ನಯನತಾರಾ

ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಚಿತ್ರ 'ಬೈಜು ಬಾವ್ರಾ'ದಲ್ಲಿ ನಯನತಾರಾ ಮಹತ್ವದ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

will Nayanthara play significant role in Baiju Bawra?
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಬೈಜು ಬಾವ್ರಾ'ದಲ್ಲಿ ನಯನತಾರಾ
author img

By ETV Bharat Karnataka Team

Published : Oct 10, 2023, 3:04 PM IST

'ಜವಾನ್' ಸಿನಿಮಾ ಮೂಲಕ ಬಾಲಿವುಡ್​​ ಪ್ರವೇಶಿಸಿರುವ ಸೌತ್​ ಸಿನಿಮಾ 'ಲೇಡಿ ಸೂಪರ್​ ಸ್ಟಾರ್' ಜನಪ್ರಿಯತೆಯ ನಟಿ ನಯನತಾರಾ ಅವರು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಲಿವುಡ್ ಮ್ಯೂಸಿಕಲ್ ಪೀರಿಯಡ್​ ಡ್ರಾಮಾ 'ಬೈಜು ಬಾವ್ರಾ'ದಲ್ಲಿ (Baiju Bawra) ನಟಿಸಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಯಶಸ್ಸಿನಲ್ಲಿರುವ ರಣ್‌ವೀರ್​ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ​ ಚಿತ್ರದಲ್ಲಿ ನಯನತಾರಾ ನಟಿಸಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಬನ್ಸಾಲಿಯವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ನಯನತಾರಾ ಪ್ರಮುಖ ಪಾತ್ರ ವಹಿಸುವ ಬಗ್ಗೆ ಚರ್ಚೆಗಳಾಗುತ್ತಿವೆ ಎಂದು ವರದಿಗಳು ತಿಳಿಸಿವೆ.

ದಕ್ಷಿಣ ಚಿತ್ರರಂಗದಲ್ಲಿ ಲೇಡಿ ಸೂಪರ್‌ ಸ್ಟಾರ್ ಎಂದೇ ಜನಪ್ರಿಯರಾದ ನಯನತಾರಾ ಅವರ ಇತ್ತೀಚೆಗಷ್ಟೇ ಶಾರುಖ್ ಖಾನ್ ಅಭಿನಯದ 'ಜವಾನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ನರ್ಮದಾ ರೈ ಎಂಬ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ಜವಾನ್​ ಬ್ಲಾಕ್​ ಬಸ್ಟರ್ ಲಿಸ್ಟ್​ಗೆ ಸೇರಿದ್ದು, ನಯನತಾರಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ 'ಬೈಜು ಬಾವ್ರಾ'ದಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಟಿಯನ್ನು ನೇಮಿಸಿಕೊಳ್ಳುವ ಬಗ್ಗೆ ಚಿತ್ರತಂಡ ಮಾತುಕತೆಯಲ್ಲಿ ತೊಡಗಿದೆ ಎಂಬ ಮಾಹಿತಿ ಇದೆ. ಆದರೆ ಚಿತ್ರತಂಡದವರು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

'ಬೈಜು ಬಾವ್ರಾ'ದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮತ್ತು 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ತಾರೆ ಆಲಿಯಾ ಭಟ್ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಯಶ ಕಂಡಿರುವ ಈ ಸಿನಿಮಾದಲ್ಲಿ ಆಲಿಯಾ ಮತ್ತು ರಣ್​ವೀರ್​ ತೆರೆ ಹಂಚಿಕೊಂಡಿದ್ದರು. ರಣ್​​ವೀರ್ ಮತ್ತು ಆಲಿಯಾ ಜೊತೆಗೆ ನಯನತಾರಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಇದನ್ನೂ ಓದಿ: ಎಸ್‌ಎಸ್ ರಾಜಮೌಳಿ ಜನ್ಮದಿನ: ದೂರದೃಷ್ಟಿಯ ನಿರ್ದೇಶಕರಿಂದ ಹೆಣೆಯಲ್ಪಟ್ಟ ಅತ್ಯುತ್ತಮ ಖಳನಾಯಕ ಪಾತ್ರಗಳಿವು!

ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಕಳೆದ ಮಾರ್ಚ್​​​ನಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಭೇಟಿಯಾಗಿ ಈ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುವ ಕುರಿತು ಮಾತುಕತೆ ನಡೆಸಿದ್ದರು. ಮಾತುಕತೆ ಪೂರ್ಣಗೊಂಡರೆ ನಯನತಾರಾ ಅವರು ರಣ್​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೊತೆಗೆ ಬೈಜು ಬಾವ್ರಾ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೋ? ಇಲ್ಲವೋ ಎಂಬುದು ತಿಳಿಯಲಿದೆ.

ಇದನ್ನೂ ಓದಿ: ಮಾನಸಿಕ ಆರೋಗ್ಯ: 'ಮುಜುಗರಕ್ಕೆ ಒಳಗಾಗದೇ ತಜ್ಞರ ಸಹಾಯ ಪಡೆಯಿರಿ' .. ಅಮೀರ್ ಖಾನ್ ಸಲಹೆ

'ಬೈಜು ಬಾವ್ರಾ' ಕಥೆ 1950ರ ದಶಕದ ಪ್ರಮುಖ ದ್ರುಪದ್ ಗಾಯಕ ಮತ್ತು ಸಂಯೋಜಕ ಬೈಜು ಬಾವ್ರಾ ಅವರ ಸುತ್ತ ಸುತ್ತುತ್ತದೆ. 2024ರಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ರಣ್​​ವೀರ್ ಸಿಂಗ್​​ ನಾಲ್ಕನೇ ಬಾರಿ ಕೆಲಸ ಮಾಡುತ್ತಿದ್ದಾರೆ. ಗಲ್ಲಿ ಬಾಯ್ ಮತ್ತು ಇತ್ತೀಚೆಗೆ ಬಿಡುಗಡೆಯಾದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಂತರ ಆಲಿಯಾ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ರಣ್​ವೀರ್​ ಸಜ್ಜಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.