ETV Bharat / entertainment

ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ್ದ ಆರೋಪಿಯಿಂದ ಉದ್ಯಮಿಯೊಬ್ಬರಿಗೆ 10 ಲಕ್ಷಕ್ಕೆ ಬೇಡಿಕೆ

Shera Prayagraj businessman extortion case: ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ್ದ ಆರೋಪಿ, ಇದೀಗ ಪ್ರಯಾಗರಾಜ್​ ನಗರದ ಉದ್ಯಮಿಯೊಬ್ಬರಲ್ಲಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

who threatened actor Salman Khan demanded 10 lakhs from a businessman
ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ್ದ ಆರೋಪಿಯಿಂದ ಉದ್ಯಮಿಯೊಬ್ಬರಿಗೆ 10 ಲಕ್ಷಕ್ಕೆ ಬೇಡಿಕೆ
author img

By ETV Bharat Karnataka Team

Published : Nov 17, 2023, 11:02 PM IST

ಪ್ರಯಾಗರಾಜ್​ (ಉತ್ತರ ಪ್ರದೇಶ): ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿ ಶೇರಾ, ಇದೀಗ ನಗರದ ಉದ್ಯಮಿಯೊಬ್ಬರಲ್ಲಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಕರೇಲಿ ಪೊಲೀಸರು ಆತನ ವಿರುದ್ಧ ಕೊಲೆ ಯತ್ನ, ಬೆದರಿಕೆ ಸೇರಿದಂತೆ ಗಂಭೀರ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೊದಲೇ ಆರೋಪಿ ತಾನು ಭೂಗತ ಪಾತಕಿ ಛೋಟಾ ಶಕೀಲ್​ ಮತ್ತು ಮಸಲ್​ ಮ್ಯಾನ್​ ಅತೀಕ್​ ಅಹ್ಮದ್​ ಅವರ ಆಪ್ತ ಎಂದು ಹೇಳಿಕೊಂಡಿದ್ದ.

ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ್ದ ಹಿನ್ನೆಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಜೈಲಿಗಟ್ಟಿದ್ದರು. ಬಂಧನದಿಂದ ಹೊರಬಂದಿದ್ದ ಬಳಿಕ ಇದೀಗ ಮತ್ತೆ ಪ್ರಯಾಗರಾಜ್​ನ ಉದ್ಯಮಿಯೊಬ್ಬರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಎರಡು ವರ್ಷದಿಂದ ಬೆದರಿಕೆ: ಪ್ರಯಾಗರಾಜ್​ ನಿವಾಸಿ, ಉದ್ಯಮಿ ಜಿಶಾನ್​ ಝಾಕಿರ್​ ಅವರು, ತಮಗೆ 2 ವರ್ಷಗಳಿಂದ ಬೆದರಿಕೆ ಕರೆ ಬರುತ್ತಿರುವುದಾಗಿ ಕರೇಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಡಿಸಿಪಿ ಸಿಟಿ ದೀಪಕ್​ ಭುಕರ್​ ತಿಳಿಸಿದ್ದಾರೆ. ಶೇರಾ ಎಂಬ ಕ್ರಿಮಿನಲ್​ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ. 10 ಲಕ್ಷಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನವೆಂಬರ್​ 10 ರಂದು ಆತ ತನ್ನ ಮೂರು ಸಹಚರರೊಂದಿಗೆ ಬಂದು ಗುಂಡು ಹಾರಿಸಿದ್ದ. ನಾನು ಇದರಿಂದ ಸ್ವಲ್ಪದರಲ್ಲೇ ಪಾರಾಗಿದ್ದೆ. ಬಳಿಕ ಶೇರಾ ಆತನ ಸಹಚರರೊಂದಿಗೆ ಸೇರಿ ನನ್ನನ್ನು ಹೊಡೆದು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ಬೆದರಿಕೆ ಆರೋಪ: ಮುಂಬೈ ಪೊಲೀಸರಿಂದ ಲುಕ್‌ಔಟ್ ನೋಟಿಸ್​

ಸಲ್ಮಾನ್​ ಖಾನ್​ಗೆ ಬೆದರಿಕೆ: ಪೊಲೀಸರ ಪ್ರಕಾರ, ಕೆಲವು ವರ್ಷಗಳ ಹಿಂದೆ ಶೇರಾನನ್ನು ನಟ ಸಲ್ಮಾನ್​ ಖಾನ್​ ಅವರ ಭದ್ರತೆಗೆ ನಿಯೋಜಿಸಲಾಗಿತ್ತು. ಬಳಿಕ ಕೆಲಸದಿಂದ ಕಿತ್ತೊಗೆಯಲಾಯಿತು. 2018ರಲ್ಲಿ ಆತ ಸಿನಿಮಾದಲ್ಲಿ ಅವಕಾಶ ನೀಡುವಂತೆ ನಟನಲ್ಲಿ ಬೇಡಿಕೆ ಇಡುತ್ತಿದ್ದನು. ಇದನ್ನು ಸಲ್ಲು ನಿರಾಕರಿಸಿದಾಗ ಅವರ ಮೊಬೈಲ್​ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಆ ಸಮಯದಲ್ಲಿ ಶೇರಾ ಮುಂಬೈನಲ್ಲಿ ವಾಸಿಸುತ್ತಿದ್ದ. ಸಲ್ಮಾನ್​ ಖಾನ್​ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮುಂಬೈ ಪೊಲೀಸರು ಆತನನ್ನು ಜೈಲಿಗಟ್ಟಿದ್ದರು.

ಇದಾಗಿ ಜೈಲಿನಿಂದ ಹೊರಬಂದ ಶೇರಾ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಬಂದು ವಾಸಿಸುತ್ತಿದ್ದನು. ಎರಡು ವರ್ಷಗಳ ಹಿಂದೆ ಜಿಶಾನ್​ ಜಾಕೀರ್​ ಎಂಬ ಉದ್ಯಮಿಗೆ ಕರೆ ಮಾಡಿ ಶೇರಾ ಬೆದರಿಕೆ ಹಾಕಿದ್ದ. ಬಾಂಬ್​ ಸ್ಫೋಟಿಸುವುದಾಗಿ ಹೆದರಿಸಿದ್ದ. ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದ. ಒಟ್ಟಿನಲ್ಲಿ ಆರೋಪಿ ಶೇರಾ ವಿರುದ್ಧ ಪ್ರಯಾಗರಾಜ್​ನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದೀಗ ತಲೆಮರೆಸಿಕೊಂಡಿರುವ ಆತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಹೆಸರಲ್ಲಿ ವಂಚನೆ: ಸಿನಿಮಾ ಆಕಾಂಕ್ಷಿಗಳಿಗೆ ನಟ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.