ETV Bharat / entertainment

ಕಂಗನಾ ರಣಾವತ್​ ನಟನೆಯ 'ತೇಜಸ್​' ಸಿನಿಮಾ ವೀಕ್ಷಿಸಿ ಭಾವುಕರಾದ ಯುಪಿ ಸಿಎಂ ಯೋಗಿ ಆದಿತ್ಯನಾಥ್​ - ಈಟಿವಿ ಭಾರತ ಕನ್ನಡ

Yogi Adityanath watch kangana starrer Tejas cinema: ಕಂಗನಾ ರಣಾವತ್​ ನಟನೆಯ 'ತೇಜಸ್​' ಸಿನಿಮಾವನ್ನು ಇಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹಾಗೂ ಉತ್ತರಾಖಂಡ ಸಿಎಂ ಪುಷ್ಕರ್​ ಸಿಂಗ್​ ಧಾಮಿ ವೀಕ್ಷಿಸಿದರು.

WATCH: Kangana Ranaut says Uttar Pradesh Chief Minister Yogi Adityanath 'couldn't hold back his tears' during Tejas screening in Lucknow
ಕಂಗನಾ ರಣಾವತ್​ ನಟನೆಯ 'ತೇಜಸ್​' ಸಿನಿಮಾ ವೀಕ್ಷಿಸಿ ಭಾವುಕರಾದ ಯುಪಿ ಸಿಎಂ ಯೋಗಿ ಆದಿತ್ಯನಾಥ್​
author img

By ETV Bharat Karnataka Team

Published : Nov 1, 2023, 9:57 AM IST

ಬಾಲಿವುಡ್​ ಕ್ವೀನ್ ಕಂಗನಾ ರಣಾವತ್​ ಸದ್ಯ 'ತೇಜಸ್​' ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಚಿತ್ರವು ಅಕ್ಟೋಬರ್​ 27ರಂದು ಬಿಡುಗಡೆಯಾಯಿತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿರುವ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಕಂಡಿಲ್ಲ. ಇಂದು ಲಕ್ನೋದಲ್ಲಿ ಕಂಗನಾ ರಣಾವತ್​ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗಾಗಿ 'ತೇಜಸ್​' ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು.

ಲಕ್ನೋದ ಲೋಕಭವನ ಸಭಾಂಗಣದಲ್ಲಿ ತೇಜಸ್​ ಸ್ಕ್ರೀನಿಂಗ್​ ನಡೆಸಲಾಯಿತು. ಪ್ರದರ್ಶನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹಾಗೂ ಉತ್ತರಾಖಂಡ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಭಾಗವಹಿಸಿದ್ದರು. ಫೋಟೋಗಳನ್ನು ಕಂಗನಾ ರಣಾವತ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಇಂದು ಗೌರವಾನ್ವಿತ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್​ ಹಾಗೂ ಪುಷ್ಕರ್​ ಸಿಂಗ್​ ಧಾಮಿ ಅವರು ದೇಶಭಕ್ತಿ ಸಾರುವ ತೇಜಸ್​ ಸಿನಿಮಾವನ್ನು ವೀಕ್ಷಿಸಿದರು. ಚಿತ್ರ ಕೊನೆಗೊಳ್ಳುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್​ ಭಾವುಕರಾದರು" ಎಂದು ಕ್ಯಾಪ್ಶನ್​ ಬರೆದಿದ್ದಾರೆ.

'ತೇಜಸ್​' ಸ್ಕ್ರೀನಿಂಗ್​ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಂಗನಾ, "ಸಿಎಂ ಯೋಗಿ ಆದಿತ್ಯನಾಥ್​ ಸಿನಿಮಾ ನೋಡಿ ಭಾವುಕರಾದರು. ಚಿತ್ರವು ಮಹಿಳಾ ಸಬಲೀಕರಣ ಬಗ್ಗೆ ಮಾತ್ರವಲ್ಲದೇ ಮಹಿಳಾ ಶಕ್ತಿಯ ಬಗ್ಗೆ ಎತ್ತಿ ತೋರಿಸುತ್ತದೆ" ಎಂದು ಹೇಳಿದರು.

ಸಿನಿಮಾ ಬಿಡುಗಡೆಗೂ ಮುನ್ನ ದೆಹಲಿಯ ಇಂಡಿಯನ್​ ಏರ್​ಫೋರ್ಸ್​ ಅಡಿಟೋರಿಯಂನಲ್ಲಿ ಆಕ್ಷನ್​ ಥ್ರಿಲ್ಲರ್​ 'ತೇಜಸ್' ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಹಲವು ಭಾರತೀಯ ವಾಯುಪಡೆಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: 'ತೇಜಸ್​​'ಗೆ ಮಿಶ್ರ ಪ್ರತಿಕ್ರಿಯೆ: ಕಂಗನಾ ರಣಾವತ್​ ಸಿನಿಮಾ 'ಗಳಿಕೆ'ಯಲ್ಲಿ ಹಿನ್ನೆಡೆ!

ಚಿತ್ರದಲ್ಲಿ ತೇಜಸ್ ಗಿಲ್ ಪಾತ್ರಕ್ಕೆ ಕಂಗನಾ ರಣಾವತ್​ ಜೀವ ತುಂಬಿದ್ದಾರೆ. ತಮ್ಮ ಕೋಚ್ ಮಾರ್ಗದರ್ಶನದಲ್ಲಿ ಹೊರಹೊಮ್ಮಿದ ಅತ್ಯಂತ ಧೈರ್ಯಶಾಲಿ, ಫೈಟರ್ ಪೈಲಟ್ ಎಂದು ಕಂಗನಾರನ್ನು ಪರಿಚಯಿಸಲಾಗಿದೆ. ತೇಜಸ್‌ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಗೂಢಾಚಾರನನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕರು ಸೆರೆ ಹಿಡಿದು ಹಿಂಸಿಸಿದ ಹಿನ್ನೆಲೆ, ಘಟನೆ ತೀವ್ರ ಸ್ವರೂಪ ಪಡೆಯುತ್ತದೆ. ಗೂಢಾಚಾರಿಯನ್ನು ರಕ್ಷಿಸಲು ತನಗೆ ಅವಕಾಶ ನೀಡುವಂತೆ ತೇಜಸ್ ತಮ್ಮ ಹಿರಿಯರಲ್ಲಿ ವಿನಂತಿಸುತ್ತಾರೆ. ಹೀಗೆ ಸಿನಿಮಾ ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌, ಡೈಲಾಗ್ಸ್​ ಮೂಲಕ ಗಮನ ಸೆಳೆಯುತ್ತಿದೆ.

ಚಿತ್ರತಂಡ: ರೋನಿ ಅವರ ಆರ್‌ಎಸ್‌ವಿಪಿ ಬ್ಯಾನರ್ ನಿರ್ಮಾಣದ ಈ ಚಿತ್ರವನ್ನು ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ್ದಾರೆ. 40 ಕೋಟಿ ಬಜೆಟ್​ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ನಟ ಅನ್ಶುಲ್ ಚೌಹಾಣ್​, ವರುಣ್​ ಮಿತ್ರಾ, ವೀಣಾ ನಾಯರ್​, ಮಿರ್ಕೋ ಕ್ವೈನಿ, ರೋಹೆದ್​ ಖಾನ್​ ಹಾಗೂ ಅನುಜ್​ ಖುರಾನಾ​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: '12th ಫೇಲ್' ಕಲೆಕ್ಷನ್​​ ಎಷ್ಟು? ಕಂಗನಾ ಮೊಗದಲ್ಲಿ ಕಾಣದ 'ತೇಜಸ್'; ಥಿಯೇಟರ್‌ಗಳಿಗೆ ಹೋಗಿ ಎಂದ ತಾರೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.