ETV Bharat / entertainment

'ಸಲಾರ್'​ ಬಿಡುಗಡೆಗೆ ಮುನ್ನವೇ ಶುರುವಾಯ್ತು ಕ್ರೇಜ್​; 120 ಅಡಿ ಕಟೌಟ್​ನಲ್ಲಿ ಪ್ರಭಾಸ್​ - ಸಲಾರ್​ ಚಿತ್ರತಂಡದ ಸಂದರ್ಶನ

ಸಾಮಾನ್ಯವಾಗಿ ಚಿತ್ರ ಬಿಡುಗಡೆಗೆ ಮುನ್ನ ಸಿನಿ ತಂಡ ಪ್ರಚಾರ ಕಾರ್ಯ ನಡೆಸುವುದು ಸಂದರ್ಶನದಲ್ಲಿ ಭಾಗಿಯಾಗುವುದು ಕಾಣಬಹುದು. ಆದರೆ, ಇದೀಗ 'ಸಲಾರ್'​ ಚಿತ್ರತಂಡ ಅದಕ್ಕಿಂತ ವಿಭಿನ್ನ ದಾರಿ ಆಯ್ಕೆ ಮಾಡಿಕೊಂಡಿದೆ.

watch-heres-what-went-behind-erecting-a-120-foot-cutout-of-prabhas-in-the-heart-of-mumbai

author img

By ETV Bharat Karnataka Team

Published : Dec 18, 2023, 4:54 PM IST

ಮುಂಬೈ​: ಪ್ರಭಾಸ್​​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಸಲಾರ್'​ ಇದೀಗ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುವ ಮೂಲಕ ಚಿತ್ರದ ಪ್ರಮೋಷನ್​ಗೆ ಮುಂದಾಗಿದೆ. ಇದಕ್ಕಾಗಿ ತಂಡ ಹೊಸ ಮಾರ್ಗವನ್ನು ಅನುಸರಿಸಿದೆ. ಸಾಂಪ್ರದಾಯಿಕವಾಗಿ ಚಿತ್ರ ಬಿಡುಗಡೆಗೆ ಮುನ್ನ ಚಿತ್ರದ ನಾಯಕ - ನಾಯಕಿ, ನಿರ್ದೇಶಕರು ಪ್ರಮುಖ ನಗರಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸುವುದು ಸಂದರ್ಶನದಲ್ಲಿ ಭಾಗಿಯಾಗುವುದು ಕಾಣಬಹುದು.

ಆದರೆ ಇದೀಗ 'ಸಲಾರ್'​ ಚಿತ್ರತಂಡ ಅದಕ್ಕಿಂತ ವಿಭಿನ್ನ ದಾರಿ ಆಯ್ಕೆ ಮಾಡಿಕೊಂಡಿದೆ. ಚಿತ್ರದ ಬಿಡುಗಡೆ ದಿನ ಬಗ್ಗೆ ಹೆಚ್ಚು ನಿರೀಕ್ಷೆಯನ್ನೂ ಮೂಡಿಸುತ್ತಿರುವ ಚಿತ್ರ ಇದೀಗ ಮುಂಬೈನಲ್ಲಿ ಪ್ರಭಾಸ್​ ಅವರ ಭರ್ಜರಿ ಕಟೌಟ್​​ ನಿಲ್ಲಿಸಿ ಗಮನ ಸೆಳೆದಿದೆ. ಅಷ್ಟೇ ಅಲ್ಲದೆ, ಇಷ್ಟು ದೊಡ್ಡದಾದ ಕಟ್​ಔಟ್​ ಜೋಡಿಸುವ ಶ್ರಮದ ವಿಡಿಯೋವನ್ನು ಇದೀಗ ಸಿನಿ ತಂಡ ಹಂಚಿಕೊಂಡಿದೆ.

ಮುಂಬೈನ ಆರ್​ ಮಾಲ್​ನಲ್ಲಿ 120 ಅಡಿ ಎತ್ತರದ 'ಸಲಾರ್'​ ಕಟೌಟ್​​ ​​​ ನಿಲ್ಲಿಸಿರುವ ವಿಡಿಯೋ ಇದಾಗಿದೆ. ಈ ಕಟೌಟ್​​ ​ ಜೋಡಣೆಗೆ 125 ಜನರು ಬಿಡುವಿಲ್ಲದೇ ವಾರಗಳ ಕಾಲ ಕೆಲಸ ಮಾಡಿದ್ದಾರೆ. ಈ ವಿಡಿಯೋವನ್ನು ಮೈಕ್ರೋಬ್ಲಾಗಿಂಗ್​ ತಾಣ ಎಕ್ಸ್​ನಲ್ಲಿ ಹೊಂಬಾಳೆ ಫಿಲ್ಮ್ಸಂ ಹಂಚಿಕೊಂಡಿದೆ. ಮಂಬೈನ ಆರ್​ ಮಾಲ್​ನಲ್ಲಿ ಸಲಾರ್​ ಮಿಂಚು. 120 ಅಡಿ ಎತ್ತರದ ರೆಬೆಲ್​ ಸ್ಟಾರ್​ ಪ್ರಭಾಸ್​​ ಅವರ ಕಟ್​ ಔಟ್​​ ಚಿತ್ರದ ಹೈಪ್​ ಅನ್ನು ಹೆಚ್ಚಿಸಿದೆ.

ಚಿತ್ರ ಬಿಡುಗಡೆಗೆ ಮುನ್ನ ಪ್ರಭಾಸ್​, ಪೃಥ್ವಿರಾಜ್​ ಸುಕುಮಾರನ್​ ಮತ್ತು ಪ್ರಶಾಂತ್​ ನೀಲ್​ ಅವರ ವಿಶೇಷ ಸಂದರ್ಶನ ಕೂಡ ಬಿಡುಗಡೆಯಾಗಲಿದೆ. ಸಲಾರ್​ ಚಿತ್ರತಂಡದ ಈ ತ್ರಿವಳಿಗಳು ಎಸ್​ಎಸ್​​ ರಾಜಮೌಳಿ ಜೊತೆಗೆ ಮಾತುಕತೆ ಮಾಡಲಿದ್ದಾರೆ. ಈ ಎಕ್ಸ್​​​​ಕ್ಲೂಸಿವ್​ ಸಂದರ್ಶನ ಹೊಂಬಾಳೆ ಯೂಟ್ಯೂಬ್​ ಚಾನಲ್​ನಲ್ಲಿ ಡಿಸೆಂಬರ್​​ 18ಕ್ಕೆ ಬಿಡುಗಡೆಯಾಗಲಿದೆ.

450 ಕೋಟಿ ವೆಚ್ಚದಲ್ಲಿ 'ಸಲಾರ್'​​ ಚಿತ್ರವನ್ನು ಹೊಂಬಾಳೆ ಫಿಲ್ಮ್​​ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಚಿತ್ರ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಪ್ರಭಾಸ್​ ಜೊತೆಗೆ ಪೃಥ್ವಿರಾಜ್​ ಸುಕುಮಾರನ್​, ಜಗಪತಿ ಬಾಬು, ಶೃತಿ ಹಾಸನ್​​​, ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಡಿಸೆಂಬರ್​​ 21ಕ್ಕೆ ಚಿತ್ರ ಬಿಡುಗಡೆ ಕಾಣಲಿದ್ದು, ಇದರ ಬಳಿಕ ಶಾರುಖ್​ ಖಾನ್​ ಅಭಿನಯ ಡಂಕಿ ಮತ್ತು ಮೋಹನ್​ ಲಾಲ್​ ಅವರ ನೆರು ಸಿನಿಮಾ ತೆರೆಗೆ ಬರಲಿವೆ.

ಇದನ್ನೂ ಓದಿ: 'ಸಲಾರ್​' ರಿಲೀಸ್​ ಟ್ರೇಲರ್​ ಔಟ್​​: ಮಾಸ್​ ಲುಕ್​ನಲ್ಲಿ ಅಬ್ಬರಿಸಿದ ಪ್ರಭಾಸ್​, ಹೆಚ್ಚಿದ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.