ETV Bharat / entertainment

'ವಿಂಧ್ಯಾಚಲ ನಗರಿಯ ಮೈನ್ ರಂಗ್ ಬರ್ಸೆ' ಹಾಡಿನಲ್ಲಿ ನೋಡಿ ಹೋಳಿ ಸಂಭ್ರಮ - ಹೋಳಿ ಹಾಡುಗಳು

'ಜೈ ಮಾ ವಿಂಧ್ಯಾವಾಸಿನಿ' ಚಿತ್ರದ ವಿಂಧ್ಯಾಚಲ ನಗರಿಯ ಮೈನ್ ರಂಗ್ ಬರ್ಸೆ ಹಾಡು ಬಿಡುಗಡೆ ಆಗಿದೆ.

Vindhyachal Nagariya Mein Rang Barse Song
ವಿಂಧ್ಯಾಚಲ ನಗರಿಯ ಮೈನ್ ರಂಗ್ ಬರ್ಸೆ ಹಾಡು ಬಿಡುಗಡೆ
author img

By

Published : Feb 21, 2023, 7:55 PM IST

ಹೋಳಿ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಭೋಜ್‌ಪುರಿ ಚಲನಚಿತ್ರೋದ್ಯಮ ಸಡಗರಕ್ಕೆ ತಯಾರಾಗಿದೆ. ವಿಂಧ್ಯಾಚಲ ನಗರಿಯ ಮೈನ್ ರಂಗ್ ಬರ್ಸೆ ಎಂಬ ಹಾಡು ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೀಕ್ಷಣೆ ಪಡೆಯುತ್ತಿದೆ.

'ಜೈ ಮಾ ವಿಂಧ್ಯಾವಾಸಿನಿ' ಚಿತ್ರದ ಈ ಹಾಡು ಇಂದು ಯೂಟ್ಯೂಬ್ ಚಾನೆಲ್ B4U ಭೋಜ್‌ಪುರಿಯಲ್ಲಿ ರಿಲೀಸ್​​ ಆಗಿದೆ. ಜಿತೇಂದ್ರ ಸಿಂಗ್ ಹಾಡಿದ್ದಾರೆ. ನಟಿ ಅಂಜನಾ ಸಿಂಗ್ ಮತ್ತು ನಟ ಅಮರೀಶ್ ಸಿಂಗ್ ಹಾಡಿನ ಮುಖ್ಯಭೂಮಿಕೆಯಲ್ಲಿದ್ದಾರೆ. ಮುನ್ನಾ ದುಬೆ ಅವರ ಸಾಹಿತ್ಯವಿದೆ. ವಿಷ್ಣು ಶಂಕರ್ ಬೇಲು ನಿರ್ದೇಶಿಸಿದ್ದಾರೆ.

ಭೋಜ್‌ಪುರಿ ನಟಿ ಅಂಜನಾ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ನಿರಂತರವಾಗಿ ಮಗಳು ಅದಿತಿಯ ಫೋಟೋಗಳು, ರೀಲ್ಸ್​ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಮೈನ್ ಥೋಡಾ ತೇರಿ ಆಂಖೋನ್ ಪರ್ ಮರ್ ಗಯಾ ಹಾಡಿನಲ್ಲಿ ಅದಿತಿ ಜೊತೆ ಅಂಜನಾ ಮಾಡಿದ ರೀಲ್‌ಗಳನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಅದಿತಿಯನ್ನು ಹೊಗಳಿದ ಅಭಿಮಾನಿಯೊಬ್ಬರು, "ನಮ್ಮ ಪುಟ್ಟ ರಾಣಿ ಅಂಜನಾ ಅವಗಿಂತಲೂ ಚೆನ್ನಾಗಿ ನಟಿಸುತ್ತಿದ್ದಾರೆ" ಎಂದು ಬರೆದಿದ್ದಾರೆ. ಮತ್ತೋರ್ವ ಅಭಿಮಾನಿ, "ಮೇಡಂ ನಿಮ್ಮನ್ನು ಭೇಟಿಯಾಗುವುದು ನನ್ನ ಕನಸು" ಎಂದಿದ್ದಾರೆ. ತಾಯಿ ಮತ್ತು ಮಗಳ ರೀಲ್‌ಗಳನ್ನು ಅಭಿಮಾನಿಗಳು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ. 'ವಿಂಧ್ಯಾಚಲ ನಗರಿಯ ಮೈನ್ ರಂಗ್ ಬರ್ಸೆ' ಹಾಡನ್ನು ಸಹ ಪ್ರಚಾರ ಮಾಡುತ್ತಿದ್ದು, ಹೆಚ್ಚಿನ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

'ಹಾಟ್​ ಕೇಕ್'​ ಅಂಜನಾ ಸಿಂಗ್: ಅಂಜನಾ ಸಿಂಗ್ ಅವರನ್ನು ಹಾಟ್ ಕೇಕ್ ಎಂದು ಕರೆಯಲಾಗುತ್ತದೆ. ಇವರು ಯಶ್ ಕುಮಾರ್ ಅವರನ್ನು ಪ್ರೇಮ ವಿವಾಹವಾಗಿದ್ದರು. ಆದರೆ ಪತಿಯ ಜೀವನದಲ್ಲಿ ಮತ್ತೋರ್ವ ಮಹಿಳೆ ಪ್ರವೇಶಿಸಿದ್ದರಿಂದ ವೈವಾಹಿಕ ಜೀವನ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಯಶ್ ಕುಮಾರ್ ಅಂಜನಾರಿಗೆ ವಿಚ್ಛೇದನ ನೀಡಿ ನಿಧಿ ಅವರನ್ನು ವರಿಸಿದ್ದರು.

ಇದನ್ನೂ ಓದಿ: 150 ಕೋಟಿ ರೂ. ಮೌಲ್ಯದ ಮನೆ ಪೋಷಕರಿಗೆ ಉಡುಗೊರೆ ನೀಡಿದ ನಟ ಧನುಷ್

ಭಾರತ ವೈವಿಧ್ಯತೆಗಳ ತವರೂರು. ಹೋಳಿ ಹಬ್ಬವನ್ನು ದೇಶಾದ್ಯಂತ ಎಲ್ಲಾ ವಯಸ್ಸಿನ ಹಾಗೂ ವರ್ಗದ ಜನರು ಉತ್ಸಾಹದಿಂದ ಆಚರಿಸುತ್ತಾರೆ. ಬಣ್ಣದ ಪುಡಿ, ಬಣ್ಣದ ನೀರು ತುಂಬಿದ ಗನ್​ (ವಾಟರ್ ಗನ್), ಆಕಾಶ ಬುಟ್ಟಿಗಳು ಮತ್ತು ವಿವಿಧ ಖಾದ್ಯಗಳು ಹೋಳಿ ಸಂಭ್ರಮ ಹೆಚ್ಚಿಸುತ್ತವೆ. ಹೋಳಿಗೆ ಒಂದು ದಿನ ಮೊದಲು ಚೌತಿ ಹೋಳಿ ಆಚರಿಸಲಾಗುತ್ತದೆ. ಹೋಳಿ ದಿನ ಬಣ್ಣಗಳಿಂದ ತುಂಬಿದ್ದರೆ, ಚೌತಿ ಹೋಳಿಯಲ್ಲಿ ಪೂಜಾ ಪ್ರಾರ್ಥನೆ ಪ್ರಮುಖವಾಗಿರುತ್ತದೆ.

ಇದನ್ನೂ ಓದಿ: ಭರವಸೆಯ ನಟನಾಗಿ ಕಾಂತಾರ ಸ್ಟಾರ್: ಫಾಲ್ಕೆ ಪ್ರಶಸ್ತಿ 2023ರ ಸುಂದರ ಕ್ಷಣಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.