ETV Bharat / entertainment

ಝೀ5 ಒಟಿಟಿ ಟ್ರೇಡಿಂಗ್ ಟಾಪ್ 3 ಸ್ಥಾನದಲ್ಲಿ ವಿಕ್ರಾಂತ್ ರೋಣ.. ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದವ್ರಿಗೆ 25,000 ರೂ. - ಒಟಿಟಿ ವಿಕ್ರಾಂತ್ ರೋಣ

ನಟ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆ. 2ರಂದು ಝೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಒಂದು ನಿಮಿಷದಲ್ಲಿ 1000ಕ್ಕೂ ಹೆಚ್ಚು ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.

Vikrant Rona movie is in Zee5 OTT Trading Top 3
ಝೀ5 ಒಟಿಟಿ ಟ್ರೇಡಿಂಗ್ ಟಾಪ್ 3 ಸ್ಥಾನದಲ್ಲಿ ವಿಕ್ರಾಂತ್ ರೋಣ
author img

By

Published : Sep 22, 2022, 3:26 PM IST

ಕಿಚ್ಚ ಸುದೀಪ್ ಹಾಗು ಅನೂಪ್ ಭಂಡಾರಿ ಕಾಂಬಿನೇಷನ್​​ನಲ್ಲಿ ಬಂದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಝೀ5 ಒಟಿಟಿಯಲ್ಲಿ ಧಮಾಕ ಸೃಷ್ಟಿಸ್ತಿದೆ. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆ. 2ರಂದು ಝೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ '1000ಕ್ಕೂ ಹೆಚ್ಚು ಮಿಲಿಯನ್ಸ್ ಸ್ಟ್ರೀಮಿಂಗ್ ಮಿನಿಟ್' ವೀಕ್ಷಣೆ ಕಂಡು ದಾಖಲೆ ಬರೆದಿದೆ. ಅಲ್ಲದೇ ಕಳೆದ ಮೂರು ವಾರಗಳಿಂದ ಝೀ5 ಒಟಿಟಿಯಲ್ಲಿ ಟ್ರೇಡಿಂಗ್ ಟಾಪ್ 3 ಸ್ಥಾನ ಕೂಡ ಗಿಟ್ಟಿಸಿಕೊಂಡಿದೆ.

#VikranthronaZEE5Contest ನಡಿ ಝೀ5 ಒಟಿಟಿ ಸಂಸ್ಥೆ ರಕ್ಕಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ರೂಪಾಯಿ ಬಹುಮಾನ ಹಾಗೂ ಪ್ರಮುಖ 10 ಸ್ಪರ್ಧಿಗಳಿಗೆ ಉಡುಗೊರೆ ಹಾಗೂ ಸುದೀಪ್ ಕಡೆಯಿಂದ ವೈಯಕ್ತಿಕ ಪತ್ರ ಕೊಡುವುದಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಂತೆ ರಕ್ಕಮ್ಮ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ಹಣ ಹಾಗೂ 10 ಜನಕ್ಕೆ ಕಿಚ್ಚನ ಕಡೆಯಿಂದ ಪತ್ರ ಹಾಗೂ ಉಡುಗೊರೆ ನೀಡಲಾಗಿದೆ.

Vikrant Rona movie is in Zee5 OTT Trading Top 3
ಝೀ5 ಒಟಿಟಿ ಟ್ರೇಡಿಂಗ್ ಟಾಪ್ 3 ಸ್ಥಾನದಲ್ಲಿ ವಿಕ್ರಾಂತ್ ರೋಣ

ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ಗಿಫ್ಟ್ - ಒಟಿಟಿಯಲ್ಲಿ ಪ್ರಸಾರವಾಗಲಿದೆ ವಿಕ್ರಾಂತ್ ರೋಣ ಸಿನಿಮಾ

ಅದ್ಧೂರಿ ಬಜೆಟ್​ನಲ್ಲಿ 'ವಿಕ್ರಾಂತ್​ ರೋಣ' ಸಿನಿಮಾವನ್ನು ಜಾಕ್​ ಮಂಜು ನಿರ್ಮಾಣ ಮಾಡಿದ್ದರು. ನೀತಾ ಅಶೋಕ್​, ಮಿಲನಾ ನಾಗರಾಜ್​, ಜಾಕ್ವೆಲಿನ್​ ಫರ್ನಾಂಡಿಸ್​, ಮಧುಸೂದನ್​ ರಾವ್​, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದರು.

ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಜಾಕ್ವೆಲಿನ್ ಫರ್ನಾಂಡಿಸ್​ ಜೊತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ ರಾ ರಾ ರಕ್ಕಮ್ಮ.. ಹಾಡಿಗೆ​ ಅಭಿಮಾನಿಗಳು ಫಿದಾ ಆಗಿದ್ದರು. ಥಿಯೇಟರ್​ನಲ್ಲಿಯೂ ಭರ್ಜರಿ ಕಮಾಯಿ ಮಾಡಿದ್ದ ಸಿನಿಮಾ ಈಗ ಝೀ5 ಒಟಿಟಿಯಲ್ಲಿ ಹಂಗಾಮ ಸೃಷ್ಟಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.