ETV Bharat / entertainment

ಎಲ್ಲೆಲ್ಲೂ 'ವಿಕ್ರಾಂತ್ ರೋಣ' ಅಬ್ಬರ.. ಅಭಿನಯ ಚಕ್ರವರ್ತಿಗೆ ಜೈಕಾರ

author img

By

Published : Jul 28, 2022, 1:32 PM IST

Vikrant Rona movie.. ಕಲಬುರಗಿ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಹುಬ್ಬಳ್ಳಿ, ಶಿವಮೊಗ್ಗ ಚಿತ್ರಮಂದಿರಗಳಲ್ಲಿ 'ವಿಕ್ರಾಂತ್ ರೋಣ' ಅಬ್ಬರ- ಅಭಿಮಾನಿಗಳಿಂದ ಸಂಭ್ರಮಾಚರಣೆ

Vikrant Rona movie appreciated by sudeep fans
'ವಿಕ್ರಾಂತ್ ರೋಣ' ಅಬ್ಬರ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಸಿನೆಮಾ ಜಗತ್ತಿನೆಲ್ಲೆಡೆ 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಕಿಚ್ಚನ ಅಬ್ಬರಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಪ್ರಪಂಚದಾದ್ಯಂತ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಮ್ಮೂರಿನ ಥಿಯೇಟರ್​ಗಳ ಬಳಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಕಲಬುರಗಿ: ಸಂಗಮ್, ತ್ರಿವೇಣಿ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ. ಚಿತ್ರಮಂದಿರಗಳ ಎದುರು ಸುದೀಪ್ ಅವರ ಬೃಹದಾಕಾರದ ಕಟೌಟ್ ಅಳವಡಿಸಿ ಪುಷ್ಪಾರ್ಚನೆ ಮಾಡುವ ಅಭಿಮಾನ ಮೆರೆದ ಅಭಿಮಾನಿಗಳು ಚಿತ್ರದ ಯಶಸ್ಸಿಗೆ ಹಾರೈಸಿದರು.

ಬಳ್ಳಾರಿ: ಮುಂಜಾನೆ 7 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಏಕಕಾಲಕ್ಕೆ ಬಳ್ಳಾರಿಯ ಮೂರು ಚಿತ್ರ ಮಂದಿರಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿದೆ. ಹೆಚ್ಚಿನ ಸಂಖ್ಯೆಯ ವೀಕ್ಷಕರು ಆಗಮಿಸಿ ಚಿತ್ರ ವೀಕ್ಷಿಸಿದರು. ಚಿತ್ರ ಮಂದಿರಗಳೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಥಿಯೇಟರ್​​ಗಳ ಮುಂಭಾಗ ಸುದೀಪ್ ಅವರ ಬೃಹತ್ ಕಟೌಟ್ ರಾರಾಜಿಸುತ್ತಿವೆ.

'ವಿಕ್ರಾಂತ್ ರೋಣ' ಅಬ್ಬರ

ತುಮಕೂರು: ಜಿಲ್ಲೆಯ ವಿವಿಧ ಚಿತ್ರ ಮಂದಿರಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗಿದೆ. ಬೆಳಗ್ಗೆ 5 ಗಂಟೆಯಿಂದಲೂ ವಿವಿಧ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಆಗಿದೆ. ಅಭಿಮಾನಿಗಳು ಸುದೀಪ್ ಭಾವಚಿತ್ರಕ್ಕೆ ಹೂವಿನ ಸುರಿಮಳೆ ಗೈಯುತ್ತಿದ್ದಾರೆ. ಅಲ್ಲದೇ ಚಿತ್ರಮಂದಿರಗಳ ಎದುರು ನೃತ್ಯ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸುತಿದ್ದಾರೆ.

ಚಿತ್ರದುರ್ಗ: ವೆಂಕಟೇಶ್ವರ ಚಿತ್ರಮಂದಿರದ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ಸುದೀಪ್‌ ಅಭಿಮಾನಿಗಳು ವಿಕ್ರಾಂತ್ ರೋಣ‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಅಪ್ಸರಾ ಚಿತ್ರಮಂದಿರಕ್ಕೆ ಬೆಳ್ಳಂಬೆಳಗ್ಗೆ ಆಗಮಿಸಿದ ಕಿಚ್ಚನ ಅಭಿಮಾನಿಗಳು ಸುದೀಪ್ ಬ್ಯಾನರ್​ಗೆ ಕ್ಷೀರಾಭೀಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಕಿಚ್ಚನ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಎಂದು ಚಿತ್ರಕ್ಕೆ ಶುಭ ಹಾರೈಸಿದರು.

ಶಿವಮೊಗ್ಗ: ನಗರದ ಮೂರು ಚಿತ್ರಮಂದಿರಗಳಲ್ಲಿ ವಿಕ್ರಾಂತ್​ ರೋಣ ಬಿಡುಗಡೆಯಾಗಿದೆ. ಹೆಚ್​ಪಿಸಿ, ಲಕ್ಷ್ಮೀ ಹಾಗೂ ಶಿವಪ್ಪ ನಾಯಕ ಮಾಲ್​ನ ಭಾರತ್ ಸಿನಿಮಾಸ್​ನ ಎರಡು ಸ್ಕ್ರೀನ್ ನಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಮಳೆ ಹಿನ್ನೆಲೆ ಫ್ಯಾನ್ಸ್ ಶೋ ತಡವಾಗಿ ಅಂದರೆ ಬೆಳಗ್ಗೆ ಏಳು ಗಂಟೆಗೆ ಆರಂಭವಾಯ್ತು.‌ ಮುಂಜಾನೆ ಅಷ್ಟೇನು ಸಡಗರ ಕಾಣಲಿಲ್ಲ. ಬೆ. 9:30ಕ್ಕೆ ಆರಂಭವಾದ ಮಾರ್ನಿಂಗ್ ಶೋಗೆ ಅಭಿಮಾನಿಗಳು ಚಿತ್ರಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದರು. ಡೊಳ್ಳು ಕುಣಿತದೊಂದಿಗೆ ಸುದೀಪ್ ಭಾವಚಿತ್ರ ಇರುವ ಬೃಹತ್ ಬಾವುಟಗಳನ್ನು ಅಭಿಮಾನಿಗಳು ಪ್ರದರ್ಶಿಸಿದರು‌. ಶಿವಮೊಗ್ಗ ತುಂಬೆಲ್ಲಾ ಕಿಚ್ಚನ ಸಾಮ್ರಾಜ್ಯ ಶಿವಮೊಗ್ಗ ಹೆಸರಿನ ಕಟೌಟ್​ಗಳು ರಾರಾಜಿಸುತ್ತಿವೆ.

ಇದನ್ನೂ ಓದಿ: ವಿಶ್ವಾದ್ಯಂತ 'ವಿಕ್ರಾಂತ್ ರೋಣ' ಬಿಡುಗಡೆ: ಕಿಚ್ಚ ಸುದೀಪ್‌ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.