ಹೈದರಾಬಾದ್ (ತೆಲಂಗಾಣ): ಕಾರು ಪಾರ್ಕಿಂಗ್ ವಿಚಾರವಾಗಿ ಟಾಲಿವುಡ್ ನಟಿ ಡಿಂಪಲ್ ಹಯಾತಿ ಮತ್ತು ಹೈದರಾಬಾದ್ ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಹುಲ್ ಹೆಗಡೆ ನಡುವೆ ಕಿತ್ತಾಟ ಶುರುವಾಗಿದೆ. ಇದೇ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಡಿಸಿಪಿ ಕಾರಿಗೆ ಹಾನಿ ಮಾಡಿದ ಆರೋಪದ ಮೇಲೆ ನಟಿ ಹಯಾತಿ ವಿರುದ್ಧ ಜುಬಿಲಿ ಹಿಲ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
-
Yours lovingly , pic.twitter.com/JWVc3SBVoP
— Dimple Hayathi (@DimpleHayathi) May 23, 2023 " class="align-text-top noRightClick twitterSection" data="
">Yours lovingly , pic.twitter.com/JWVc3SBVoP
— Dimple Hayathi (@DimpleHayathi) May 23, 2023Yours lovingly , pic.twitter.com/JWVc3SBVoP
— Dimple Hayathi (@DimpleHayathi) May 23, 2023
ಇಲ್ಲಿನ ಜರ್ನಲಿಸ್ಟ್ ಕಾಲೋನಿಯ ಹುಡಾ ಎನ್‌ಕ್ಲೇವ್ ಅಪಾಟ್ಮೆಂಟ್ನಲ್ಲಿ ಡಿಸಿಪಿ ರಾಹುಲ್ ಹೆಗಡೆ ವಾಸವಾಗಿದ್ದಾರೆ. ಇದೇ ಅಪಾಟ್ಮೆಂಟ್ನಲ್ಲಿ ನಟಿ ಡಿಂಪಲ್ ಹಯಾತಿ ಹಾಗೂ ಡೇವಿಡ್ ಎಂಬ ವ್ಯಕ್ತಿ ಕೂಡ ವಾಸವಾಗಿದ್ದಾರೆ. ಆದರೆ, ಅಪಾರ್ಟ್‌ಮೆಂಟ್‌ನ ಸೆಲ್ಲಾರ್‌ನಲ್ಲಿ ಕಾರು ಪಾರ್ಕಿಂಗ್ ವಿಚಾರ ಇಬ್ಬರ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ಇದು ಭಾರಿ ವಿವಾದವನ್ನೂ ಎಬ್ಬಿಸಿದೆ.
ಸರ್ಕಾರಿ ವಾಹನಕ್ಕೆ ಹಾನಿ ಆರೋಪ: ಸಂಚಾರಿ ವಿಭಾಗದ ಡಿಸಿಪಿ ಆಗಿರುವ ರಾಹುಲ್ ಹೆಗಡೆ ಸರ್ಕಾರಿ ಕಾರು ಹೊಂದಿದ್ದಾರೆ. ಇವರಿಗೆ ಸರ್ಕಾರಿ ವಾಹನದ ಚಾಲಕರಾಗಿ ಕಾನ್ಸ್‌ಟೇಬಲ್ ಚೇತನ್ ಕುಮಾರ್ ಎಂಬುವವರನ್ನು ನಿಯೋಜಿಸಲಾಗಿದೆ. ಅಪಾರ್ಟ್‌ಮೆಂಟ್‌ನ ಸೆಲ್ಲಾರ್‌ನಲ್ಲಿ ಡಿಸಿಪಿ ಅವರ ಸರ್ಕಾರಿ ಕಾರನ್ನು ನಿಲ್ಲಿಸಲಾಗುತ್ತದೆ. ಇದೇ ಅಪಾಟ್ಮೆಂಟ್ನಲ್ಲಿ ವಾಸವಾಗಿರುವ ನಟಿ ಡಿಂಪಲ್ ಹಯಾತಿ ಹಾಗೂ ಡೇವಿಡ್ ಕೂಡ ತಮ್ಮ ಕಾರನ್ನು ಸೆಲ್ಲಾರ್‌ನಲ್ಲಿ ನಿಲ್ಲಿಸುತ್ತಾರೆ. ಆದರೆ, ಉದ್ದೇಶಪೂರ್ವಕವಾಗಿ ಡಿಸಿಪಿ ಕಾರಿಗೆ ನಟಿ ಹಾನಿಯನ್ನುಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಷಯ ನಟಿ ಡಿಂಪಲ್ ಹಯಾತಿ ಹಾಗೂ ಡೇವಿಡ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗುವುದಕ್ಕೆ ಕಾರಣವಾಗಿದೆ.
-
Misuse of power doesn’t hide mistakes .. 😂 . #satyamevajayathe
— Dimple Hayathi (@DimpleHayathi) May 23, 2023 " class="align-text-top noRightClick twitterSection" data="
">Misuse of power doesn’t hide mistakes .. 😂 . #satyamevajayathe
— Dimple Hayathi (@DimpleHayathi) May 23, 2023Misuse of power doesn’t hide mistakes .. 😂 . #satyamevajayathe
— Dimple Hayathi (@DimpleHayathi) May 23, 2023
ಸೆಲ್ಲಾರ್‌ನಲ್ಲಿ ಕಾರು ನಿಲ್ಲಿಸಿದಾಗ ನಟಿ ಮತ್ತು ಡೇವಿಡ್ ಇಬ್ಬರು ಪ್ರತಿ ದಿನವೂ ಡಿಸಿಪಿಯವರ ಕಾರಿನ ಕವರ್ ತೆಗೆಯುವುದು ಮತ್ತು ಕಾಲಿನಿಂದ ಒದೆಯುವುದು ಮುಂತಾದುದನ್ನು ಮಾಡುತ್ತಾರೆ. ಅಷ್ಟೇ ಅಲ್ಲ, ಉದ್ದೇಶಪೂರ್ವಕವಾಗಿ ಡಿಸಿಪಿ ಕಾರಿಗೆ ತಮ್ಮ ಕಾರನ್ನು ಡಿಂಪಲ್ ಹಯಾತಿ ನಿಲ್ಲಿಸುತ್ತಾರೆ. ಇದೇ ತಿಂಗಳ 14ರಂದು ಡಿಂಪಲ್ ಹಯಾತಿ ತಮ್ಮ ಕಾರಿನಿಂದ ಡಿಸಿಪಿ ಕಾರಿಗೆ ಗುದ್ದಿದ್ದಾರೆ. ಇದರಿಂದ ಕಾರಿನ ಮುಂಭಾಗ ಜಖಂಗೊಂಡಿದೆ ಎಂದು ಡಿಸಿಪಿ ರಾಹುಲ್ ಹೆಗಡೆ ಕಾರಿನ ಚಾಲಕ ಚೇತನ್ ಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನ ಮೇರೆಗೆ ಜುಬಿಲಿ ಹಿಲ್ಸ್ ಠಾಣೆ ಪೊಲೀಸರು ಸೆಲ್ಲಾರ್‌ನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದ್ದಾರೆ. ಇದರ ಆಧಾರದ ಮೇಲೆ ನಟಿ ಡಿಂಪಲ್ ಹಯಾತಿ ಹಾಗೂ ಡೇವಿಡ್ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದರ ಭಾಗವಾಗಿ ನಟಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಂಪಲ್ ಹಯಾತಿ ಪರ ವಕೀಲ ಪಾಲ್ ಸತ್ಯನಾರಾಯಣ, ನಟಿ ಹಯಾತಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಡಿಸಿಪಿ ರಾಹುಲ್ ಹೆಗಡೆ ಹಲವು ಬಾರಿ ನಟಿ ಜೊತೆಗೆ ಅಸಭ್ಯವಾಗಿ ಮಾತನಾಡಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡು ಕಾರಿಗೆ ಒದ್ದಿದ್ದಾರೆ. ಆದರೆ, ಡಿಸಿಪಿ ಅಧಿಕಾರಿಯಾಗಿ ಒಬ್ಬ ಮಹಿಳೆಯೊಂದಿಗೆ ಹೇಗೆ ವರ್ತಿಸಬೇಕೆಂದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಟಿ ಹಯಾತಿ ಟ್ವೀಟ್: ಇದೇ ವೇಳೆ, ಡಿಂಪಲ್ ಹಯಾತಿ ಟ್ವೀಟ್ ಮಾಡಿದ್ದು, ಅಧಿಕಾರದ ದುರ್ಬಳಕೆಯಿಂದ ತಪ್ಪುಗಳನ್ನು ಮರೆಮಾಚಲು ಸಾಧ್ಯವಿಲ್ಲ. ಸತ್ಯಮೇವ ಜಯತೆ ಎಂದು ಹೇಳಿದ್ದಾರೆ. ಜೊತೆಗೆ ಈಗ ನಡೆಯುವ ವಿಷಯದ ಬಗ್ಗೆ ನನ್ನ ಅಭಿಮಾನಿಗಳ ಕಾಳಜಿಯನ್ನು ಅರ್ಥ ಮಾಡಿಕೊಳ್ಳುತ್ತೇನೆ. ತಾಳ್ಮೆಯಿಂದ ಇರಿ ಎಂದು ಮನವಿ ಮಾಡುತ್ತೇನೆ. ಶೀಘ್ರದಲ್ಲೇ ನಮ್ಮ ಕಾನೂನು ತಂಡ ಪರಿಹಾರ ಕೊಂಡುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪತಿ, ಪುತ್ರನ ಜೊತೆ ಮೆಕ್ಕಾ ಯಾತ್ರೆ ಕೈಗೊಂಡ ನಟಿ ಸಂಜನಾ ಗಲ್ರಾನಿ: ಫೋಟೋಗಳು..