ತೆಲುಗಿನ ಮ್ಯಾಚೋ ಸ್ಟಾರ್ ಖ್ಯಾತಿಯ ಗೋಪಿಚಂದ್ ಹಾಗೂ ಕನ್ನಡದ ಎ. ಹರ್ಷ ಕಾಂಬೋದ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಗೋಪಿಚಂದ್ ಜನ್ಮದಿನದ ಪ್ರಯುಕ್ತ ಫಸ್ಟ್ ಲುಕ್ ಹಾಗೂ ಟೈಟಲ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. 'ಭೀಮ'ನಾಗಿ ಮ್ಯಾಚೋ ಸ್ಟಾರ್ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನಿರ್ದೇಶಿಸಿರುವ ಎ.ಹರ್ಷಗೆ ಇದು ಟಾಲಿವುಡ್ನಲ್ಲಿ ಮೊದಲ ಸಿನಿಮಾ. ಭೀಮ ಸಿನಿಮಾ ಕೌಟುಂಬಿಕ ಹಾಗೂ ಆಕ್ಷನ್ ಎಂಟರ್ಟೈನರ್ ಕಥಾಹಂದರ ಹೊಂದಿದೆ. ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ನಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ಅಂದ ಹಾಗೇ ಭೀಮ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ. ಸ್ವಾಮಿ.ಜೆ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ಡಾ.ರವಿವರ್ಮಾ ಸ್ಟಂಟ್ ಚಿತ್ರಕ್ಕಿದೆ. ಹೈದರಾಬಾದ್ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾಬಳಗದ ಅಪ್ಡೇಟ್ ಅನ್ನು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ.
ಇದನ್ನೂ ಓದಿ: 'ಆನ್ಲೈನ್ ಮದುವೆ, ಆಫ್ಲೈನ್ ಶೋಭನ'.. ನಿಮ್ಮ ಮುಂದೆ ಬರ್ತಿದ್ದಾರೆ 'ಕಾಮಿಡಿ ಕಿಲಾಡಿಗಳು'
'ಭೀಮ' ಮೂಲಕ ಹರ್ಷ ಟಾಲಿವುಡ್ಗೆ ಪ್ರವೇಶ: ಸಿನಿಮಾಗಳಲ್ಲಿ ನಟನಾಗಿದ್ದ ಹರ್ಷ ನಿರ್ದೇಶಕ ಫೀಲ್ಡ್ಗೆ ಇಳಿದು ಕೆಲ ವರ್ಷಗಳೇ ಆಗಿದೆ. ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ಸ್ಯಾಂಡಲ್ವುಡ್ನಲ್ಲಿ ಮಾಡಿದ್ದಾರೆ. ಇದೀಗ ಮೊದಲ ಬಾರಿಗೆ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಗೋಪಿಚಂದ್ ಜೊತೆ ಭೀಮ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ನಂತರ ನಟಸಿಂಹ ನಂದಮೂರಿ ಬಾಲಕೃಷ್ಣ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ಬಹುತಾರಾಗಣದ ಪ್ರಾಜೆಕ್ಟ್ ಮಾಡಲಿದ್ದಾರೆ. ಇದರಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸೇರಿಕೊಳ್ಳುವ ನಿರೀಕ್ಷೆಯಿದೆ.
ಗೋಪಿಚಂದ್ 31ನೇ ಸಿನಿಮಾ: ಟಾಲಿವುಡ್ ಸ್ಟಾರ್ ನಟ ಗೋಪಿಚಂದ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಟಾಲಿವುಡ್ ಜನತೆಗೆ ಇಂದೇ ಗೋಪಿಚಂದ್ ತಮ್ಮ 31 ನೇ ಸಿನಿಮಾವನ್ನು ಘೋಷಿಸಿದ್ದಾರೆ. ಹರ್ಷ ಜೊತೆ ಭೀಮ ಸಿನಿಮಾ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಬೆಳ್ಳಿತೆರೆಯಲ್ಲಿ ಗೋಪಿಚಂದ್ ಖಾಕಿ ಧರಿಸದೇ ಬಹಳ ದಿನಗಳೇ ಆಗಿದೆ.
ಇದೀಗ ಮತ್ತೆ ಪೊಲೀಸ್ ಪಾತ್ರಕ್ಕೆ ಸೈ ಅಂದಿದ್ದಾರೆ. ಗೋಪಿಚಂದ್ ಈ ಹಿಂದೆ 2010 ರಲ್ಲಿ ಪುರಿ ಜಗನ್ನಾಥ್ ಅವರ 'ಗೋಲಿಮಾರ್' ಚಿತ್ರದಲ್ಲಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲಿ ‘ಗಂಗಾರಾಮ್’ ಎಂಬ ಪವರ್ ಫುಲ್ ಪಾತ್ರದಲ್ಲಿ ಮಿಂಚಿದ್ದರು. ಈ ಹಿಂದೆ ‘ಶೌರ್ಯಂ’ ಮತ್ತು ‘ಆಂಧ್ರುಡು’ ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಗಳು ಬ್ಲಾಕ್ ಬಸ್ಟರ್ ಆಗದಿದ್ದರೂ ಪ್ರೇಕ್ಷಕರ ಮನಗೆದ್ದಿವೆ. ಹೀಗಾಗಿಯೇ ಭೀಮ ಚಿತ್ರದ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದು ಗೋಪಿಚಂದ್ ಅವರ ವೃತ್ತಿಜೀವನದಲ್ಲಿ ಬಿಗ್ ಬಜೆಟ್ ಚಿತ್ರವಾಗಲಿದೆ.
ಇದನ್ನೂ ಓದಿ: Darling Krishna Birthday: ಹ್ಯಾಪಿ ಬರ್ತ್ಡೇ 'ಡಾರ್ಲಿಂಗ್'.. ಸಿನಿ ರಂಗದಲ್ಲಿ ದಶಕ ಪೂರೈಸಿದ ಕೃಷ್ಣ