ಬೆಂಗಳೂರು : ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ಗೆ ಕೆಲ ದುಷ್ಕರ್ಮಿಗಳು ಬೆದರಿಕೆ ಪತ್ರಗಳನ್ನ ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಾರ್ಚ್ 10ರಂದು ಬಂದ ಅನಾಮಧೇಯ ಪತ್ರಗಳಲ್ಲಿ ಸುದೀಪ್ ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನ ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ. ಖಾಸಗಿ ವಿಡಿಯೋ ರಿಲೀಸ್ ಮಾಡೋದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಗೆ ಸುದೀಪ್ ಆಪ್ತ ಜಾಕ್ ಮಂಜು ದೂರು ನೀಡಿದ್ದಾರೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪತ್ರದಲ್ಲೇನಿದೆ?: ಸುದೀಪ್ಗೆ ಅನಾಮಧ್ಯೇಯ ಪತ್ರಗಳ ಮೂಲಕ ಅವಾಚ್ಯವಾಗಿ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಸುದೀಪ್ ಕುಟುಂಬವು ಸಮಾಜದಲ್ಲಿ ಗೌರವಾನ್ವಿತ ಕುಟುಂಬವಾಗಿದ್ದು, ಈ ರೀತಿ ಸಂಚು ರೂಪಿಸಿ ಬೆದರಿಕೆ ಪತ್ರಗಳನ್ನು ಕಳುಹಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಟರ ಆಪ್ತ ಜಾಕ್ ಮಂಜು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಪಂಜುರ್ಲಿ ದೈವದ ವೇಷ ಧರಿಸಿ IPL ಪಂದ್ಯ ವೀಕ್ಷಿಸಿದ ವ್ಯಕ್ತಿ; ತುಳುನಾಡಿನ ಜನರ ಅಸಮಾಧಾನ
ಇದನ್ನು ಓದಿ:'ರೈನ್ಬೋ' ಸಮಂತಾ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ.. ಶಾಕುಂತಲಂ ತಾರೆಯ ಅಭಿಮಾನಿಗಳ ಅಸಮಾಧಾನ
ಸದ್ಯ ಸುದೀಪ್ ಮ್ಯಾನೇಜರ್ ಹಾಗೂ ಆಪ್ತರಾಗಿರುವ ಜಾಕ್ ಮಂಜು ನೀಡಿರುವ ದೂರಿನ ಅನ್ವಯ ಐಪಿಸಿ 504 (ಶಾಂತಿಭಂಗ ಹಾಗೂ ಪ್ರಚೋದನೆ), 506 (ಜೀವ ಬೆದರಿಕೆ) ಹಾಗೂ ಐಟಿ ಆ್ಯಕ್ಟ್ ಅಡಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ನಟ ಸುದೀಪ್ ಬೆದರಿಕೆ ಪತ್ರ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಬೆದರಿಕೆ ಪತ್ರದ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ''ಚಿತ್ರರಂಗದವರಿಂದಲೇ ಈ ಬೆದರಿಕೆ ಪತ್ರ ಬಂದಿದೆ. ಈ ಪತ್ರಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುತ್ತೇನೆ. ಯಾರಿಗೂ ಕೂಡ ಹೆದರುವುದಿಲ್ಲ'' ಎಂದು ಹೇಳಿದ್ದಾರೆ.
ಓದಿ: ಕಿಚ್ಚ ಇಂದು ರಾಜಕೀಯ ಎಂಟ್ರಿ ವಿಚಾರ: ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಸಾಧ್ಯತೆ?