ETV Bharat / entertainment

ಕನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ; ಹೃದಯಾಘಾತದಿಂದ ಸಾವನ್ನಪ್ಪಿದ ನಟ-ನಟಿಯರಿವರು

author img

By

Published : Aug 7, 2023, 12:57 PM IST

Updated : Aug 7, 2023, 3:33 PM IST

ಕನ್ನಡ ಚಿತ್ರರಂಗ ಸೇರಿದಂತೆ ಇತರೆ ಭಾಷೆ ಸಿನಿಮಾ ನಟ-ನಟಿಯರ ಹಠಾತ್​ ಸಾವು ಅವರ ಅಭಿಮಾನಿಗಳಲ್ಲಿ ತೀವ್ರ ನೋವು ಉಂಟು ಮಾಡುತ್ತಿದೆ.

heart attack in Kannada Film industry
ಹೃದಯಘಾತಕ್ಕೆ ಸಾವನ್ನಪ್ಪಿದ ನಟ-ನಟಿಯರಿವರು

ಇತ್ತೀಚಿನ ದಿನದಲ್ಲಿ ಯುವ ಜನತೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಅನೇಕ ಪ್ರಕರಣಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಿವೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ರೀತಿ ಯುವ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಕೇವಲ ಉದ್ಯಮಕ್ಕೆ ಮಾತ್ರವಲ್ಲ, ರಾಜ್ಯಕ್ಕೆ ಬರಸಿಡಿಲು ಬಡಿಯುವಂತೆ ಮಾಡಿವೆ. ನಟ ಪುನೀತ್​ ರಾಜ್​ ಕುಮಾರ್​, ಚಿರಂಜೀವಿ ಸರ್ಜಾ ಅರ ಸಾವಿನ ಪ್ರಕರಣಗಳು ಯುವ ಜನತೆಯಲ್ಲಿ ಆತಂಕ ಮೂಡಿಸಿದ್ದು, ಚಿಂತೆಗೆ ಕಾರಣವಾಗಿದೆ.

ಕನ್ನಡ ಚಿತ್ರರಂಗ ಸೇರಿದಂತೆ ಇತರೆ ಭಾಷೆ ಸಿನಿಮಾ ನಟರಲ್ಲಿ ಈ ರೀತಿಯ ಸಾವಿನ ಪ್ರಕರಣಗಳು ಅವರ ಅಭಿಮಾನಿಗಳಲ್ಲಿ ತೀವ್ರ ನೋವು ಉಂಟು ಮಾಡುತ್ತಿದೆ. ಚಿಕ್ಕ ಪ್ರಾಯದಲ್ಲೇ ಈ ರೀತಿ ಸಾವನ್ನಪ್ಪುತ್ತಿರುವ ಪ್ರಕರಣಕ್ಕೆ ಇದೀಗ ನಟ ವಿಜಯ್​ ರಾಘಾವೇಂದ್ರ ಅವರ ಪತ್ನಿ ಕೂಡ ಸೇರಿದ್ದಾರೆ.

ಪುನೀತ್​ ರಾಜ್​ ಕುಮಾರ್​: ಚಿತ್ರರಂಗಕ್ಕೆ ಮಾತ್ರವಲ್ಲದೇ, ಇಡೀ ದೇಶಕ್ಕೆ ದೊಡ್ಡ ಆಘಾತ ತಂದ ಸಾವಿನ ಸುದ್ದಿ ಎಂದರೆ ಅದು ಪುನೀತ್​ ರಾಜ್​​ ಕುಮಾರ್​ ಸಾವು. ಜಿಮ್​, ವರ್ಕ್​ಔಟ್​ ಮಾಡಿ, ಸದಾ ನಗುತ್ತಾ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದ ನಟ ಪುನೀತ್​ ರಾಜ್​ ಕುಮಾರ್​ ಹೃದಯಾಘಾತದಿಂದ 2021 ಅಕ್ಟೋಬರ್​ನಲ್ಲಿ ಕೊನೆಯುಸಿರೆಳೆದರು. ಅವರ ಸಾವು ಆಘಾತ, ಅಚ್ಚರಿ, ಆತಂಕವನ್ನು ಮೂಡಿಸಿತು. ಯುವ ವಯಸ್ಸಿನ, ಆರೋಗ್ಯಯುತ ವ್ಯಕ್ತಿಯನ್ನು ಹೃದಯಾಘಾತ ಪ್ರಕರಣ ಹೆಚ್ಚುತ್ತಿರುವ ಕುರಿತು ಚಿಂತೆ ಮೂಡಿಸುವಂತೆ ಮಾಡಿತು. 46 ವರ್ಷದ ಪುನೀತ್​ ಸಾವಿಗೆ ಗಡಿ, ದೇಶ ಮೀರಿ ಜನರು ಕಂಬನಿ ಮಿಡಿದಿದ್ದರು.

ಚಿರಂಜೀವಿ ಸರ್ಜಾ: ಕೋವಿಡ್​ ಸಮಯದಲ್ಲಿ ಅಂದರೆ 2020ರ ಜೂನ್​ ಸಮಯದಲ್ಲಿ ದಿಢೀರ್​ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದರು. ಕನ್ನಡ ಚಿತ್ರರಂಗದಲ್ಲಿ ಯುವ ವಯಸ್ಸಿನ ನಟರೊಬ್ಬರು ಈ ರೀತಿ ಹಠಾತ್​ ಹೃದಯಾಘಾತಕ್ಕೆ ಒಳಗಾಗಿ ಚಿಂತೆ ಮೂಡುವಂತೆ ಮಾಡಿದ ಪ್ರಕರಣ ಇದಾಗಿದ್ದು, ಇದಕ್ಕೆ ಚಿತ್ರರಂಗದ ಜೊತೆ ಇಡೀ ರಾಜ್ಯ ಕಂಬನಿ ಮಿಡಿದಿತ್ತು. ಚೊಚ್ಚಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದ ಚಿರಂಜೀವಿ ಸರ್ಜಾ ಸಾವಿನ ಬಳಿಕ, ಜನರಲ್ಲಿ ಆರೋಗ್ಯಯುತ ಜೀವನಶೈಲಿಗಳ ಬಗ್ಗೆ ಪ್ರಶ್ನೆ ಕೂಡ ಮೂಡಿತು.

ನಟ ನಿತಿನ್​ ಗೋಪಿ ಸಾವು: ವಿಷ್ಣುವರ್ಧನ್​ ಜೊತೆಗೆ ಡ್ಯಾಡಿ ಸಿನಿಮಾ ಮೂಲಕ ಜನಪ್ರಿಯವಾಗಿದ್ದ ಬಾಲ ನಟ ನಿತಿನ್​ ಗೋಪಿ. ದೊಡ್ಡವರಾದ ಬಳಿಕವೂ ಕಿರುತೆರೆಯಲ್ಲಿ ಮಿಂಚಿದ್ದ ನಟ. ಇವರು ಕೂಡ ಕಳೆದೆರಡು ತಿಂಗಳ ಹಿಂದೆ ಅಂದರೆ ಜೂನ್​ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. 39 ವರ್ಷ ವಯಸ್ಸಿನಲ್ಲಿ ನಟನ ಸಾವು ಕೂಡ ಅನೇಕ ಮಂದಿಗೆ ಶಾಕ್​ ನೀಡಿತು.

ವಿಜಯ್​ ರಾಘವೇಂದ್ರ ಪತ್ನಿ ಸಾವು: ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಎಂದೇ ಪರಿಚಿತರಾಗಿರುವ ನಟ ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬ್ಯಾಂಕಾಕ್​ ಪ್ರವಾಸಕ್ಕೆ ತೆರಳಿದ ವೇಳೆ ಅವರಿಗೆ ಲೋ ಬಿಪಿ, ಹೃದಯಘಾತವಾಗಿದೆ. 41 ವರ್ಷದ ಇವರ ಸಾವು ಇಂದಿನ ದಿನದಲ್ಲಿ ಯುವ ಜನತೆಯಲ್ಲಿ ಹೃದಯಘಾತದ ಪ್ರಕರಣ ಹೆಚ್ಚಾಗುತ್ತಿರುವುದಕ್ಕೆ ಮತ್ತೊಂದು ಸಾಕ್ಷ್ಯ ಒದಗಿಸಿದೆ.

ಬಾಲಿವುಡ್​ ಚಿತ್ರರಂಗಕ್ಕೂ ಆಘಾತ ತಂದ ಸಿದ್ಧಾರ್ಥ್​ ಶುಕ್ಲಾ ಸಾವು: ಬಿಗ್​ ಬಾಸ್​ 13ನೇ ಸೀಸನ್​ ವಿಜೇತ ಸಿದ್ದಾರ್ಥ್​ ಶುಕ್ಲಾ ಸಾವು ಕೂಡ ಅನೇಕ ಅಭಿಮಾನಿಗಳಲ್ಲಿ ಕಂಬನಿ ಮೂಡಿಸಿತು. ಬಾಲಿಕಾ ವಧು ಮೂಲಕ ಜನಪ್ರಿಯಾಗಿದ್ದ ಸಿದ್ದಾರ್ಥ್​ ಕೂಡ ಫಿಟ್ನೆಸ್​ ವಿಚಾರಕ್ಕೆ ಸಾಕಷ್ಟು ಒತ್ತು ನೀಡಿದ್ದರು. 40 ವರ್ಷದ ಸಿದ್ದಾರ್ಥ್​ ಸಾವು ಕೂಡ ಅನೇಕರಲ್ಲಿ ದಿಗ್ಬ್ರಮೆ ಮೂಡಿಸಿತು.

ಇಷ್ಟೇ ಅಲ್ಲದೇ ಇತ್ತೀಚೆಗೆ ಟಿವಿ ಶೋ ಲಪಟಗಂಜ್​ ಕಾರ್ಯಕ್ರಮದ ಮೂಲಕ ಹೆಸರಾಗಿದ್ದ ನಟ ಅರವಿಂದ್​​​ ಕುಮಾರ್​, ತೆಲುಗಿನ ಖ್ಯಾಸ ನಟ ತರಣ್​ ಭಾಸ್ಕರ್​​ ಕೂಡ 40 ವರ್ಷಕ್ಕೆ ಮೊದಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

Last Updated : Aug 7, 2023, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.