ETV Bharat / entertainment

ತೆರೆ ಹಿಂದಿನ ಬದುಕು.. ಫೇಸ್​ಬುಕ್​ನಲ್ಲಿ ಲೈವ್​ ಬಂದು ಆತ್ಮಹತ್ಯೆಗೆ ಯತ್ನಿಸಿದ 'ಕಪಿಲ್ ಶರ್ಮಾ ಶೋ' ಕಲಾವಿದ ತೀರ್ಥಾನಂದ ರಾವ್

ನಟ ಮತ್ತು ಕಾಮಿಡಿಯನ್​ ತೀರ್ಥಾನಂದ ರಾವ್ ಫೇಸ್​ಬುಕ್ ಲೈವ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Tirthanand Rao
ತೀರ್ಥಾನಂದ ರಾವ್
author img

By

Published : Jun 14, 2023, 5:15 PM IST

'ಕಾಮಿಡಿ ಸರ್ಕಸ್ ಕೆ ಅಜೂಬೆ'ಯಲ್ಲಿ ಕಪಿಲ್ ಶರ್ಮಾ ಅವರೊಂದಿಗೆ ಕೆಲಸ ಮಾಡಿದ್ದ ನಟ ಮತ್ತು ಕಾಮಿಡಿಯನ್​ ತೀರ್ಥಾನಂದ ರಾವ್ ಫೇಸ್​ಬುಕ್ ಲೈವ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ಇಂದಿನ ಸ್ಥಿತಿಗೆ ಒಬ್ಬಳು ಮಹಿಳೆಯೇ ಕಾರಣ ಎಂದು ಈ ವೇಳೆ ಆರೋಪಿಸಿದ್ದಾರೆ. ಆ ಮಹಿಳೆಯೊಂದಿಗೆ ತಾವು ಲಿವ್​ ಇನ್​ನಲ್ಲಿದ್ದು, ಆಕೆ ತನ್ನನ್ನು ಭಾವನಾತ್ಮಕವಾಗಿ ಬ್ಲ್ಯಾಕ್​ಮೇಲ್​ ಮಾಡಿರುವುದಾಗಿ ಹೇಳಿದ್ದಾರೆ.

ತೀರ್ಥಾನಂದ ರಾವ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಲೈವ್​ ಬಂದಿದ್ದರು. ಈ ವೇಳೆ ಅವರು, "ಮಹಿಳೆಯಿಂದಾಗಿ ನಾನು 3-4 ಲಕ್ಷ ಸಾಲದಲ್ಲಿದ್ದೇನೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ನನಗೆ ಅವಳ ಪರಿಚಯ ಆಯಿತು. ಆಕೆ ನನ್ನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಇದಕ್ಕೆ ಕಾರಣ ನನಗೆ ತಿಳಿದಿಲ್ಲ. ನಂತರ ಆಕೆ ನನಗೆ ಕರೆ ಮಾಡಿ ಭೇಟಿಯಾಗಬೇಕೆಂದು ಹೇಳುತ್ತಿದ್ದಳು" ಎಂದು ತಮಗೆ ಆಗಿದ್ದ ನೋವನ್ನೆಲ್ಲ ಹಂಚಿಕೊಂಡು ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನೂ ಓದಿ: Sushant Singh: ಸುಶಾಂತ್ ಸಿಂಗ್​ ಮೂರನೇ ಪುಣ್ಯಸ್ಮರಣೆ..​ ಸಹೋದರಿಯಿಂದ ಹೃದಯಸ್ಪರ್ಶಿ ಅಕ್ಷರ ನಮನ

ಲೈವ್​ ವೀಕ್ಷಿಸುತ್ತಿದ್ದ ತೀರ್ಥಾನಂದ ಗೆಳೆಯರು ಕೂಡಲೇ ನಟನ ಮನೆಗೆ ಧಾವಿಸಿದ್ದಾರೆ. ಅಷ್ಟರಾಗಲೇ ವಿಷ ತೆಗೆದುಕೊಂಡ ಕಾರಣ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಸ್ನೇಹಿತರು ಪೊಲೀಸರಿಗೆ ಕರೆ ಮಾಡಿ ಬರುವಂತೆ ತಿಳಿಸಿದರು. ನಂತರ ತೀರ್ಥಾನಂದರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದು ಮೊದಲ ಬಾರಿಯಲ್ಲ..! ಅಂದಹಾಗೇ, ಅವರು ಈ ರೀತಿಯಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕಿಂತಲೂ ಮುಂಚೆ 2021ರ ಡಿಸೆಂಬರ್​ನಲ್ಲೂ ಫೇಸ್​ಬುಕ್​ ಲೈವ್​ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಬಳಿಕ ಸಂದರ್ಶನವೊಂದರಲ್ಲಿ ತಾವು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ಮತ್ತು ಕೌಟುಂಬಿಕ ಸಮಸ್ಯೆಗಳೂ ಇರುವುದಾಗಿ ಹೇಳಿದ್ದರು. ಜೊತೆಗೆ ನಾನು ಆಸ್ಪತ್ರೆಯಲ್ಲಿದ್ದಾಗ ಯಾರೂ ನನ್ನನ್ನು ನೋಡಲು ಬರಲಿಲ್ಲ. ಡಿಸ್ಚಾರ್ಜ್ ಆದ ಬಳಿಕ ಮನೆಗೆ ಬಂದರೂ ಒಂಟಿಯಾಗಿದ್ದೆ ಎಂದು ನೊಂದು ನುಡಿದಿದ್ದರು.

ತೀರ್ಥಾನಂದರು 2016 ರಲ್ಲಿ ಕಾಮಿಡಿ ಸರ್ಕಸ್ ಕೆ ಅಜೂಬೆಯಲ್ಲಿ ಕಪಿಲ್ ಶರ್ಮಾ ಅವರೊಂದಿಗೆ ಸೇರಿಕೊಂಡರು. ಆ ಬಳಿಕ ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಿದ್ದರಿಂದ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು. ಹಿಂದಿ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ತೀರ್ಥಾನಂದರು ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ನಟ ಶಾರುಖ್​ ಖಾನ್​ಗೆ ಮುತ್ತಿಟ್ಟ ಮಹಿಳಾ ಅಭಿಮಾನಿ: ವಿಡಿಯೋ ವೈರಲ್, ನೆಟಿಜನ್ಸ್​ ಅಸಾಮಾಧಾನ

ಕಪಿಲ್​ ಶರ್ಮಾ ಶೋ ಕಳೆದ ಏಳು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದು ಹಿಂದಿ ಭಾಷೆಯ ಸ್ಟಾಂಡ್​ ಅಪ್​ ಕಾಮಿಡಿ ಮತ್ತು ಟಾಕ್​ ಶೋ ಆಗಿದೆ. ಕಾರ್ಯಕ್ರಮದ ಮೊದಲ ಸೀಸನ್​ 2016 ರಲ್ಲಿ ಪ್ರಾರಂಭಗೊಂಡಿತು. ಈಗಾಗಲೇ ಅನೇಕ ಸ್ಟಾರ್​ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ. ಕಪಿಲ್​ ಶರ್ಮಾ ಅನೇಕ ಪ್ರೇಕ್ಷಕರನ್ನು ಸಂಪಾದಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.