ಲೋಕೇಶ್ ಕನಗರಾಜ್ ಅವರ ವಿಕ್ರಮ್ ಸಿನಿಮಾದಲ್ಲಿ ರೋಲೆಕ್ಸ್ ಪಾತ್ರ ಸಂಚಲನ ಸೃಷ್ಟಿಸಿದ್ದು ನಿಮಗೆ ಗೊತ್ತಿದೆ. ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ಅಭಿನಯ ಸಖತ್ ಸದ್ದು ಮಾಡಿತ್ತು. ಖಳನಾಯಕನ ಪಾತ್ರದಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯರನ್ನು ಕಂಡ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದರು. ಇದೇ ರೋಲೆಕ್ಸ್ ಹೊಸ ಸಿನಿಮಾ ಆಗಲಿದೆ ಎಂಬ ಸುಳಿವನ್ನು ಸೂರ್ಯ ತಿಳಿಸಿದ್ದಾರೆ.
ದಳಪತಿ ವಿಜಯ್ ಮತ್ತು ತ್ರಿಶಾ ಅಭಿನಯದ ಲಿಯೋ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಖತ್ ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆ. ಆದಾಗ್ಯೂ ಇವರು ಕಾರ್ತಿ, ರಾಮ್ ಚರಣ್, ರಜನಿಕಾಂತ್, ಪ್ರಭಾಸ್ ಅವರಂತಹ ಸೂಪರ್ ಸ್ಟಾರ್ಗಳ ಸಿನಿಮಾ ನಿರ್ದೇಶಿಸಲಿದ್ದಾರೆ ಎಂಬ ವದಂತಿಗಳಿವೆ. ಇತ್ತೀಚಿನ ಮಾಹಿತಿ ಪ್ರಕಾರ, ಲೋಕೇಶ್ ಕನಗರಾಜ್ ಅವರು ಸೂರ್ಯ ಅವರೊಂದಿಗೂ ಕೆಲಸ ಮಾಡಲಿದ್ದಾರೆ.
ನಿರ್ದೇಶಕರು ನನಗೆ ಒನ್ ಲೈನ್ ಸ್ಕ್ರಿಪ್ಟ್ ನೀಡಿದ್ದಾರೆ, ನನಗೆ ಈ ಕಾನ್ಸೆಪ್ಟ್ ಇಷ್ಟವಾಗಿದೆ ಎಂದು ನಟ ಸೂರ್ಯ ಅವರು ಫ್ಯಾನ್ಸ್ ಮೀಟ್ ವೇಳೆ ಬಹಿರಂಗಪಡಿಸಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಅಭಿಮಾನಿಗಳು ಕುತೂಹಲರಾಗಿದ್ದಾರೆ. ವಿಕ್ರಮ್ ಬಿಡುಗಡೆ ಆದಾಗ ಸಿನಿಮಾ ಮತ್ತು ಪಾತ್ರಗಳ ಬಗ್ಗೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೂರ್ಯ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರೂ ಕೂಡ, ಅವರ ರೋಲೆಕ್ಸ್ ಪಾತ್ರ ಪ್ರಭಾವ ಬೀರಿತ್ತು. ಇಂದಿಗೂ ರೋಲೆಕ್ಸ್ ಪಾತ್ರ ಜನಪ್ರಿಯ.
ದಕ್ಷಿಣ ಚಿತ್ರರಂಗದ ಹಿರಿಯ, ಪ್ರಸಿದ್ಧ ನಟ ಕಮಲ್ ಹಾಸನ್ ಮುಖ್ಯಭೂಮಿಕೆಯ ವಿಕ್ರಮ್ ಚಿತ್ರದಲ್ಲಿ ನಟ ಸೂರ್ಯ ಅವರು ಅತಿಥಿ ಪಾತ್ರ ವಸಿದ್ದರು. ಕ್ಲೈಮ್ಯಾಕ್ಸ್ನಲ್ಲಿ ರೋಲೆಕ್ಸ್ ಆಗಿ ಎಂಟ್ರಿ ಕೊಟ್ಟಿದ್ದರು. ಇದು ದಕ್ಷಿಣ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಅತಿಥಿ ಪಾತ್ರವಾಗಿ ಗಮನ ಸೆಳೆಯಿತು. ವಿಕ್ರಮ್ ಸಿನಿಮಾದ ರೋಲೆಕ್ಸ್ ಪಾತ್ರ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು. ರೋಲೆಕ್ಸ್ ಪಾತ್ರ ಪಡೆದ ಪ್ರತಿಕ್ರಿಯೆ ನೋಡಿದ್ರೆ, ಲೋಕೇಶ್ ಕನಗರಾಜ್ ಅವರ ರೋಲೆಕ್ಸ್ ಸಿನಿಮಾ ನಿರ್ಧಾರವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ರೋಲೆಕ್ಸ್ ಪಾತ್ರವನ್ನು ಅಭಿವೃದ್ಧಿಪಡಿಸಿ, ಪೂರ್ಣ ಪ್ರಮಾಣದ ಸಿನಿಮಾ ಮಾಡಿದ್ರೆ ಖಂಡಿತ ಯಶಸ್ವಿ ಆಗುತ್ತೆ ಅನ್ನೋದು ಫ್ಯಾನ್ಸ್ ರಿಯಾಕ್ಷನ್.
ಇದನ್ನೂ ಓದಿ: Jailer: ದೇಶಾದ್ಯಂತ ಜೈಲರ್ ಹವಾ - ರಜನಿಕಾಂತ್ ಸಿನಿಮಾ ವೀಕ್ಷಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್
ಫ್ಯಾನ್ಸ್ ಜೊತೆಗಿನ ಸಂವಾದದ ಸಂದರ್ಭ ಸೂರ್ಯ ತಮ್ಮ ಮುಂಬರುವ ಚಿತ್ರಗಳ ಕುರಿತು ಸಾಕಷ್ಟು ವಿಚಾರ ಹಂಚಿಕೊಂಡರು. ವಿಡುತಲೈ ಸೀಕ್ವೆಲ್ ಶೂಟಿಂಗ್ ಪೂರ್ಣಗೊಂಡ ನಂತರ, ವೆಟ್ರಿಮಾರನ್ ಜೊತೆಗಿನ ಬಹುನಿರೀಕ್ಷಿತ ಸಿನಿಮಾ ವಾಡಿವಾಸಲ್ ಪ್ರಾರಂಭವಾಗಲಿದೆ. ಶಿವ ನಿರ್ದೇಶನದ ನಟನ ಮುಂದಿನ ಸಿನಿಮಾ ಕಂಗುವ ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಮೂಡಿ ಬಂದಿದೆಯಂತೆ. ಸದ್ಯ ಕಂಗುವ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ.
ಇದನ್ನೂ ಓದಿ: Jawan Song: ನಾಳೆ ಜವಾನ್ ರೊಮ್ಯಾಂಟಿಕ್ ಸಾಂಗ್ ರಿಲೀಸ್; ಚಲೇಯಾ ಟೀಸರ್ ನೋಡಿದ್ರಾ?