ETV Bharat / entertainment

'ನನ್ನ ಕೈಯಿಂದ ಸಿಗರೇಟ್‌ ಕಿತ್ತು ಬಿಸಾಡಿದ್ದರು': ಶರತ್ ಬಾಬು ಬಗ್ಗೆ ರಜನಿಕಾಂತ್ ಭಾವುಕ ನುಡಿ - ನಟ ಶರತ್ ಬಾಬು

ನಟ ಶರತ್ ಬಾಬು ಅವರಿಗೆ ನಿನ್ನೆ ಅಂತಿಮ ನಮನ ಸಲ್ಲಿಸಿದ ಸೂಪರ್‌ ಸ್ಟಾರ್ ರಜನಿಕಾಂತ್‌ ತಮ್ಮ ಆತ್ಮೀಯ ಗೆಳೆಯನೊಂದಿಗಿನ ನೆನಪುಗಳನ್ನು ಹಂಚಿಕೊಂಡರು.

Rajinikanth and Sarath Babu
ರಜನಿಕಾಂತ್​ ಹಾಗೂ ಶರತ್​ ಬಾಬು
author img

By

Published : May 24, 2023, 10:54 AM IST

ಚೆನ್ನೈ (ತಮಿಳುನಾಡು) : ಐದು ದಶಕಗಳ ಸುದೀರ್ಘ ಸಿನಿಮಾ ಜೀವನದಲ್ಲಿ ಪ್ರಮುಖ ನಾಯಕ ನಟನಲ್ಲದೇ ಇದ್ದರೂ ದಿ.ಮುಖ್ಯಮಂತ್ರಿ ಜೆ.ಜಯಲಲಿತಾ ಅವರೆದುರು ನಟಿಸಿದ ಕೊನೆಯ ನಾಯಕ ಎಂಬ ಹೆಗ್ಗಳಿಕೆಗೆ ಶರತ್ ಬಾಬು ಪಾತ್ರರಾಗಿದ್ದರು. ಇವರು ಸೂಪರ್ ಸ್ಟಾರ್‌ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ನೆಚ್ಚಿನ ಸ್ನೇಹಿತರೂ ಹೌದು. ಹಿರಿಯ ನಟನ ನಿಧನಕ್ಕೆ ಇಬ್ಬರೂ ಸ್ಟಾರ್​ ನಟರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಚೆನ್ನೈನ ತ್ಯಾಗರಾಯ ನಗರದಲ್ಲಿ ಪಾರ್ಥಿವ ಶರೀರದ ದರ್ಶನ ಪಡೆದ ರಜನಿಕಾಂತ್ ಆತ್ಮೀಯ ಗೆಳೆಯನೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಧೂಮಪಾನ ತ್ಯಜಿಸುವಂತೆ ಸಲಹೆ ನೀಡಿದ್ದಲ್ಲದೇ ತಮ್ಮ ಕೈಯಿಂದ ಸಿಗರೇಟ್ ಕಿತ್ತುಕೊಂಡು ಬಿಸಾಡಿರುವುದನ್ನು ಅವರು ಸ್ಮರಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲೇ ನನಗೆ ಶರತ್ ಬಾಬು ಪರಿಚಿತರು. ಅವರೊಬ್ಬ ಒಳ್ಳೆಯ ಸ್ನೇಹಿತ. ಮುಖದಲ್ಲಿ ಸದಾ ನಗು ಇರುತ್ತಿತ್ತು. ಅವರೆದುರಲ್ಲಿ ನಾನು ಧೂಮಪಾನ ಮಾಡುತ್ತಿರಲಿಲ್ಲ" ಎಂದು ಭಾವುಕರಾದರು. ಶರತ್‌ಬಾಬು ಕೋಪಗೊಂಡಿರುವುದಾಗಲಿ ಅಥವಾ ಗಂಭೀರವಾಗಿ ಇದ್ದುದನ್ನು ನಾನು ಕಂಡಿಲ್ಲ. ಅವರೊಂದಿಗೆ ನಟಿಸಿದ ಮುಳ್ಳುಮ್ ಮಲರುಮ್, ಮುತ್ತು, ಅಣ್ಣಾಮಲೈ ಮತ್ತು ವೆಲೈಕ್ಕರನ್ ಚಿತ್ರಗಳು ಸೂಪರ್ ಹಿಟ್‌ ಆಗಿವೆ. ನನ್ನ ಬಗ್ಗೆ ಅವರಿಗೆ ಅಪಾರ ಪ್ರೀತಿ, ವಾತ್ಸಲ್ಯ ಇತ್ತು. ನಾನು ಧೂಮಪಾನ ಮಾಡುತ್ತಿರುವುದು ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಕೆಲವೊಮ್ಮೆ ನನ್ನ ಕೈಯಿಂದ ಸಿಗರೇಟ್‌ ಕಿತ್ತು ಬಿಸಾಡುತ್ತಿದ್ದರು. ಆರೋಗ್ಯ, ಆಯುಷ್ಯಕ್ಕೆ ಸಿಗರೇಟ್‌ ಒಳ್ಳೆದಲ್ಲ ಎಂದು ಸಲಹೆ ನೀಡುತ್ತಿದ್ದರು" ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ನಟ ಶರತ್​ಬಾಬು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಜನಿಕಾಂತ್

"ಅಣ್ಣಾಮಲೈ ಚಿತ್ರದ ಶೂಟಿಂಗ್ ವೇಳೆ ಒಂದು ದೃಶ್ಯದಲ್ಲಿ ಭಾವಾನಾತ್ಮಕವಾಗಿ ನಟಿಸಬೇಕಿತ್ತು. ಎಷ್ಟೇ ಟೇಕ್‌ ತೆಗೆದುಕೊಂಡರೂ ಆ ದೃಶ್ಯದಲ್ಲಿ ಸರಿಯಾಗಿ ಪಾತ್ರ ನಿರ್ವಹಿಸಲು ನನಗೆ ಸಾಧ್ಯವಾಗಿರಲಿಲ್ಲ. ಇದರಿಂದ ನಾನು ತುಂಬಾ ಚಿಂತಿತನಾಗಿದ್ದೆ. ಇದನ್ನು ಅರಿತ ಅವರು ನೀವು ಸ್ವಲ್ಪ ನಾಚಿಕೆಪಡುತ್ತೀರಿ. ಧೂಮಪಾನ ಮಾಡಿ ಎಂದು ನನಗೆ ಸಿಗರೇಟ್‌ ನೀಡಿದ್ದರು" ಎಂದು ನೆನಪಿಸಿಕೊಂಡರು.

ಕಮಲ್ ಹಾಸನ್ ಸಂತಾಪ: ಬೆಳ್ಳಿ ತೆರೆ ಮಾತ್ರವಲ್ಲದೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರಿಗೂ ಶರತ್ ಬಾಬು ಆತ್ಮೀಯ ಸ್ನೇಹಿತರಾಗಿದ್ದರು. "ಒಬ್ಬ ಉತ್ತಮ ನಟ ಮತ್ತು ಆತ್ಮೀಯ ಸ್ನೇಹಿತ ನಿಧನರಾಗಿದ್ದಾರೆ. ಅವರ ಜತೆಗೆ ನಾನು ನಟಿಸಿದ ಆ ದಿನಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಅಚ್ಚುಕಟ್ಟಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರರಂಗ ಒಬ್ಬ ಅತ್ಯುತ್ತಮ ನಟನನ್ನು ಕಳೆದುಕೊಂಡಿದೆ" ಎಂದು ಕಮಲ್ ಹಾಸನ್​ ಸಂತಾಪ ಸೂಚಿಸಿದ್ದಾರೆ.

ಶರತ್ ಬಾಬು ಅವರನ್ನು ತಮಿಳು ಚಲನಚಿತ್ರಗಳಿಗೆ ಅವರ ಗುರು ಮತ್ತು ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಕೆ.ಬಾಲಚಂದರ್ ಪರಿಚಯಿಸಿದರು. ಅವರ ಸ್ಮರಣೀಯ ಪಾತ್ರವೆಂದರೆ ಮಹೇಂದ್ರನ್ ನಿರ್ದೇಶಿಸಿದ 'ಮುಳ್ಳುಮ್ ಮಲರುಮ್' ಚಿತ್ರ. ಇದರಲ್ಲಿ ಕೆ.ಜೆ ಯೇಸುದಾಸ್ ಅವರ ಧ್ವನಿಯಲ್ಲಿ ಇಳಯರಾಜ ಸೌಂದರ್ಯದ 'ಸೆಂತಝಂ ಪೂವಿಲ್ ವಂತದುಂ ತೆಂಡ್ರಾಲ್' ಅತ್ಯಂತ ಜನಪ್ರಿಯ ಹಾಡು. ಈ ಗೀತೆ ತಮಿಳು ಚಿತ್ರಪ್ರೇಮಿಗಳ ಹೃದಯದಲ್ಲಿ ಶರತ್ ಬಾಬು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. 'ನಧಿಯೈ ತೇಡಿವಂತ ಕಡಲ್' ಚಿತ್ರದಲ್ಲಿ ಜಯಲಲಿತಾ ಅವರಿಗಿಂತ ನಾಲ್ಕು ವರ್ಷ ಚಿಕ್ಕವರಾಗಿದ್ದರೂ ಶರತ್​ ಬಾಬು ಅವರ ಎದುರು ನಟಿಸಲು ಒಪ್ಪಿಕೊಂಡಿದ್ದರು ಎಂದು ಚಿತ್ರದ ನಿರ್ದೇಶಕರಾದ ಖ್ಯಾತ ಸಂಪಾದಕ ಬಿ.ಲೆನಿನ್ ಹೇಳಿದ್ದಾರೆ.

ಹಲವು ವರ್ಷಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಶರತ್ ಬಾಬು (71) ಸೋಮವಾರ ಹೈದರಾಬಾದ್‌ನಲ್ಲಿ ನಿಧನರಾದರು. ಸುಹಾಸಿನಿ ಮಣಿರತ್ನಂ, ಶರತ್ ಕುಮಾರ್, ಸೂರ್ಯ, ಕಾರ್ತಿ ಸೇರಿದಂತೆ ಚಿತ್ರರಂಗದ ಹಲವರು ಮಂಗಳವಾರ ಅವರ ನಿವಾಸದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ನಗರದ ಗಿಂಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಇದನ್ನೂ ಓದಿ: 'ಅಮೃತವರ್ಷಿಣಿ' ಖ್ಯಾತಿಯ ಹಿರಿಯ ನಟ ಶರತ್​ಬಾಬು ಅನಾರೋಗ್ಯದಿಂದ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.