ETV Bharat / entertainment

ಗಣರಾಜ್ಯೋತ್ಸವ 2023: ದೇಶಭಕ್ತಿ ಮೂಡಿಸುವ ಸಂಗೀತಗಳಿವು!

ದೇಶಭಕ್ತಿ ಮೂಡಿಸುವ ಬಾಲಿವುಡ್ ಚಿತ್ರರಂಗದ ಕೆಲ ಸಂಗೀತಗಳು ಈ ಕೆಳಗಿನಂತಿದೆ.

Songs that celebrate India
ದೇಶಭಕ್ತಿ ಮೂಡಿಸುವ ಸಂಗೀತಗಳು
author img

By

Published : Jan 26, 2023, 7:30 PM IST

ಇಂದು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಬ್ರಿಟಿಷ್​ ದಾಸ್ಯದಿಂದ ಸಂಪೂರ್ಣವಾಗಿ ಹೊರಬಂದು ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡ ಮಹತ್ವದ ದಿನವಿದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ ನೇತೃತ್ವದಲ್ಲಿ ರೂಪಿತವಾದ ಭವ್ಯ ಸಂವಿಧಾನವನ್ನು ಜನವರಿ 26, 1950 ರಂದು ಜಾರಿ ಮಾಡಲಾಯಿತು. ಈ ಹಿನ್ನೆಲೆ ಪ್ರತೀ ಜನವರಿ 26ನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದ 74ನೇ ಗಣರಾಜ್ಯೋತ್ಸ ವ ಆಚರಿಸಲಾಗಿದ್ದು, ದೇಶಭಕ್ತಿ ಮೂಡಿಸುವ ಕೆಲ ಸಂಗೀತಗಳು ಈ ಕೆಳಗಿನಂತಿದೆ.

  • " class="align-text-top noRightClick twitterSection" data="">

ದೇಶಭಕ್ತಿ ಮೂಡಿಸುವ ಹಾಡುಗಳು: ಕೆಲವು ದೇಶಭಕ್ತಿಯ ಸಂಗೀತವನ್ನು ಕೇಳುವ ಮೂಲಕ ಆಪ್ತ ಸ್ನೇಹಿತರು, ಸಹುದ್ಯೋಗಿಗಳು, ಸಹಪಾಠಿ ಮತ್ತು ಕುಟುಂಬದೊಂದಿಗೆ ಗಣರಾಜ್ಯ ಸೇರಿದಂತೆ ಭವ್ಯ ದಿನಗಳನ್ನು ಆಚರಿಸಬಹುದಾಗಿದೆ. ಇಂತಹ ಪರಿಸ್ಥಿತಿಗೆ ಬಾಲಿವುಡ್​ನ ಕೆಲ ಸಂಗೀತಗಳು ನೆರವಿಗೆ ಬಂದಿದೆ. ಗಾಯಕಿ ಲತಾ ಮಂಗೇಶ್ಕರ್ ಅವರ "ಏ ಮೇರೆ ವತನ್ ಕೆ ಲೋಗೋನ್" ನಿಂದ "ಮೇರಿ ದೇಶ್ ಕಿ ಧರ್ತಿ" ವರೆಗೆ ಭಾರತದ ಕೀರ್ತಿ ಹೆಚ್ಚಿಸುವ, ದೇಶಭಕ್ತಿ ಮೂಡಿಸುವ ಅನೇಕ ಹಾಡುಗಳಿವೆ.

ಕೇಸರಿ ಚಿತ್ರದ ತೇರಿ ಮಿಟ್ಟಿ: 2019ರಲ್ಲಿ ತೆರೆಕಂಡ ಕೇಸರಿ ಚಿತ್ರದ ತೇರಿ ಮಿಟ್ಟಿ ಹಾಡು. ಅದ್ಭುತ ಸಾಹಿತ್ಯ, ಭಾವಪೂರ್ಣ ಸಂಗೀತದ ಮೂಲಕ ದೇಶದ ಸೈನಿಕರ ತ್ಯಾಗಕ್ಕೆ ಗೌರವ ಸೂಚಿಸಲಾಗಿದೆ. ಈ ಹಾಡು ಕೇಳುವ ಸಂದರ್ಭದಲ್ಲಿ ಇಂದಿನ ಸ್ವತಂತ್ರ್ಯ ಭಾರತಕ್ಕಾಗಿ ಹೋರಾಟದಲ್ಲಿ ವೀರ ಮರಣ ಹೊಂದಿದ ಅನೇಕ ಯೋಧ ಜೀವಗಳನ್ನು ನೀವು ನೆನಪಿಸಿಕೊಳ್ಳುತ್ತೀರಿ. ಮನೋಜ್ ಮುಂತಾಶಿರ್ ಸಾಹಿತ್ಯವಿದ್ದು, ಪಂಜಾಬಿ ಗಾಯಕ ಬಿ ಪ್ರಾಕ್ ಹಾಡನ್ನು ಹಾಡಿದ್ದಾರೆ. ಆರ್ಕೊ ಪ್ರವೋ ಮುಖರ್ಜಿ ಸಂಗೀತ ಸಂಯೋಜಕರು. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಈ ಹಾಡನ್ನು (feminine version) ಹಾಡಿದ್ದಾರೆ.

ರಾಝಿ ಸಿನಿಮಾದ ಏ ವತನ್: ಏ ವತನ್ ಹಾಡು 2018ರ ರಾಝಿ ಸಿನಿಮಾದ ರಾಷ್ಟ್ರೀಯತೆಯ ಹಾಡು. ಸುನಿಧಿ ಚೌಹಾಣ್ ಮತ್ತು ಅರಿಜಿತ್ ಸಿಂಗ್ ಅವರು ಈ ಹಾಡನ್ನು ಹಾಡಿದ್ದಾರೆ. ಗುಲ್ಜಾರ್ ಮತ್ತು ಅಲ್ಲಮ ಇಕ್ಬಾಲ್ ಅವರ ಸಾಹಿತ್ಯವಿದ್ದು, ಶಂಕರ್ ಎಹ್ಸಾನ್ ಲಾಯ್ ಸಂಗೀತ ಸಂಯೋಜಕರು. ಹಾಡಿನ ವಿಡಿಯೋದಲ್ಲಿ ಬಾಲಿವುಡ್​ ನಟಿ ಆಲಿಯಾ ಭಟ್ ಸೆಹಮತ್ ಖಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವ್ಯಕ್ತಿಯೊಬ್ಬನ ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸುತ್ತದೆ.

  • ' class='align-text-top noRightClick twitterSection' data=''>

ಸ್ವದೇಶ್​ ಚಿತ್ರದ ಯೇ ಜೋ ದೇಶ್ ಹೈ ತೇರಾ: 'ಯೇ ಜೋ ದೇಶ್ ಹೈ ತೇರಾ' ಹಾಡು ಶಾರುಖ್ ಖಾನ್ ಮತ್ತು ಗಾಯತ್ರಿ ಜೋಶಿ ಅವರ ಸ್ವದೇಶ್ ಚಿತ್ರದ್ದು​. ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು ಅಶುತೋಷ್ ಗೋವಾರಿಕರ್ ನಿರ್ದೇಶನದ ಚಲನಚಿತ್ರಕ್ಕೆ ಈ ಹಾಡನ್ನು ಹಾಡಿದ್ದಾರೆ. ಹಾಡಿನ ಸಾಹಿತ್ಯವನ್ನು ಬರೆದ ಕೀರ್ತಿ ಜಾವೇದ್ ಅಖ್ತರ್ ಅವರಿಗೆ ಸಲ್ಲುತ್ತದೆ. 2004ರ ಚಲನಚಿತ್ರದ ಈ ಹಾಡು, ವ್ಯಕ್ತಿಯ ತಾಯ್ನಾಡಿನ ಬಗ್ಗೆ ಮತ್ತು ಅದರೊಂದಿಗೆ ಅವರ ಸಂಪರ್ಕವನ್ನು ಹೇಗೆ ಮುರಿಯಲಾಗದು ಎಂಬ ವಿಷಯವನ್ನು ಹೇಳುತ್ತದೆ.

ಎಬಿಸಿಡಿ 2 ಚಿತ್ರದ ವಂದೇ ಮಾತರಂ: 'ವಂದೇ ಮಾತರಂ' ಹಾಡು 2015ರಲ್ಲಿ ತೆರೆ ಕಂಡ 'ಎನಿ ಬಾಡಿ ಕ್ಯಾನ್ ಡ್ಯಾನ್ಸ್ 2' ಚಿತ್ರದ್ದು. ಹಾಡಿನ ಸಾಹಿತ್ಯವನ್ನು ರಿಮಿ ನಿಕ್ ಮತ್ತು ಬಾದ್‌ಶಾ ಬರೆದಿದ್ದಾರೆ. ಇದನ್ನು ತನಿಷ್ಕಾ ಸಾಂಘ್ವಿ, ದಿವ್ಯಾ ಕುಮಾರ್, ಬಾದ್‌ಶಾ ಮತ್ತು ದಲೇರ್ ಮೆಹೆಂದಿ ಹಾಡನ್ನು ಪ್ರಸ್ತುತಪಡಿಸಿದ್ದಾರೆ. ಇದು ಭಾರತದ ಅತ್ಯಂತ ಶ್ರೇಷ್ಠರನ್ನು ಗೌರವಿಸುತ್ತದೆ.

ರಂಗ್ ದೇ ಬಸಂತಿ: 2006ರಲ್ಲಿ ಮೂಡಿಬಂದ ರಂಗ್ ದೇ ಬಸಂತಿ ಸಿನಿಮಾದ ಟೈಟಲ್​ ಸಾಂಗ್​ ರಂಗ್ ದೇ ಬಸಂತಿ. ರಾಪರ್ ಬ್ಲೇಝ್​​ ಅವರ ಇಂಗ್ಲಿಷ್ ಮತ್ತು ಹಿಂದಿ ಸಾಹಿತ್ಯವನ್ನು ಎ.ಆರ್. ರೆಹಮಾನ್ ಸಂಯೋಜಿಸಿದ್ದಾರೆ. ದಲೇರ್ ಮೆಹೆಂದಿ ಹಾಡಿರುವ ಈ ಹಾಡು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ.

ಇದನ್ನೂ ಓದಿ: ಭಾರತೀಯ ಸಂವಿಧಾನ: ಮಿದುಳಿನ ಕಸರತ್ತು, ಕಠಿಣ ಪರಿಶ್ರಮದ ಅಮೂಲ್ಯ ಸಂಪತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.