ETV Bharat / entertainment

ಸಿದ್ಧಾರ್ಥ್ ಕಿಯಾರಾ ವಿವಾಹ: ವಧುವಿನ ಕಡೆಯವರಿಗಿಂತ ವರನ ಅತಿಥಿಗಳ ಸಂಖ್ಯೆಯೇ ದುಪ್ಪಟ್ಟು! - ಸಿದ್ಧಾರ್ಥ್ ಕಿಯಾರಾ ವಿವಾಹ

ಸಿದ್ಧಾರ್ಥ್ ಮಲ್ಹೋತ್ರಾ ಅವರ ಕುಟುಂಬದಿಂದ ಕಿಯಾರಾ ಅಡ್ವಾಣಿ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಈವರೆಗೆ ಸುಮಾರು 17 ಅತಿಥಿಗಳು ಆಗಮಿಸಿದ್ದಾರೆ. ನಾಳೆ ಇಬ್ಬರು ನಾಳೆ ಸಪ್ತಪದಿ ತುಳಿಯಲಿದ್ದಾರೆ.

Siddharth Kiara Wedding
ಸಿದ್ಧಾರ್ಥ್- ಕಿಯಾರಾ ವಿವಾಹ
author img

By

Published : Feb 6, 2023, 9:09 PM IST

ಜೈಪುರ (ರಾಜಸ್ಥಾನ): ನಟ ಸಿದ್ಧಾರ್ಥ್ ಹಾಗೂ ನಟಿ ಕಿಯಾರಾ ವಿವಾಹ ಕಾರ್ಯಕ್ರಮದ ಹಿನ್ನೆಲೆ ಎಲ್ಲಾ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿವೆ. ಹೌದು, ಸಿದ್ಧಾರ್ಥ್ ಮಲ್ಹೋತ್ರಾ ವಿವಾಹದಲ್ಲಿ ಪಾಲ್ಗೊಳ್ಳಲು ಕಿಯಾರಾ ಅಡ್ವಾಣಿ ಕುಟುಂಬದಿಂದ ಇದುವರೆಗೆ ಸುಮಾರು 17 ಅತಿಥಿಗಳು ಆಗಮಿಸಿದ್ದಾರೆ. ಸಿದ್ದಾರ್ಥ್ ಅವರು, ತಮ್ಮ ತಂದೆ ಸುನಿಲ್ ಮಲ್ಹೋತ್ರಾ, ತಾಯಿ ರಿಮಾ ಮಲ್ಹೋತ್ರಾ, ಸಹೋದರ ಹರ್ಷದ್ ಮಲ್ಹೋತ್ರಾ ಹಾಗೂ ಇತರರೊಂದಿಗೆ ಫೆಬ್ರವರಿ 4ರಂದು ರಾತ್ರಿ 8ಕ್ಕೆ ಸುಮಾರಿಗೆ ಬಂದಿದ್ದರು.

ಫೆಬ್ರವರಿ 6 ರಂದು, ಅವರ ಚಿಕ್ಕಪ್ಪ ಜೈದೀಪ್ ಭಲ್ಲಾ, ಚಿಕ್ಕಮ್ಮ ಎರಾಸೆಲಿ, ಅಜ್ಜಿ ಹರಚರಣ್ ಭಲ್ಲಾ, ಸೊಸೆ ಅವನಿ, ಚಿಕ್ಕಮ್ಮ ಅಂಬಿಕಾ ಹೊರಾ, ಚಿಕ್ಕಪ್ಪ ಅಶೋಕ್ ಹೊರಾ, ಸೋದರ ಸಂಬಂಧಿಗಳಾದ ರೋಹನ್ ಮಲ್ಹೋತ್ರಾ, ಮೊಮಿನಾ ನೂರ್, ಇಶಿತಾ ಭಾರದ್ವಾಜ್, ವೈಭವ್ ಭಾರದ್ವಾಜ್, ಅರ್ಜುನ್ ಹೊರಾ, ಅರ್ಜುನ್ ಅವರ ಪತ್ನಿ ಜೋಯಾ ಹೊರಾ ಮಲ್ಹೋತ್ರಾ ಮದುವೆ ಕಾರ್ಯಕ್ರಮಕ್ಕೆ ಬಂದರು. ನಾನು ತುಂಬಾ ಉತ್ಸುಕನಾಗಿದ್ದೇನೆ ಹಾಗೂ ಸಂತೋಷವಾಗಿದ್ದೇನೆ ಎಂದು ಸಿದ್ಧಾರ್ಥ್ ಅವರ ಅಜ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮದುವೆಗೆ ಬರಲಿದ್ದಾರೆ ಹಲವು ಗಣ್ಯರು: ದೆಹಲಿ ಹುಡುಗ ಸಿದ್ಧಾರ್ಥ್ ಅವರ ಅತಿಥಿ ಪಟ್ಟಿಯು ಕಿಯಾರಾ ಅವರಿಗಿಂತ ದೊಡ್ಡದಾಗಿದೆ. ಅದರಲ್ಲಿ ಅವರ ತಾಯಿಯ ಗೆಳೆಯರೂ ಸೇರಿದ್ದಾರೆ. ಈ ಅತಿಥಿಗಳು ದೆಹಲಿ ಮತ್ತು ಪಂಜಾಬ್‌ನಿಂದ ಬಂದಿದ್ದಾರೆ. ದಂಪತಿಯ ಸಾಮಾನ್ಯ ಸ್ನೇಹಿತ ಕರಣ್ ಜೋಹರ್ ಎರಡೂ ಕಡೆಯಿಂದ ಪಟ್ಟಿಯಲ್ಲಿದ್ದರು. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ಸಿನಿಮಾ ನಿರ್ಮಾಪಕರಾದ ಆರತಿ ಶೆಟ್ಟಿ, ಪೂಜಾ ಶೆಟ್ಟಿ ಸೇರಿದಂತೆ ಹಲವರು ಮದುವೆಗೆ ಆಗಮಿಸಲಿದ್ದಾರೆ.

ಕಿಯಾರಾ ಕುಟುಂಬದಿಂದ ಇದುವರೆಗೆ 10 ಮಂದಿ ಬಂದಿದ್ದಾರೆ. ಇವರಲ್ಲಿ ಆಕೆಯ ತಂದೆ ಜಗದೀಪ್ ಅಡ್ವಾಣಿ, ತಾಯಿ ಜಿನೆವೀವ್ ಅಡ್ವಾಣಿ, ಇಶಾನ್ ಅಡ್ವಾಣಿ ಮತ್ತು ಅಜ್ಜಿ ಸೇರಿದ್ದಾರೆ. ಭಾನುವಾರ ಸಂಜೆ ಆಕೆಯ ಸಹೋದರ ಮಿಶಾಲ್ ಅಡ್ವಾಣಿ ಬಂದಿದ್ದರು. ಇದಲ್ಲದೇ ಅತ್ತ ಸುಮಿತಾ ಅಡ್ವಾಣಿ, ಚಿಕ್ಕಪ್ಪ ಹರೀಶ್ ಅಡ್ವಾಣಿ, ಅಜ್ಜಿ ವಲೇರಿ ಅಡ್ವಾಣಿ, ಚಿಕ್ಕಮ್ಮ ಶಾಹೀನ್ ಅಗರ್ವಾಲ್, ಸಂಬಂಧಿಕರಾದ ಇಶಿತಾ ಅಡ್ವಾಣಿ, ಕರ್ಮ ವಿವಾನ್ ಫೆಬ್ರವರಿ 5 ರಂದು ಆಗಮಿಸಿದ್ದರು.

ಜೈಸಲ್ಮೇರ್ ವಿಮಾನ ನಿಲ್ದಾಣ: ಮದುವೆಯಲ್ಲಿ ಕಿಯಾರಾ ಅವರ ಅತಿಥಿಗಳ ಪಟ್ಟಿಯಲ್ಲಿ ಬಾಲಿವುಡ್ ಮತ್ತು ಗಣ್ಯ ಉದ್ಯಮಿಗಳ ಕುಟುಂಬಸ್ಥರು ಸೇರಿದ್ದಾರೆ. ವಿಶೇಷವೆಂದರೆ ಆಕೆಯ ಬಾಲ್ಯದ ಗೆಳತಿ ಇಶಾ ಅಂಬಾನಿ. ಇಶಾ ಮತ್ತು ಅವರ ಪತಿ ಭಾನುವಾರ ರಾತ್ರಿ 9.30ರ ಸುಮಾರಿಗೆ ತಮ್ಮ ಖಾಸಗಿ ಚಾರ್ಟರ್ ಮೂಲಕ ಜೈಸಲ್ಮೇರ್ ವಿಮಾನ ನಿಲ್ದಾಣವನ್ನು ತಲುಪಿದ್ದರು.

ಇದಲ್ಲದೇ, ಕಿಯಾರಾ ಅವರ ಬಾಲಿವುಡ್ ಸ್ನೇಹಿತ ಶಾಹಿದ್ ಕಪೂರ್ ಭಾನುವಾರ ಬೆಳಗ್ಗೆ ತಮ್ಮ ಪತ್ನಿ ಮೀರಾ ಮತ್ತು ಕರಣ್ ಜೋಹರ್ ಅವರೊಂದಿಗೆ ಬಂದಿದ್ದಾರೆ. ನಟಿ ಜೂಹಿ ಚಾವ್ಲಾ ಮತ್ತು ಅವರ ಉದ್ಯಮಿ ಪತಿ ಜೈ ಮೆಹ್ತಾ, ನೃತ್ಯ ಸಂಯೋಜಕಿ ಶಬಿನಾ ಖಾನ್, ಉದ್ಯಮಿ ಜೆಬಾ ಕೊಹ್ಲಿ ಮತ್ತು ನಟ ಇಶಾನ್ ಚಂದೋಕ್ ಕೂಡ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಂಬೈ ಮತ್ತು ದೆಹಲಿಯಿಂದ ಅಡುಗೆ ತಂಡ: ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯು ಮದುವೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮುಂಬೈ ಮತ್ತು ದೆಹಲಿಯಿಂದ ಅಡುಗೆ ತಂಡವನ್ನು ಕರೆಸಿದೆ. ಮದುವೆಯಲ್ಲಿ ಸ್ಥಳೀಯರನ್ನು ಯಾವುದೇ ಕೆಲಸಕ್ಕೆ ತೊಡಗಿಸುತ್ತಿಲ್ಲ. ಸುಮಾರು 500 ವೇಟರ್‌ಗಳ ತಂಡವನ್ನು ನಿಯೋಜಿಸಲಾಗಿದ್ದು, ಅದರಲ್ಲಿ 200 ಮಂದಿ ಮುಂಬೈನವರು. ವೇಟರ್‌ಗಳಿಗೆ ಬಿಳಿ ಪ್ಯಾಂಟ್ ಮತ್ತು ಶರ್ಟ್ ಮತ್ತು ತಲೆಯ ಮೇಲೆ ಪೇಟದ ಡ್ರೆಸ್ ಕೋಡ್ ಅನ್ನು ನಿರ್ಧರಿಸಲಾಗಿದೆ. ಅಡುಗೆ ಕಾರ್ಯದ ನಿರ್ವಹಣೆಗೆ ಹೋಟೆಲ್ ಸಿಬ್ಬಂದಿ ಸಹಾಯ ಮಾಡುತ್ತಾರೆ. ಕಿಯಾರಾ ಅಡ್ಬಾಣಿ ಮತ್ತು ಸಿದ್ದಾರ್ಥ ಮಲ್ಹೋತ್ರಾ ನಾಳೆ ಸಪ್ತಪದಿ ತುಳಿಯಲಿದ್ದಾರೆ.

ಇದನ್ನೂ ಓದಿ: ಸಿದ್ಧಾರ್ಥ್ - ಕಿಯಾರಾ ಮದುವೆ: ನಟಿಯ ಬ್ರೈಡಲ್​ ಫೋಟೋ ವೈರಲ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.