ETV Bharat / entertainment

ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮನಿಗೆ ಸಾಥ್ ಕೊಟ್ಟ ಕರುನಾಡ ಚಕ್ರವರ್ತಿ!

author img

By

Published : May 27, 2022, 11:06 PM IST

ವಿಕ್ರಮ್ ರವಿಚಂದ್ರನ್ ನಾಯಕ ನಟನಾಗಿ ನಟಿಸುತ್ತಿರುವ ತ್ರಿವಿಕ್ರಮ ಸಿನಿಮಾದ ಹಾಡಿಗೆ ಶಿವರಾಜ್​ ಕುಮಾರ್​ ಡ್ಯಾನ್ಸ್​ ಮಾಡುವ ಮೂಲಕ ಶುಭಾಶಯ ಕೋರಿದರು.

ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮನಿಗೆ ಸಾಥ್ ಕೊಟ್ಟ ಕರುನಾಡ ಚಕ್ರವರ್ತಿ

ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ‌ ತ್ರಿವಿಕ್ರಮ ಚಿತ್ರದ ಪೋಸ್ಟರ್ ಹಾಗೂ ಟೀಸರ್​ನಿಂದಲೇ ಸ್ಯಾಂಡಲ್ ವುಡ್​ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಮಮ್ಮಿ ಪ್ಲೀಸ್ ಮಮ್ಮಿ ಎಂಬ ಹಾಡು ಬಿಡುಗಡೆ ಆಗಿ ಸೋಷಿಯಲ್‌‌ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ತ್ರಿವಿಕ್ರಮ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಯಹಸ್ತ ಸಿಕ್ಕಿದೆ. ಈ‌ ಸಿನಿಮಾ ಹಾಗು ಪ್ಲೀಸ್ ಮಮ್ಮಿ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಶಿವರಾಜ್ ಕುಮಾರ್ ತ್ರಿವಿಕ್ರಮ ಸಿಮಿಮಾದ ಸ್ಪೆಷಾಲಿಟಿ ಹಾಗೂ ರವಿಚಂದ್ರನ್ ಮಗ ವಿಕ್ರಮ್ ಬಗ್ಗೆ ಮಾತನಾಡಿದ್ದಾರೆ.

ಶಿವರಾಜ್ ಕುಮಾರ್, ಯುವ ನಟ ವಿಕ್ರಮ್ ಮತ್ತು ನಿರ್ದೇಶಕ ಸಹನಾಮೂರ್ತಿ ಅವರನ್ನು ತಾವು ಇದ್ದ ಶೂಟಿಂಗ್ ಸ್ಪಾಟ್​ಗೆ ಕರೆಯಿಸಿಕೊಂಡು, ಯಾಕೇ ತ್ರಿವಿಕ್ರಮ ಸಿನಿಮಾ ಬಿಡುಗಡೆ ತಡವಾಗುತ್ತಿದೆ, ಏನಾದರೂ ಸಮಸ್ಯೆನಾ ಅಂತಾ ಕೇಳಿದ್ದಾರೆ. ಅದಕ್ಕೆ ವಿಕ್ರಮ್ ಇಲ್ಲಾ ಸಾರ್ ನಮ್ಮ‌ ನಿರ್ದೇಶಕರು ಹಾಗೂ ನಿರ್ಮಾಪಕರು ಈ ಸಿನಿಮಾ ಬಗ್ಗೆ ಹೆಚ್ಚು ಒಲವು ಇಟ್ಟುಕೊಂಡಿದ್ದಾರೆ. ಈ ಮಮ್ಮಿ ಹಾಡನ್ನು ನಮ್ಮ‌ ತಾಯಿ ಹತ್ತಿರ ಹೇಗೆ ಇರ್ತೀನಿ ಹಾಗೇ, ಚಿತ್ರದಲ್ಲಿ ಹಾಡನ್ನು ಮಾಡಿದ್ದೇವೆ ಎಂದರು.

ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮನಿಗೆ ಸಾಥ್ ಕೊಟ್ಟ ಕರುನಾಡ ಚಕ್ರವರ್ತಿ!

ನಾನು ಕೂಡ ನಮ್ಮ‌ ಅಮ್ಮನನ್ನ ಪ್ಲೀಸ್ ಮಮ್ಮಿ ಅಂತಾ ರಿಕ್ವೇಸ್ಟ್ ಮಾಡಿದ್ದೀನಿ, ನಮ್ಮ ಅಪ್ಪನ ಜೊತೆ ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾ, ನನಗೆ ಮಾಡೋದಿಕ್ಕೆ ಇಷ್ಟ ಇರಲಿಲ್ಲ. ಆಗ ನಮ್ಮ ಅಮ್ಮನಿಗೆ ಪ್ಲೀಸ್ ಅಮ್ಮ ಅಂತಾ ಬೇಡಿಕೊಂಡಿದ್ದೆ. ಆದರೆ, ನಮ್ಮ‌ ಅಮ್ಮನ ರಿಕ್ವೇಸ್ಟ್ ಮುಂದೆ ನಾನು ಆ ಸಿನಿಮಾ ಮಾಡಿದೆ ಹಿಟ್ ಕೂಡ ಆಯಿತ್ತು ಎಂದು ಶಿವರಾಜ್​ ಕುಮಾರ್​ ತಮ್ಮ ನೆನಪು ಹಂಚಿ ಕೊಡಿದ್ದಾರೆ.

ಡ್ಯಾನ್ಸ್​ ಮಾಡಿ ಬೆಂಬಲಿಸಿದ ಶಿವಣ್ಣ: ರವಿಚಂದ್ರನ್ ಬಗ್ಗೆ ನಾನು ಹೇಳುವ ಹಾಗಿಲ್ಲ. ಯಾಕೆಂದರೆ ರವಿ ನಮ್ಮ‌ ಕುಟುಂಬ.‌ ರವಿಚಂದ್ರನ್‌ ಎರಡನೇ ಮಗನಾಗಿರೋ ವಿಕ್ಕಿ ಈ ಸಿನಿಮಾ‌ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಇಂಡಸ್ಟ್ರಿಗೆ ಬರ್ತಾ ಇದ್ದಾನೆ. ನನಗೆ ಮೊದಲಿನಿಂದಲೂ ವಿಕ್ಕಿ ಕಂಡರೆ ಇಷ್ಟ. ಅವನು ನನ್ನ‌ ತರ ಹಾಗಾಗಿ ಅವನ ಕಂಡರೆ ಇಷ್ಟ. ಇನ್ನು ರವಿ ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳಸಿದ್ದಾರೆ. ರವಿ ಮಕ್ಕಳು ನನ್ನ ಪ್ಯಾನ್ ಅನ್ನೋದು ಮತ್ತೊಂದು ಖುಷಿ ವಿಚಾರ ಎಂದರು.ಶಿವರಾಜ್ ಕುಮಾರ್ ಪ್ಲೀಸ್ ಮಮ್ಮಿ ಹಾಡಿಗೆ ಸ್ಟೆಪ್ ಹಾಕಿ ಹಾಕುವ ಮೂಲಕ ತ್ರಿವಿಕ್ರಮ ಸಿನಿಮಾಗೆ, ನನ್ನ‌‌‌ ಸಪೋರ್ಟ್ ಇದೆ ಅಂತಾ ಹೇಳಿದರು.

ವಿಕ್ರಮ್ ರವಿಚಂದ್ರನ್ ನಾಯಕಿಯಾಗಿ ಅಕಾಂಕ್ಷ ಶರ್ಮ ನಟಿಸುತ್ತಿದ್ದಾರೆ. ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ರೋಹಿತ್ ರಾಯ್, ಆದಿಲೋಕೇಶ್, ಶಿವಮಣಿ, ಅಕ್ಷರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಾಮಾನ್ಯವಾಗಿ ಅಮ್ಮ - ಮಗನ‌ ಸೆಂಟಿಮೆಂಟ್ ಹಾಡುಗಳಿರುತ್ತದೆ. ಮಗ‌ ತನ್ನ ಪ್ರೀತಿಯ ಬಗ್ಗೆ ತಾಯಿಯ ಬಳಿ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳುವ ಈ ಹಾಡಿಗೆ ಅಪಾರ ಮೆಚ್ಚುಗೆ ದೊರಕಿದೆ.

ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಇಂಪಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗೌರಿ ಎಂಟರ್ ಟೈನರ್‌ ಲಾಂಛನದಲ್ಲಿ ಸೋಮಣ್ಣ ನಿರ್ಮಾಣ ಮಾಡುತ್ತಿರುವ, ಈ ಚಿತ್ರಕ್ಕೆ ರೋಜ್ ಹಾಗು ಲೀಡರ್ ಚಿತ್ರಗಳ ನಿರ್ದೇಶಕ ಸಹನಾ‌ ಮೂರ್ತಿ‌‌ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸಹನಾ ಮೂರ್ತಿ ಅವರದೆ. ಸಂತೋಷ್ ರೈ ಪಾತಾಜೆ, ಗುರು ಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ತ್ರಿವಿಕ್ರಮ ಚಿತ್ರಕ್ಕಿದೆ.ಜೂನ್ ತಿಂಗಳಲ್ಲಿ ಕ್ರೇಜಿ ಸ್ಟಾರ್ ಪುತ್ರ ವಿಕ್ರಮ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ರಕ್ಕಮ್ಮ ಜಾಕ್ವೆಲಿನ್​​ಗೆ ಕನ್ನಡ ಹೇಳಿಕೊಟ್ಟ ವಿಕ್ರಾಂತ್ ರೋಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.