ETV Bharat / entertainment

ವೇದಿಕೆ ಮೇಲೆ ಬಿಗ್​​ ಬಿ ಪಾದ ಸ್ಪರ್ಶಿಸಿ ಗೌರವ ಸಲ್ಲಿಸಿದ ಕಿಂಗ್​ ಖಾನ್ - ಪಠಾಣ್

ಗುರುವಾರ ನಡೆದ 28ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಾರುಖ್ ಖಾನ್ ಅವರು ಅಮಿತಾಭ್​​ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅವರ ಪಾದಗಳನ್ನು ಸ್ಪರ್ಶಿಸುವ ಮೂಲಕ ಅವರನ್ನು ಸ್ವಾಗತಿಸಿ ಎಲ್ಲರ ಗಮನ ಸೆಳೆದರು.

Shah Rukh Khan touched feet of Amitabh Bachchan
ಬಿಗ್​​ ಬಿ ಪಾದ ಸ್ಪರ್ಶಿಸಿ ಗೌರವ ಸಲ್ಲಿಸಿದ ಕಿಂಗ್​ ಖಾನ್
author img

By

Published : Dec 16, 2022, 4:51 PM IST

ಬಾಲಿವುಡ್​ನ ಬಹು ನಿರೀಕ್ಷಿತ 'ಪಠಾಣ್'ನ ಬೇಶರಂ ರಂಗ್​ ವಿವಾದದ ನಡುವೆ ಸೂಪರ್ ಸ್ಟಾರ್ ಶಾರುಖ್ ಖಾನ್ 2022ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು.

ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿರುವ ಕಿಂಗ್ ಖಾನ್ ತಮ್ಮ ವಿನಯವಂತಿಕೆಯಿಂದಲೂ ಜನರ ಮನ ಗೆಲ್ಲುವ ಅವಕಾಶ ತಪ್ಪಿಸಿಕೊಳ್ಳಲ್ಲ. ಶಾರುಖ್​ ಖಾನ್​​ ಅವರು ಸೂಪರ್​ಸ್ಟಾರ್​​ ಅಮಿತಾಭ್​​ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅವರ ಪಾದಗಳನ್ನು ಸ್ಪರ್ಶಿಸಿ ಸ್ವಾಗತಿಸಿದರು. ಬಳಿಕ ಅಮಿತಾಭ್​​ ಅವರನ್ನು ಅಪ್ಪಿಕೊಂಡು ತಮ್ಮ ಗೌರವ, ಪ್ರೀತಿ ವ್ಯಕ್ತಪಡಿಸಿದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಶಾರುಖ್​​ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • #WATCH | Veteran actors Amitabh Bachchan and Jaya Bachchan, film stars Shah Rukh Khan, Rani Mukherji attend the inaugural program of the 28th International Kolkata Film Festival in Kolkata with West Bengal CM Mamata Banerjee and former India Cricket captain Sourav Ganguly pic.twitter.com/tKg3bXXFEJ

    — ANI (@ANI) December 15, 2022 " class="align-text-top noRightClick twitterSection" data=" ">

2022ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಾರುಖ್ ಖಾನ್​​, ಅಮಿತಾಭ್​​, ಜಯಾ ಬಚ್ಚನ್ ಅಲ್ಲದೇ ರಾಣಿ ಮುಖರ್ಜಿ ಕೂಡ ಭಾಗಿಯಾಗಿದ್ದರು. ಅವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ನಟರ ಐಕಾನಿಕ್ ಚಿತ್ರ 'ಕಭಿ ಖುಷಿ ಕಭಿ ಗಮ್' ನೆನಪಿಸಿಕೊಂಡರು. 2001ರಲ್ಲಿ ಬಿಡುಗಡೆ ಆದ 'ಕಭಿ ಖುಷಿ ಕಭಿ ಗಮ್' ಚಿತ್ರದಲ್ಲಿ ಶಾರುಖ್, ಜಯಾ ಬಚ್ಚನ್ ಮತ್ತು ಅಮಿತಾಭ್ ಬಚ್ಚನ್ ಅವರ ಮಗನ ಪಾತ್ರ ನಿರ್ವಹಿಸಿದ್ದರು. ಕರಣ್ ಜೋಹರ್ ನಿರ್ದೇಶನದ ಚಿತ್ರದಲ್ಲಿ ಕಾಜೋಲ್, ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 'ಏನೇ ಆದರೂ ಸಕಾರಾತ್ಮಕವಾಗಿರುತ್ತೇನೆ' : ನಟ ಶಾರುಖ್ ಖಾನ್

ಗುರುವಾರ ನಡೆದ 28ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಶಾರುಖ್​​, ಸಾಮಾಜಿಕ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು. ಜೊತೆಗೆ 'ಜಗತ್ತು ಏನೇ ಮಾಡಿದರೂ. ಏನೇ ಆದರೂ ನಮ್ಮಂತಹ ಜನರು ಸಕಾರಾತ್ಮಕವಾಗಿರುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಬೇಷರಮ್​ ರಂಗ್ ವಿವಾದ: 'ಪಠಾಣ್​' ಬಾಯ್ಕಾಟ್​ ಬಗ್ಗೆ ಮೌನ ಮುರಿದ ಶಾರುಖ್ ಖಾನ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.