ಜವಾನ್ ಮತ್ತು ಡಂಕಿ ಸೂಪರ್‌ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರಗಳು. ಈ ಎರಡೂ ಸಿನಿಮಾಗಳು ಇದೇ ಸಾಲಿನಲ್ಲಿ ತೆರೆಕಾಣಲಿದೆ. ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾಗಳ ಹೆಸರು ಟ್ರೆಂಡ್ ಕ್ರಿಯೇಟ್ ಮಾಡಿದೆ.
ಎಸ್ಆರ್ಕೆ ನಟನೆಯ ಆ್ಯಕ್ಷನ್ ಥ್ರಿಲ್ಲರ್ ಮೂವಿ 'ಜವಾನ್'ನ ಟ್ರೈಲರ್‌ಗಾಗಿ ಕಾಯುವಿಕೆ ಬಹುತೇಕ ಮುಗಿದಿದೆ. ಕಿಂಗ್ ಖಾನ್‌ನ ಜವಾನ್ ಸಂಬಂಧಿತ ಅಪ್ಡೇಟ್ಸ್ ಅನ್ನು ಚಿತ್ರ ತಯಾರಕರು ಇಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೇ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವ ಈ ಹೊತ್ತಿನಲ್ಲಿ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಟ್ವೀಟ್ ಮೂಲಕ 'ಅತಿ ಶೀಘ್ರದಲ್ಲೇ ಜವಾನ್ ಟ್ರೇಲರ್' ಬರಲಿದೆ ಎಂದು ಘೋಷಿಸಿದೆ.
-
Stay Tuned...#JawanTrailer pic.twitter.com/BqM0kmxHLQ
— Red Chillies Entertainment (@RedChilliesEnt) July 8, 2023 " class="align-text-top noRightClick twitterSection" data="
">Stay Tuned...#JawanTrailer pic.twitter.com/BqM0kmxHLQ
— Red Chillies Entertainment (@RedChilliesEnt) July 8, 2023Stay Tuned...#JawanTrailer pic.twitter.com/BqM0kmxHLQ
— Red Chillies Entertainment (@RedChilliesEnt) July 8, 2023
ಬಿಡುಗಡೆಗೂ ಮುನ್ನವೇ 'ಜವಾನ್ ಟ್ರೇಲರ್' ಕಳೆದ ಕೆಲ ದಿನಗಳಿಂದ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಬಹುನಿರೀಕ್ಷಿತ ವಿಡಿಯೋ ಶೀಘ್ರದಲ್ಲೇ ಹೊರಬರಲಿದೆ ಎಂದು ಚಿತ್ರ ತಯಾರಕರು ಸುಳಿವು ನೀಡಿದ್ದಾರೆ. ಟ್ವಿಟರ್ನಲ್ಲಿ ಶಾರುಖ್ ಖಾನ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಟ್ವೀಟ್ ಮಾಡಿ ಈ ವಿಷಯ ತಿಳಿಸಿದ್ದಾರೆ. ಶಾರುಖ್ ಅವರ ಈ ಸಿನಿಮಾಗೆ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯೇ ಬಂಡವಾಳ ಹೂಡಿದೆ.
ಈ ವರ್ಷದ ಆರಂಭದಲ್ಲಿ, ಜವಾನ್‌ನ ಆ್ಯಕ್ಷನ್ ಸೀಕ್ವೆನ್ಸ್ನದ್ದಾಗಿರಬಹುದೆಂದು ನಂಬಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತು. ಇದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚುಗೊಳಿಸಿತು. ವೈರಲ್ ಕ್ಲಿಪ್ ಆರು ಸೆಕೆಂಡ್ಸ್ ಇದ್ದು, ಎಸ್ಆರ್ಕೆ ನೋಟವು ಅಭಿಮಾನಿಗಳಿಗೆ ಹಬ್ಬದೂಟ ನೀಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಚಿತ್ರ ತಯಾರಕರಲ್ಲಿ ಜವಾನ್ ಟ್ರೇಲರ್ ಅಪ್ಡೇಟ್ಸ್ ಅನ್ನು ಪದೇ ಪದೆ ಕೇಳುತ್ತಿದ್ದರು. ಆ ಕಾಯುವಿಕೆ ಕೊನೆಗೊಳ್ಳುವ ಸಮಯ ಬಂದಿದೆ. ಸದ್ಯದಲ್ಲೇ, ಯಾವಾಗ ಬೇಕಾದರೂ ಜವಾನ್ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಬಹುದು.
ಇದನ್ನೂ ಓದಿ: Rishab Shetty birthday Photos: 'ಸಾಯುವವರೆಗೂ ಸಿನಿಮಾಗಳ ಮೂಲಕ ನಿಮ್ಮ ಋಣ ತೀರುಸುತ್ತೇನೆ' - ರಿಷಬ್ ಶೆಟ್ಟಿ
ದಕ್ಷಿಣ ಚಿತ್ರರಂಗದ ಸ್ಟಾರ್ ನಿರ್ದೇಶಕ ಅಟ್ಲೀ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಜವಾನ್ ಆ್ಯಕ್ಷನ್ ಸೀಕ್ವೆನ್ಸ್‌ಗಳಿಂದ ತುಂಬಿರಲಿದೆ ಎಂದು ನಂಬಲಾಗಿದೆ. ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಲು ಚಿತ್ರತಂಡ ಮುಮದಾಗಿದೆ. ಚಿತ್ರದಲ್ಲಿ ಎಸ್ಆರ್ಕೆ ಜೊತೆ ನಯನತಾರಾ ಮತ್ತು ವಿಜಯ್ ಸೇತುಪತಿ ಅವರಂತಹ ದಕ್ಷಿಣದ ಪ್ರಮುಖರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2023ರ ಬಹುನಿರಿಕ್ಷಿತ ಸಿನಿಮಾ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.
ಇದನ್ನೂ ಓದಿ: 'ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ': ಆದಿಪುರುಷ್ ಡೈಲಾಗ್ ರೈಟರ್
ಇನ್ನೂ ಶಾರುಖ್ ನಟನೆಯ ಡಂಕಿ ಸಿನಿಮಾ 2023 ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಶಾರುಖ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ಈ ಎರಡೂ ಸಿನಿಮಾಗಳ ನಾನ್ ಥಿಯೇಟ್ರಿಕಲ್ ರೈಟ್ಸ್ 480 ಕೋಟಿ ರೂ.ಗೆ ಮಾರಾಟವಾಗಿದೆಯಂತೆ.