ETV Bharat / entertainment

3 ದಿನದಲ್ಲಿ ₹300 ಕೋಟಿ! 'ಜವಾನ್​' ಜಬರ್ದಸ್ತ್‌ ಕಲೆಕ್ಷನ್‌ - ಈಟಿವಿ ಭಾರತ ಕನ್ನಡ

Shahrukh Khan starrer Jawan Day 3 Collections: ಜವಾನ್​ ಸಿನಿಮಾ ಮೂರನೇ ದಿನ 74 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡುವುದರೊಂದಿಗೆ, ವಿಶ್ವಾದ್ಯಂತ ಒಟ್ಟು 300 ಕೋಟಿ ರೂ. ಗಡಿ ದಾಟಿದೆ.

Jawan Day 3 Collections
ಜವಾನ್​
author img

By ETV Bharat Karnataka Team

Published : Sep 10, 2023, 12:14 PM IST

'ಜವಾನ್​'. ಇದೀಗ ವಿಶ್ವದಾದ್ಯಂತ ಕೇಳಿಬರುತ್ತಿರುವ ಹೆಸರು. ಸೆಪ್ಟೆಂಬರ್​ 7ರಂದು ತೆರೆಕಂಡು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಚಿತ್ರ. ಬಾಲಿವುಡ್​ ನಟ​ ಶಾರುಖ್​ ಖಾನ್​ ನಟನೆಗೆ ಎಲ್ಲೆಡೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸುತ್ತಿದೆ. ಕಲೆಕ್ಷನ್​ ವಿಚಾರದಲ್ಲಿ ವೇಗದ ಓಟ ಮುಂದುವರೆಸಿದೆ. ಈವರೆಗಿನ ಎಲ್ಲಾ ನಿರೀಕ್ಷೆಗಳನ್ನೂ ಮೀರಿ ಚಿತ್ರ ಪ್ರದರ್ಶನ ಕಾಣುತ್ತಿದೆ. ದಿನ ಕಳೆದಂತೆ 'ಜವಾನ್​' ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ.

ಜವಾನ್​ 3ನೇ ದಿನದ ಕಲೆಕ್ಷನ್​: ಗುರುವಾರ ಬಿಡುಗಡೆಯಾದ 'ಜವಾನ್​' ಸಿನಿಮಾ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಥಿಯೇಟರ್​ಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸದ್ದು ಜೋರಾಗಿದೆ. ಮೊದಲ ದಿನ ಅಂದಾಜು 75 ಕೋಟಿ ರೂ. ಬಾಚಿಕೊಂಡ ಚಿತ್ರ ಎರಡನೇ ದಿನ ಸುಮಾರು 53 ಕೋಟಿ ರೂ. ಗಳಿಸಿದೆ. ಮೂರನೇ ದಿನ 74 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಯಶಸ್ಸಿನ ಯಾತ್ರೆ ಮುಂದುವರೆಸಿದೆ. ಎರಡೇ ದಿನದಲ್ಲಿ ವಿಶ್ವಾದ್ಯಂತ 240 ಕೋಟಿ ರೂಪಾಯಿ ಗಳಿಸಿದ್ದ 'ಜವಾನ್'​ ಮೂರನೇ ದಿನದ ಕಲೆಕ್ಷನ್​ನೊಂದಿಗೆ 300 ಕೋಟಿ ರೂಪಾಯಿ ಗಡಿ ದಾಟಿದೆ.

ವಾರಾಂತ್ಯವಾದ ಇಂದು 'ಜವಾನ್​' ಮತ್ತಷ್ಟು ಕಲೆಕ್ಷನ್ ಮಾಡಲಿದೆ. ಶೀಘ್ರದಲ್ಲೇ 500 ಕೋಟಿ ಗಡಿ ದಾಟಲಿದೆ ಎನ್ನುತ್ತಿವೆ ಟ್ರೇಡ್​ ಮೂಲಗಳು. ಮೊದಲ ದಿನದ ಗಳಿಕೆಯಲ್ಲೇ ದಾಖಲೆ ಬರೆದ ಸಿನಿಮಾ, ಶಾರುಖ್​ ಮಾತ್ರವಲ್ಲದೇ ನಯನತಾರಾ, ವಿಜಯ್​ ಸೇತುಪತಿ ಅವರಿಗೂ ಉತ್ತಮ ಹೆಸರು ತಂದುಕೊಟ್ಟಿದೆ.​ 'ಜವಾನ್'​ ಇನ್ನೂ ಅಧಿಕ ಕಲೆಕ್ಷನ್​ ಮಾಡುವ ನಿರೀಕ್ಷೆಯಿದ್ದೂ, ಈವರೆಗಿನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಡುಗಡೆಯಾದ ಮೊದಲ ದಿನವೇ ಬಾಂಗ್ಲಾದೇಶದಲ್ಲಿ 'ಜವಾನ್​' ಪ್ರದರ್ಶನ; ಶಾರುಖ್​ಗೆ ಮತ್ತೊಂದು ಯಶಸ್ಸು!

ಶಾರುಖ್​ ಅಭಿಮಾನಿಗಳ ಸಂಭ್ರಮ: ಇನ್ನೊಂದೆಡೆ, ಈ ಸಿನಿಮಾ ಬಿಡುಗಡೆಯನ್ನೇ ಶಾರುಖ್​ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ದೇಶಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಶಾರುಖ್​ ಬೃಹತ್​ ಕಟೌಟ್​ಗಳು ತಲೆ ಎತ್ತಿ ನಿಂತಿವೆ. ಥಿಯೇಟರ್​ ಒಳಗೂ ಮತ್ತು ಹೊರಗೂ ಸೆಲೆಬ್ರೇಶನ್​ ಜೋರಾಗಿಯೇ ಇದೆ. ಪಟಾಕಿ ಸಿಡಿಸುವಿಕೆ, ಸಿಹಿ ಹಂಚುವಿಕೆ, ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿದೆ.

'ಜವಾನ್' ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ.​ ದಕ್ಷಿಣ ಭಾರತದ ಪ್ರಮುಖ ನಟರಾದ ನಯನತಾರ, ವಿಜಯ್​​ ಸೇತುಪತಿ ಇದೇ ಮೊದಲ ಬಾರಿಗೆ ಬಾಲಿವುಡ್​ನಲ್ಲಿ ಮಿಂಚು ಹರಿಸಿದ್ದಾರೆ. ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ ಕೂಡ ಬಣ್ಣ ಹಚ್ಚಿದ್ದಾರೆ. ಗೌರವ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಸಂಜಯ್​ ದತ್​​​ ನಟನೆ ಚಿತ್ರದ ಮತ್ತೊಂದು ಹೈಲೈಟ್​.

ಇದನ್ನೂ ಓದಿ: ಭೂಗತ ಜಗತ್ತಿನ ಬೆದರಿಕೆ ಎದುರಿಸಿ ಮುನ್ನಡೆದ ಏಕೈಕ ನಟ ಶಾರುಖ್​ ಖಾನ್​: ನಿರ್ದೇಶಕ ಸಂಜಯ್​ ಗುಪ್ತಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.