ಪಠಾಣ್ ಸಿನಿಮಾ ಬಾಲಿವುಡ್ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಕಿಂಗ್ ಖಾನ್ ಶಾರುಖ್ ಸಿನಿಮಾ ಅಂದ ಮೇಲೆ ನಿರಿಕ್ಷೇ ಹೆಚ್ಚೇ ಅಲ್ವೇ?. ಕೊನೆಯದಾಗಿ ಝೀರೋ (21 ಡಿಸೆಂಬರ್ 2018) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರೊಮ್ಯಾಂಟಿಕ್ ಹೀರೋ ಶಾರುಖ್ ಖಾನ್ ನಾಲ್ಕು ವರ್ಷಗಳ ಬಳಿಕ ಆ್ಯಕ್ಷನ್ ಅವತಾರದಲ್ಲಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಕೇವಲ ನಾಲ್ಕು ದಿನಗಳು ಬಾಕಿ ಇದ್ದು ಮೊದಲ ದಿನದ ಟಿಕೆಟ್ ಬಹುತೇಕ ಕಡೆಗಳಲ್ಲಿ ಸೋಲ್ಡ್ ಔಟ್ ಆಗಿದೆ.
-
#Pathaan *advance booking* status at *national chains*… Update till Thursday, 11.30 pm…
— taran adarsh (@taran_adarsh) January 19, 2023 " class="align-text-top noRightClick twitterSection" data="
⭐️ #PVR: 51,000
⭐️ #INOX: 38,500
⭐️ #Cinepolis: 27,500
⭐️ Total tickets sold: 1,17,000#BO Tsunami loading 🔥🔥🔥
NOTE: Full-fledged advance booking will start tomorrow. pic.twitter.com/DW2mLJYhvO
">#Pathaan *advance booking* status at *national chains*… Update till Thursday, 11.30 pm…
— taran adarsh (@taran_adarsh) January 19, 2023
⭐️ #PVR: 51,000
⭐️ #INOX: 38,500
⭐️ #Cinepolis: 27,500
⭐️ Total tickets sold: 1,17,000#BO Tsunami loading 🔥🔥🔥
NOTE: Full-fledged advance booking will start tomorrow. pic.twitter.com/DW2mLJYhvO#Pathaan *advance booking* status at *national chains*… Update till Thursday, 11.30 pm…
— taran adarsh (@taran_adarsh) January 19, 2023
⭐️ #PVR: 51,000
⭐️ #INOX: 38,500
⭐️ #Cinepolis: 27,500
⭐️ Total tickets sold: 1,17,000#BO Tsunami loading 🔥🔥🔥
NOTE: Full-fledged advance booking will start tomorrow. pic.twitter.com/DW2mLJYhvO
ನಟ ಶಾರುಖ್ ಖಾನ್ ತಮ್ಮ ಅಮೋಘ ಅಭಿನಯದ ಮೂಲಕ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಅವರನ್ನು ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮುಂಬೈನ ಶಾರುಖ್ ಅಭಿಮಾನಿಗಳ ಸಂಘವು ಇಡೀ ಥಿಯೇಟರ್ ಟಿಕೆಟ್ ಖರೀದಿ ಮಾಡುವ ಮೂಲಕ ಕಿಂಗ್ ಖಾನ್ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ಹೌದು, ಈ ವಿಷಯ ಕೇಳಿದವರು ಹುಬ್ಬೇರಿಸಿದ್ದಾರೆ. ಸಿನಿಮಾ ತೆರೆ ಕಾಣಲು ಕೇವಲ ನಾಲ್ಕು ದಿನ ಬಾಕಿ ಇದೆ. ಈ ಹೊತ್ತಿನಲ್ಲಿ ಮುಂಬೈನ ಶಾರುಖ್ ಅಭಿಮಾನಿಗಳು ಗೈಟಿ ಗ್ಯಾಲಕ್ಸಿ ಥಿಯೇಟರ್ (Mumbai's Gaiety Galaxy Theater)ನ ಮೊದಲ 9 ಗಂಟೆಯ ಶೋನ ಎಲ್ಲ ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ.
ಖಾರುಖ್ ಖಾನ್ ಅಭಿಮಾನಿಗಳ ಸಂಘ: ಜಿ7 ಮಲ್ಟಿಫ್ಲೆಕ್ಸ್ ಮತ್ತು ಮರಾಠಾ ಮಂದಿರ್ ಸಿನಿಮಾ ಚಿತ್ರಮಂದಿರದದ ಕಾರ್ಯ ನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿ ಮಾಹಿತಿ ನೀಡಿದ್ದು, ಖಾರುಖ್ ಖಾನ್ ಅಭಿಮಾನಿಗಳ ಸಂಘ ಒಂದು ಇಡೀ ಥಿಯೇಟರ್ ಟಿಕೆಟ್ಗಳನ್ನು ಕೊಂಡುಕೊಂಡಿದೆ. ಜನವರಿ 25ರಂದು ಬೆಳಗ್ಗೆ 9 ಗಂಟೆಗೆ ಈ ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿಸಿತು.
ಮುಂಬೈನ ಗೈಟಿ ಗ್ಯಾಲಕ್ಸಿ ಚಿತ್ರಮಂದಿರವನ್ನು 1972ರಲ್ಲಿ ಸ್ಥಾಪಿಸಲಾಯಿತು. ಮೊದಲ ಬಾರಿಗೆ ಇಲ್ಲಿ ಬೆಳಗ್ಗೆ 9 ಗಂಟೆಗೆ ಚಲನಚಿತ್ರ ಬಿಡುಗಡೆ ಆಗುತ್ತಿದೆ. ಶಾರುಖ್ ಅಭಿನಯದ ಪಠಾಣ್ ಚಿತ್ರ ಈ ಸಾಧನೆ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಥಿಯೇಟರ್ ಮೊದಲ ಬಾರಿಗೆ ತನ್ನ ನೀತಿಯನ್ನು ಬದಲಾಯಿಸಿಕೊಂಡಿದೆ.
ಪಠಾಣ್ ಸಿನಿಮಾ ಮುಂಗಡ ಬುಕ್ಕಿಂಗ್ ದಾಖಲೆ: ಇನ್ನು ಬಹು ನಿರೀಕ್ಷಿತ ಪಠಾಣ್ ಸಿನಿಮಾ ಮುಂಗಡ ಬುಕ್ಕಿಂಗ್ನಲ್ಲಿ ಸಾಕಷ್ಟು ಗಳಿಕೆ ಮಾಡುತ್ತಿದೆ. ಆರಂಭಿಕ ಅಂಕಿ - ಅಂಶದ ಪ್ರಕಾರ, ಸಿನಿಮಾವು ಮುಂಗಡ ಬುಕ್ಕಿಂಗ್ನಲ್ಲಿ 3.68 ಕೋಟಿ ರೂಪಾಯಿಗೂ ಅಧಿಕ ಗಳಿಸಿದೆ. 1,17,000ಕ್ಕೂ ಹೆಚ್ಚು ಟಿಕೆಟ್ಗಳು ಸೇಲ್ ಆಗಿವೆ. ಭಾರತೀಯ ಬಾಕ್ಸ್ ಆಫೀಸ್ ಮಾಹಿತಿ ಪ್ರಕಾರ, ಸಿನಿಮಾ ಟಿಕೆಟ್ ಮುಂಗಡ ಬುಕ್ಕಿಂಗ್ ರೇಸ್ನಲ್ಲಿ 9 ಕೋಟಿಗೂ ಅಧಿಕ ಸಂಪಾದನೆ ಮಾಡಿದೆ.
ಶಾರುಖ್ ದೀಪಿಕಾ ನಾಲ್ಕನೇ ಚಿತ್ರ: ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ತಮ್ಮ ನಾಲ್ಕನೇ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಆ ಮೂರೂ ಸಿನಿಮಾಗಳಲ್ಲಿಯೂ ಅತ್ಯುತ್ತಮ ಜೋಡಿ ಎಂದು ಕರೆಸಿಕೊಂಡಿದೆ. ಈ ಚಿತ್ರದ ಮೇಲೂ ಅವರ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: 32 ವರ್ಷಗಳ ಸುದೀರ್ಘ ಕನಸು ಇಂದು ನನಸು: ಪಠಾಣ್ ಚಿತ್ರವನ್ನು ಸಿನಿ ಜರ್ನಿಯ ಹೊಸ ಅಧ್ಯಾಯಕ್ಕೆ ಸೇರಿಸಿದ ಶಾರುಖ್ ಖಾನ್
250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಪಠಾಣ್ ಜನವರಿ 25 ರಂದು ರಿಲೀಸ್ ಆಗಲಿದೆ. ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ಆದಿತ್ಯ ಚೋಪ್ರಾ ಮತ್ತು ಅಲೆಕ್ಸಾಂಡರ್ ದೋಸ್ಟಲ್ ನಿರ್ಮಾಣ ಮಾಡಿದ್ದಾರೆ.