ETV Bharat / entertainment

ಮದುವೆ ಶಾಸ್ತ್ರಕ್ಕೆ ಹೆಸರು ಬದಲಾಯಿಸಿಕೊಂಡಿದ್ದ ಶಾರುಖ್​ - ಗೌರಿ: ಕಿಂಗ್​​ ಖಾನ್​ ಹೆಸರಲ್ಲಿದೆ ವಿಶೇಷತೆ

ವಿವಾಹ ಶಾಸ್ತ್ರಕ್ಕೋಸ್ಕರ ಶಾರುಖ್ ಖಾನ್ ಮತ್ತು ಗೌರಿ ಜೋಡಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

shah rukh khan and Gauri
ಶಾರುಖ್​ - ಗೌರಿ
author img

By

Published : Jul 28, 2023, 3:29 PM IST

ಬಾಲಿವುಡ್​​ ಕಿಂಗ್​​ ಶಾರುಖ್ ಖಾನ್ ಮತ್ತು ಗೌರಿ ಖಾನ್ ಪ್ರೇಮಕಥೆ ಇಡೀ ಜಗತ್ತಿಗೆ ತಿಳಿದಿದೆ. ಶಾರುಖ್ ತಮ್ಮ ವೃತ್ತಿಜೀವನದ ಆರಂಭಕ್ಕೂ ಮುನ್ನವೇ ಗೌರಿ ಅವರಿಗೆ ತಮ್ಮ ಮನಸ್ಸು ಮೀಸಲಿಟ್ಟಿದ್ದರು. ಶಾರುಖ್ ಖಾನ್ ಗೌರಿ ಅವರ ಪ್ರೀತಿಯಲ್ಲಿ ಮುಳುಗಿದ್ದರು. ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಶಾರುಖ್ ಖಾನ್ 1992 - 93 ರಲ್ಲಿ ಹಿರಿತೆರೆಯಲ್ಲಿ ಸದ್ದು ಮಾಡಿದರು. ಆದರೆ ಚೊಚ್ಚಲ ಚಿತ್ರ ಬಿಡುಗಡೆಗೂ ಮುನ್ನವೇ ಶಾರುಖ್ ಗೌರಿ ಹಸೆಮಣೆ ಏರಿದ್ರು.

ವಿವಾಹ ಶಾಸ್ತ್ರಕ್ಕೋಸ್ಕರ ಹೆಸರು ಬದಲಾವಣೆ: ಇದೀಗ ಈ ತಾರಾ ಜೋಡಿಯ ಮದುವೆ ಶಾಸ್ತ್ರದಲ್ಲಿ ಕೆಲಸ ಕುತೂಹಲಕಾರಿ ಘಟನೆಗಳು ನಡೆದಿದೆ ಎನ್ನಲಾಗುತ್ತಿದೆ. ಹೌದು, ಶಾರುಖ್ ಖಾನ್ ಗೌರಿ ಅವರನ್ನು ಮದುವೆಯಾಗಲು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರಂತೆ. ಗೌರಿ ಕೂಡ ಮದುವೆಗೆ ಹೊಸ ಹೆಸರನ್ನು ಆರಿಸಿಕೊಂಡಿದ್ದರು. ಈ ಬದಲಾವಣೆ ವಿವಾಹ ಶಾಸ್ತ್ರಗಳಿಗೆ ಸೀಮಿತವಾಗಿತ್ತು.

ಶಾರುಖ್ - ಗೌರಿ ಮದುವೆ: ಶಾರುಖ್ ಮತ್ತು ಗೌರಿ ಅವರದ್ದು ಅಂತರ್​ಧಮರ್ಮೀಯ ವಿವಾಹ. ಈ ಮದುವೆಗೆ ಮೊದಲು ಗೌರಿ ಕುಟುಂಬಸ್ಥರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರಮುಖ ಕಾರಣ ಶಾರುಖ್ ಖಾನ್ ಅವರದ್ದು ಅನ್ಯಧರ್ಮ ಮತ್ತು ಅವರ ವೃತ್ತಿ. ಆಗ ಶಾರುಖ್‌ ಅವರಿಗೆ ಕೇವಲ 26 ವರ್ಷ ಮತ್ತು ಗೌರಿ ಅವರಿಗೆ 21 ವರ್ಷ. ಶಾರುಖ್ ಮತ್ತು ಗೌರಿ ಇಬ್ಬರೂ ಈ ಮದುವೆಯನ್ನು ಎಲ್ಲರ ಒಪ್ಪಿಗೆಯಿಂದ ಮಾಡಿಕೊಳ್ಳಲು ಬಯಸಿದ್ದರು. ಹೇಗೋ ಕೊನೆಗೆ ಗೌರಿ ಅವರ ಮನೆಯವರು ಮಗಳ ಸಂತೋಷ ನೋಡಿ ಈ ಸಂಬಂಧಕ್ಕೆ ತಲೆಬಾಗಿದ್ದರು.

ಇದನ್ನೂ ಓದಿ: Captain Miller Teaser: ಧನುಷ್​ ಜನ್ಮದಿನಕ್ಕೆ 'ಕ್ಯಾಪ್ಟನ್​ ಮಿಲ್ಲರ್'​ ಟೀಸರ್ ಗಿಫ್ಟ್

ಅಂತಹ ಪರಿಸ್ಥಿತಿಯಲ್ಲಿ, ಶಾರುಖ್ ಖಾನ್ ಅವರು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಯಾಗಲು ಜಿತೇಂದ್ರ ಕುಮಾರ್ ತುಲಿ ಎಂದು ಆ ಸಂದರ್ಭಕ್ಕೆ ಎಲ್ಲರ ಒಪ್ಪಿಗೆ ಮೇರೆಗೆ ಹೆಸರು ಬದಲಾಯಿಸಿಕೊಂಡಿದ್ದರು. ಜಿತೇಂದ್ರ ಕುಮಾರ್ ತುಲಿ ಎಂದು ಹೆಸರು ಇಟ್ಟುಕೊಳ್ಳಲು ಕಾರಣವಿದೆ. ಹಿಂದಿ ಚಿತ್ರರಂಗದ ಇಬ್ಬರು ದಿಗ್ಗಜರಾದ ದಿಲೀಪ್ ಕುಮಾರ್ ಮತ್ತು ರಾಜೇಂದ್ರ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಹೆಸರನ್ನು ಇಟ್ಟುಕೊಂಡರು ಎಂದು ಹೇಳಲಾಗುತ್ತಿದೆ. ರಾಜೇಂದ್ರ ಕುಮಾರ್ ಅವರ ಪೂರ್ಣ ಹೆಸರು ರಾಜೇಂದ್ರ ಕುಮಾರ್ ತುಲಿ. ಇನ್ನು ಗೌರಿ ಸಹ ಮದುವೆ ಸಂದರ್ಭದಲ್ಲಿ ಆಯಿಶಾ ಎಂದು ಹೆಸರು ಬದಲಾಯಿಸಿಕೊಂಡರು. ಸಂಪ್ರದಾಯಗಳ ಪ್ರಕಾರ ಮದುವೆಯಾದ ನಂತರ, ಶಾರುಖ್ - ಗೌರಿ ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡರು. ಈ ಜೋಡಿಯು 1991 ರಲ್ಲಿ ವಿವಾಹ ಮಾಡಿಕೊಂಡಿತ್ತು ಎಂಬುದು ನಿಮಗೆ ತಿಳಿದೇ ಇದೆ.

ಇದನ್ನೂ ಓದಿ: Rarkpk Release: ವಿಶ್ವಾದ್ಯಂತ 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ರಿಲೀಸ್: ಪ್ರೇಕ್ಷಕರೇನಂದ್ರು ಗೊತ್ತಾ?

ಶಾರುಖ್ ಖಾನ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಜವಾನ್'. ಇದೇ ಸಾಲಿನಲ್ಲಿ ತೆರೆಕಾಣುತ್ತಿರುವ ಶಾರುಖ್​ ನಟನೆಯ ಎರಡನೇ ಸಿನಿಮಾ. ಕಿಂಗ್​ ಖಾನ್​ ರೊಮ್ಯಾಂಟಿಕ್​ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು. ಪಠಾಣ್​​ ಶಾರುಖ್​ ಅವರ ಆ್ಯಕ್ಷನ್​ ಸಿನಿಮಾ. ತೆರೆಕಾಣಲು ಸಜ್ಜಾಗಿರುವ ಜವಾನ್​ ಕೂಡ ಕಂಪ್ಲೀಟ್​ ಆ್ಯಕ್ಷನ್​ ಮೂವಿ. ಇನ್ನೂ ಡಂಕಿ ಕೂಡ ಇದೇ ಸಾಲಿನ ಕೊನೆಯಲ್ಲಿ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.