ETV Bharat / entertainment

ಇಬ್ರಾಹಿಂ ಡೆಬ್ಯೂ ಸಿನಿಮಾ ಬಗ್ಗೆ ಅಪ್​ಡೇಟ್​ ಕೊಟ್ಟ ಸಹೋದರಿ ಸಾರಾ ಅಲಿ ಖಾನ್​ - ಸಹೋದರಿ ಸಾರಾ ಅಲಿ ಖಾನ್​

ಬಾಲಿವುಡ್​ಗೆ ಎಂಟ್ರಿಯಾಗುತ್ತಿರುವ ಮತ್ತೊಬ್ಬ ಸ್ಟಾರ್​ ಕಿಡ್​, ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಅಲಿ ಖಾನ್​.

Sara Ali Khan with brother Ibrahim
ಸಹೋದರ ಅಬ್ರಾಹಿಂ ಜೊತೆ ಸಾರಾ ಅಲಿ ಖಾನ್​
author img

By

Published : May 20, 2023, 1:34 PM IST

Updated : May 20, 2023, 1:40 PM IST

ಸೈಫ್​ ಅಲಿ ಖಾನ್​ ಹಾಗೂ ಅವರ ಮಾಜಿ ಪತ್ನಿ ಅಮೃತಾ ಸಿಂಗ್​ ಅವರ ಪುತ್ರ ಇಬ್ರಾಹಿಂ ಅಲಿ ಖಾನ್​ ಚಿತ್ರರಂಗಕ್ಕೆ ಪ್ರವೇಶಿಸಲು ತಯಾರಾಗಿದ್ದು, ಇಬ್ರಾಹಿಂ ಅವರ ಹಿರಿಯ ಸಹೋದರಿ ಹಾಗೂ ನಟಿ ಸಾರಾ ಅಲಿ ಖಾನ್​ ತಮ್ಮನ ಚೊಚ್ಚಲ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್​ ಹಂಚಿಕೊಂಡಿದ್ದಾರೆ. ಸ್ಟಾರ್​ ಕಿಡ್​ ಇಬ್ರಾಹಿಂ ಅಲಿ ಖಾನ್​ ಈಗಾಗಲೇ ಪಾಪರಾಜಿಗಳ ಮೆಚ್ಚಿನ ನಟನಾಗಿದ್ದು, ಆಕರ್ಷಕ ಲುಕ್​ ಹಾಗೂ ಡೌನ್ ಟು ಅರ್ಥ್ ವ್ಯಕ್ತಿತ್ವದ ಸೌಜನ್ಯದಿಂದ ಸಾಮಾಜಿಕ ಮಾಧ್ಯಮದಲ್ಲಿ ಹಿಟ್ ಆಗಿದ್ದಾರೆ.

ನಟ ಹಾಗೂ ನಿರ್ಮಾಪಕ ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್​ ಅಡಿಯಲ್ಲಿ ಇಬ್ರಾಹಿಂ ಅಲಿ ಖಾನ್​ ತಮ್ಮ ಕನಸಿನ ಚೊಚ್ಚಲ ಸಿನಿಮಾವನ್ನು ಮಾಡಲಿದ್ದಾರೆ. ಇದಿಗ ಸಹೋದರಿ ಸಿನಿಮಾದ ಬಗ್ಗೆ ಅಪ್ಡೇಟ್​ ನೀಡಿದ್ದಾರೆ. ಈ ವರ್ಷ ಕಾನ್​ ಚಲನಚಿತ್ರೋತ್ಸವಕ್ಕೆ ಪಾದಾರ್ಪಣೆ ಮಾಡಿರುವ ನಟಿ ಸಾರಾ ಅಲಿ ಖಾನ್​, ಸಂದರ್ಶನವೊಂದರಲ್ಲಿ ಇಬ್ರಾಹಿಂ ಅವರ ಚೊಚ್ಚಲ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇಬ್ರಾಹಿಂ ಡೆಬ್ಯೂ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಸಾರಾ, ತಮ್ಮ ಸಹೋದರ ಈಗಾಗಲೇ ಸರ್ಜಮೀನ್ ಎಂದು ಹೆಸರಿಸಲಾದ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು. ಮುಂಬರುವ ಚಿತ್ರಕ್ಕೆ ಬೊಮನ್ ಇರಾನಿ ಅವರ ಪುತ್ರ ಕಯೋಜ್ ಇರಾನಿ ನಿರ್ದೇಶನ ನೀಡಲಿದ್ದಾರೆ. ಸರ್ಜಮೀನ್‌ನಲ್ಲಿ ಕಾಜೋಲ್ ಮತ್ತು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇಬ್ರಾಹಿಂ ಅವರೊಂದಿಗಿನ ತನ್ನ ಬಾಂಧವ್ಯದ ಬಗ್ಗೆ ಮಾತನಾಡಿದ ಅತ್ರಾಂಗಿ ರೇ ನಟಿ ಸಾರಾ, " ನನ್ನ ಕಿರಿಯ ಸಹೋದರನಿಗೆ ನಾನು ತಾಯಿಯ ಭಾವನೆಯನ್ನು ಹೊಂದಿದ್ದೇನೆ. ನಿಮಗೆ ಗೊತ್ತಾ, ಅವನು ನಟನಾಗಿ ತನ್ನ ಮೊದಲ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾನೆ. ಅದನ್ನು ನಾನು ನಂಬಲೂ ಸಾಧ್ಯವಾಗುತ್ತಿಲ್ಲ. ಆದರೆ ಚಿತ್ರೀಕರಣ ಮುಗಿಸಿರುವುದಂತೂ ಸತ್ಯ. ಅವನು ಮನೆಗೆ ಬಂದಾಗಲೆಲ್ಲಾ, ಅದು ಶಾಲೆಯಿಂದ ಅಥವಾ ಶೂಟಿಂಗ್‌ನಿಂದ ಆಗಿರಲಿ, ನಾವಿಬ್ಬರೂ (ಅಮೃತ ಮತ್ತು ಸಾರಾ) ಅವನ ಮೇಲಿನ ಅತ್ಯಂತ ಪ್ರೀತಿ ಮತ್ತು ಇಷ್ಟ ವ್ಯಕ್ತಪಡಿಸುತ್ತೇವೆ. ಅವನ ಬಗೆಗಿನ ಈ ವರ್ತನೆಯನ್ನು ನಾನು ಅರಿತುಕೊಂಡಾಗ, ನಾನು ನನ್ನ ತಾಯಿಯ ಹೃದಯವನ್ನು ಹೊಂದಿದ್ದೇನೆ ಎಂಬುದು ಭಾಸವಾಗುತ್ತದೆ. ಏಕೆಂದರೆ ನಾವು ಇಬ್ಬರೂ ಇಬ್ರಾಹಿಂನನ್ನು ಒಂದೇ ರೀತಿ ನಡೆಸಿಕೊಳ್ಳುತ್ತೇವೆ" ಎಂದು ಹೇಳಿದರು.

ತಮ್ಮ ಚೊಚ್ಚಲ ಚಿತ್ರದ ಶೂಟಿಂಗ್‌ಗೆ ಮುನ್ನ, ಇಬ್ರಾಹಿಂ ಅವರು ಕರಣ್ ಜೋಹರ್ ಅವರಿಂದ ಚಲನಚಿತ್ರ ನಿರ್ಮಾಣದ ಬಗ್ಗೆ ಕಲಿತಿದ್ದಾರೆ. ಮಹತ್ವಾಕಾಂಕ್ಷಿ ನಟ ಕರಣ್ ಅವರ ಮುಂಬರುವ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ವಿಕ್ಟರಿ ವೆಂಕಟೇಶ್​ಗೆ ಟಕ್ಕರ್ ಕೊಡಲು ಬಂದ ಬಾಲಿವುಡ್ ಸ್ಟಾರ್ ಲುಕ್ ರಿವೀಲ್

Last Updated : May 20, 2023, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.