ETV Bharat / entertainment

ನಾನು ಹಾಡಲು ಅಪ್ಪನೇ ಸ್ಫೂರ್ತಿ: ಸಾನ್ವಿ ಸುದೀಪ್ - Sudeep

ಸುದೀಪ್​ ಅಕ್ಕನ ಮಗ ಸಂಚಿತ್​ ಅವರ ಮೊದಲ ಸಿನಿಮಾದ ಟೈಟಲ್​ ಲಾಂಚ್​ ಕಾರ್ಯಕ್ರಮದಲ್ಲಿ ಸಾನ್ವಿ ಸುದೀಪ್ ಹಾಡೊಂದನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.

Sanvi Sudeep song
ಸಾನ್ವಿ ಸುದೀಪ್ ಹಾಡು
author img

By

Published : Jun 27, 2023, 11:48 AM IST

Updated : Jun 27, 2023, 11:59 AM IST

ಸಾನ್ವಿ ಸುದೀಪ್​ ಸಾಂಗ್

ಸ್ಟಾರ್ ಮಕ್ಕಳು ಈ ಸಿನಿಮಾ ಎಂಬ ಕಲರ್​ಫುಲ್​​ ದುನಿಯಾಗೆ ಬರೋದು ಹೊಸತೇನಲ್ಲ. ಇದೀಗ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಕಿಚ್ಚ ಸುದೀಪ್ ಕುಟುಂಬದಿಂದ ಇಬ್ಬರು ಕುಡಿಗಳು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ‌. ‌ಈಗಾಗ್ಲೇ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟ ಹಾಗೂ ನಿರ್ದೇಶಕನಾಗಿ ಈ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಕಿಚ್ಚ ಸುದೀಪ್ ಮುದ್ದಿನ ಮಗಳು ಸಾನ್ವಿ ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಸೂಚನೆ‌ ನೀಡಿದ್ದಾರೆ.

ಹೌದು, ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಹಾಡುಗಳನ್ನು ಹಾಡಿ ಸೆನ್ಸೇಷನ್​​ ಕ್ರಿಯೇಟ್ ಮಾಡಿರೋ ನಟ ಸುದೀಪ್ ಪುತ್ರಿ ಸಾನ್ವಿ ಅದ್ಭುತ ಸಿಂಗರ್ ಅನ್ನೋದು ಅಭಿಮಾನಿಗಳ ಮಾತು. ಆದರೆ, ಸಾನ್ವಿ ಸುದೀಪ್ ಹಾಡೋದಕ್ಕೆ ದೊಡ್ಡ ವೇದಿಕೆ ಸಿಕ್ಕಿರಲಿಲ್ಲ. ಇದೀಗ ತನ್ನ ಅಣ್ಣ ಸಂಚಿತ್ ಸಂಜೀವ್ ಅಭಿನಯಿಸಿ ಹಾಗು ನಿರ್ದೇಶನ ಮಾಡುತ್ತಿರೋ ಚಿತ್ರದ ಟೈಟಲ್ (ಜಿಮ್ಮಿ)​, ಕ್ಯಾರೆಕ್ಟರ್​ ಗ್ಲಿಂಪ್ಸ್ ರಿಲೀಸ್​ ಕಾರ್ಯಕ್ರಮದಲ್ಲಿ ಸಾನ್ವಿ ಇಂಗ್ಲಿಷ್ ಹಾಡೊಂದನ್ನು ಹಾಡುವ ಮೂಲಕ ಎಲ್ಲರ ಚಪ್ಪಾಳೆ ಹಾಗೂ ಮೆಚ್ಚುಗೆ ಗಳಿಸಿದ್ದಾರೆ.

Sanvi Sudeep song
ಸುದೀಪ್ ಕುಟುಂಬ

ಇಂಗ್ಲಿಷ್​ ಸಾಹಿತ್ಯ ಬರೆದು- ಹಾಡು: ಜಿಮ್ಮಿ ಚಿತ್ರದ ಪಾತ್ರ ಪರಿಚಯದ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಸಾನ್ವಿ ಸುದೀಪ್ ಇಂಗ್ಲಿಷ್​​ ಸಾಹಿತ್ಯ ಬರೆದು, ಅದನ್ನು ಹಾಡಿರೋದು ವಿಶೇಷ. ‌ಈ ಹಾಡಿಗೆ ಸಂಗೀತ ನಿರ್ದೇಶಕ ವಾಸುಕಿ ವೈಭವ್​ ಮ್ಯೂಸಿಕ್ ನೀಡಿದ್ದಾರೆ. ಟೀಸರ್​ ಬಿಡುಗಡೆಯ ನಂತರ ಮಾತನಾಡಿದ ಸಾನ್ವಿ ಸುದೀಪ್​, ದೊಡ್ಡ ಪರದೆಯ ಮೇಲೆ ಈ ಟೀಸರ್ ನೋಡಿ, ಹಾಡು ಕೇಳಿ ಖುಷಿ ಆಯಿತು. ಅದರಲ್ಲೂ ನನ್ನಣ್ಣನ ಚಿತ್ರಕ್ಕೆ ಹಾಡಿರುವುದು ಇನ್ನೂ ಖುಷಿಯ ವಿಚಾರ. ನಮ್ಮಿಬ್ಬರಿಗೂ ಇದು ಮೊದಲ ಚಿತ್ರ. ತುಂಬಾ ಹೆಮ್ಮೆಯಾಗುತ್ತಿದೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಇನ್ನೂ ಸಾನ್ವಿ ಹೇಳುವ ಹಾಗೆ, ತಂದೆ ಸುದೀಪ್‌ ಅವರಿಗೆ ಮಗಳು ಹಾಡುತ್ತಾಳೆ ಎಂದು ಗೊತ್ತಾಗಿದ್ದು ಕೂಡ ಒಂದು ಇಂಟ್ರೆಸ್ಟಿಂಗ್​ ಸ್ಟೋರಿ. ಶಾಲೆಯಲ್ಲಿ ಗಾಯನ ಕಾರ್ಯಕ್ರಮಕ್ಕೆ ಸಾನ್ವಿ ಹೆಸರು ಕೊಟ್ಟಿದ್ದರು. ಆ ಕಾರ್ಯಕ್ರಮಕ್ಕೆ ಬಂದಾಗಲೇ ಕಿಚ್ಚ ಸುದೀಪ್ ಅವರಿಗೆ ತನ್ನ ಮಗಳು ಉತ್ತಮವಾಗಿ ಹಾಡುತ್ತಾಳೆ ಎಂಬ ವಿಚಾರ ಗೊತ್ತಾಗಿದ್ದು. ಅಲ್ಲಿಂದ ಸುದೀಪ್ ಕೂಡ‌ ಮಗಳ ಸಿಂಗಿಂಗ್ ಬಗ್ಗೆ ಹೆಚ್ಚು ಸಪೋರ್ಟ್ ‌ಮಾಡುತ್ತಾ ಬಂದಿದ್ದಾರೆ. ಸಾನ್ವಿ ಸುದೀಪ್ ಅವರಲ್ಲಿ ಒಬ್ಬ ಅದ್ಭುತ ಗಾಯಕಿ ಇದ್ದಾರೆ ಅನ್ನೋದಿಕ್ಕೆ ಸದ್ಯ ಜಿಮ್ಮಿ ಚಿತ್ರಕ್ಕೆ ಹಾಡಿರೋದು ಒಂದು ಸಾಕ್ಷಿ‌. ಈ ಹಾಡು ಕೇಳುತ್ತಿದ್ದಂತೆ ಅಪ್ಪ ತಬ್ಬಿಕೊಂಡರು. ಅಪ್ಪನಿಗೆ ರಫ್​ ಟ್ರ್ಯಾಕ್​ ಕೇಳಿಸೋಕೆ ಹೋದೆ. ಅವರು ಹಾಡು ಕೇಳಿದರು. ಅವರು ಏನೂ ಮಾತನಾಡಲಿಲ್ಲ. ಬಹಳ ಚೆನ್ನಾಗಿದೆ ಎಂದು ನನ್ನನ್ನು ಅಪ್ಪಿಕೊಂಡರು. ಆ ದಿನ ಮರೆಯಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಕೆಲಸ ಕಳೆದುಕೊಂಡ ಮಹಿಳಾ ಬಸ್ ಡ್ರೈವರ್​ಗೆ ಕಾರ್​ ಗಿಫ್ಟ್​ ಕೊಟ್ಟ ನಟ ಕಮಲ್​ ಹಾಸನ್​

ಇನ್ನು ಮಗಳ ಹಾಡಿನ ಬಗ್ಗೆ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌. ಸುದೀಪ್ ಹೇಳುವ ಹಾಗೆ, ಮಗಳು ಸಾನ್ವಿಯದ್ದು ಕೊಂಚ ಸಂಕೋಚದ ಸ್ವಭಾವ. ಆಕೆ ಬಹಳ ಚೆನ್ನಾಗಿ ಹಾಡುತ್ತಾಳೆ ಅನ್ನೋದಕ್ಕೆ ಈ ಜಿಮ್ಮಿ ಸಿನಿಮಾಕ್ಕೆ ಹಾಡಿರೋದು ಒಂದು ಸಾಕ್ಷಿ. ತಂದೆಯಾಗಿ ಮಗಳ ಬಗ್ಗೆ ಬಹಳ ಹೆಮ್ಮೆಯಾಗಿದೆ ಎಂದು ತಿಳಿಸಿದರು. ‌

ಇದನ್ನೂ ಓದಿ: 1.75 ಕೋಟಿ ರೂ. ಕಲೆಕ್ಷನ್​​: ಅತಿ ಕಡಿಮೆ ಸಂಪಾದನೆ ಮಾಡಿದ 'ಆದಿಪುರುಷ್​'!

Last Updated : Jun 27, 2023, 11:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.