ETV Bharat / entertainment

ಮಾಲ್ಡೀವ್ಸ್​ನಲ್ಲಿ ಜನ್ಮದಿನ ಆಚರಿಸಿಕೊಂಡ 'ಬರ್ಫಿ' ಚೆಲುವೆ ಸಂಯುಕ್ತಾ ಹೊರನಾಡು - ಸಂಯುಕ್ತ ಹೊರನಾಡ್​ ಮಾಲ್ಡೀವ್ಸ್​ ಫೋಟೋಗಳು

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರಾಗಿರುವ ಸಂಯುಕ್ತಾ ಹೊರನಾಡು​ ತಮ್ಮ ಜನ್ಮದಿನವನ್ನು ಮಾಲ್ಡೀವ್ಸ್​ನಲ್ಲಿ ಆಚರಿಸಿದರು.

Samyuktha horanadu celebrated birthday in Maldives beach  Samyuktha horanadu celebrated birthday  Maldives beach  Maldives beach photos  Samyuktha visit Maldives beach  ಸಂಯುಕ್ತಾ ಹೊರನಾಡ್ ಜನ್ಮದಿನ  ಮಾಲ್ಡೀವ್ಸ್​ನಲ್ಲಿ ಜನ್ಮದಿನ ಆಚರಿಸಿದ ಸಂಯುಕ್ತಾ ಹೊರನಾಡ್  ಮಾಲ್ಡೀವ್ಸ್​ ಬೀಚ್​ ಫೋಟೋಗಳು  ಸಂಯುಕ್ತ ಹೊರನಾಡ್​ ಮಾಲ್ಡೀವ್ಸ್​ ಫೋಟೋಗಳು  ಸಂಯುಕ್ತ ಹೊರನಾಡ್​ ಜನ್ಮದಿನ ಸುದ್ದಿ
ಕೃಪೆ: Instagram
author img

By

Published : May 24, 2022, 11:53 AM IST

ನಟ ದಿಗಂತ್ ಅಭಿನಯದ ಲೈಫು ಇಷ್ಟೇನೆ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶ ಪಡೆದ ಸಂಯುಕ್ತಾ ಹೊರನಾಡು​ ತಮ್ಮ ಜನ್ಮದಿನವನ್ನು ಮಾಲ್ಡೀವ್ಸ್​ನಲ್ಲಿ ಸಂಭ್ರಮಿಸಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಪ್ರಸಿದ್ದಿ ಪಡೆದಿರುವ ನಟಿ, ಸರಳ ಹಾಗೂ ಸಹಜ ಅಭಿನಯದ ಮೂಲಕ ಮನೆಮಾತಾದ ಸುಧಾ ಬೆಳವಡಿ ಅವರ ಪುತ್ರಿ ಸಂಯುಕ್ತಾ ಹೊರನಾಡು.

ಲೈಫು ಇಷ್ಟೇನೆ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶ ಪಡೆದು, ತಮ್ಮ ಮೊದಲ ಚಿತ್ರದಲ್ಲಿ ತುಂಟ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಸೀರಿಯಸ್​ ಪಾತ್ರಗಳನ್ನೂ ಮಾಡಿ, ತಾನು ಯಾವುದಕ್ಕೂ ಕಮ್ಮಿ ಇಲ್ಲ ತೋರಿಸಿಕೊಟ್ಟ ಗಟ್ಟಿಗಿತ್ತಿ ಸಂಯುಕ್ತಾ ಹೊರನಾಡು​.

ಇದನ್ನೂ ಓದಿ: ಸಲಾರ್ ಬಳಿಕ ಯಂಗ್ ಟೈಗರ್​ಗೆ ಪ್ರಶಾಂತ್ ನೀಲ್ ಆ್ಯಕ್ಷನ್-ಕಟ್!

ಮುಗ್ದ ಅಭಿನಯದ ಮೂಲಕ ಜನರಿಗಿಷ್ಟವಾದ ನಟಿ ನಂತರ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಗ್ಗರಣೆ ಚಿತ್ರದ ನಟನೆಗೆ ಫಿಲ್ಮ್​ಫೇರ್​ನ ಬೆಸ್ಟ್​ ಸಪೋರ್ಟಿಂಗ್ ನಟಿ ಎಂಬ ಪ್ರಶಸ್ತಿ ಪಡೆದರು. ಇದರ ನಂತರ ಸಂಯುಕ್ತಾ, ಸ್ಯಾಂಡಲ್​ವುಡ್​ನ ಬ್ಯುಸಿ ನಟಿಯರಲ್ಲಿ ಒಬ್ಬರಾದರು.

ಕಾಫಿತೋಟ, ನೀನೇ ಬರಿ ನೀನೇ, ಜಿಗರ್ಥಂಡಾ, ಸರ್ಕಾರಿ ಕೆಲಸ ದೇವರ ಕೆಲಸ, ಮಾರಿಕೊಂಡವರು, ದಯವಿಟ್ಟು ಗಮನಿಸಿ, ತ್ರಾಯ, ನಾನು ಮತ್ತು ಗುಂಡ, ಬರ್ಫಿ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ಸಹ ಅಭಿನಯಿಸಿದ್ದು, ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.