ETV Bharat / entertainment

ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ: ವಿಚಾರಣೆ ವೇಳೆ ಆರೋಪಿ ಸಮರ್​ ಸಿಂಗ್​ ಬಿಚ್ಚಿಟ್ಟ ರಹಸ್ಯಗಳೇನು?

ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಮರ್​ ಸಿಂಗ್​ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

akanksha-dubey
ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ
author img

By

Published : Apr 14, 2023, 1:02 PM IST

ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಸಾವಿನ ಪ್ರಕರಣದ ಆರೋಪಿಗಳಾದ ಸಮರ್ ಸಿಂಗ್ ಮತ್ತು ಸಂಜಯ್ ಸಿಂಗ್ ಇಬ್ಬರನ್ನು ಬಂಧಿಸಲಾಗಿದ್ದು, ವಾರಾಣಸಿಯ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಏಪ್ರಿಲ್​ 13ರಿಂದ 5 ದಿನಗಳವರೆಗೆ ಸಮರ್​ ಸಿಂಗ್​ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆದರೆ, ಸಂಜಯ್​ ಸಿಂಗ್​ ಅವರು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಏಪ್ರಿಲ್​ 13 ರಂದು ಬೆಳಗ್ಗೆ 10 ಗಂಟೆಯಿಂದ ಸಮರ್​ ಸಿಂಗ್ ಅವರನ್ನು ತನಿಖೆ ನಡೆಸಲು ನ್ಯಾಯಾಲಯವು ಆದೇಶಿಸಿತ್ತು. ಆದರೆ ಈ ವಿಷಯವಾಗಿ ನಿರ್ಲಕ್ಷ್ಯತನ ತೋರಿದ ಪೊಲೀಸರು ಸಂಜೆ 4 ಗಂಟೆಯಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಆಕಾಂಕ್ಷಾ ದುಬೆ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಪೊಲೀಸರಿಗೆ ಸಮರ್​​ ಸಿಂಗ್​ ಸಂಪೂರ್ಣ ಸಹಕಾರ ನೀಡಿದ್ದು, ಬಹುತೇಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಆದರೆ, ಅವರು ಪ್ರತಿ ಬಾರಿಯೂ ತಾನು ನಿರಪರಾಧಿ ಮತ್ತು ಆಕಾಂಕ್ಷಾ ಸಾವಿನ ಹಿಂದೆ ನನ್ನ ಕೈವಾಡವಿಲ್ಲ ಎಂದು ಹೇಳಿದ್ದಾರೆ. "ಅವರು ಒಂದು ವೇಳೆ ನನ್ನಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲಿ ನನ್ನ ಹೆಸರನ್ನು ಡೆತ್​ ನೋಟಲ್ಲಿ ಉಲ್ಲೇಖಿಸುತ್ತಿದ್ದರು. ನನ್ನ ಮೇಲೆಯೇ ಆರೋಪ ಮಾಡುತ್ತಿದ್ದರು. ಅಲ್ಲದೇ ಅವರು ನನ್ನ ವಿಷಯವಾಗಿ ಸಾಯುವಂತಹ ಘಟನೆ ನಮ್ಮಿಬ್ಬರ ನಡುವೆ ನಡೆದೇ ಇಲ್ಲ. ಅವರ ಸಾವಿನ ಹಿಂದೆ ಬೇರೆ ಯಾವುದೋ ಕಾರಣವಿದೆ, ಹೊರತಾಗಿ ನಾನಲ್ಲ" ಎಂದು ಹೇಳಿದ್ದಾರೆ.

ಆಕಾಂಕ್ಷಾ ದುಬೆ ಮತ್ತು ಸಮರ್​ ಸಿಂಗ್​ ನಡುವಿನ ಸಂಬಂಧದ ಕೆಲವು ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಇದಕ್ಕೆ, "ಇಬ್ಬರು ಜೊತೆಯಾಗಿ 26 ಕ್ಕೂ ಹೆಚ್ಚು ಆಲ್ಬಮ್​ ಸಾಂಗ್​ಗಳನ್ನು ಮಾಡಿದ್ದೇವೆ. ನಮ್ಮಿಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ನಾವು ಎಲ್ಲ ವಿಷಯಗಳನ್ನು ಪರಸ್ಪರ ಶೇರ್​ ಮಾಡಿಕೊಳ್ಳುತ್ತಿದ್ದೆವು" ಎಂದು ತಿಳಿಸಿದ್ದಾರೆ. ಅಲ್ಲದೇ ಆಕಾಂಕ್ಷಾ ಜೊತೆಗಿನ ಹಣಕಾಸು ವ್ಯವಹಾರದ ಬಗ್ಗೆಯೂ ಮಾತನಾಡಿದ್ದಾರೆ. ಅವರು ಯಾವುದೇ ಹಣವನ್ನು ಆಕಾಂಕ್ಷಾಗೆ ನೀಡಿಲ್ಲ ಮತ್ತು ತಮ್ಮ ವಿರುದ್ಧ ಹೊರಿಸಲಾದ ಆರೋಪಗಳು ತಪ್ಪು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

"ಆಕಾಂಕ್ಷಾ ಅವರೊಂದಿಗೆ ಹಲವು ಆಲ್ಬಂಗಳು ಮತ್ತು ಸಿನಿಮಾಗಳನ್ನು ನಾನು ಮಾಡಿದ್ದೇನೆ. ಅಲ್ಲದೇ ಅವರೆಲ್ಲರೂ ಆಕೆಗೆ ಸಂಬಳವನ್ನು ನೀಡಿದ್ದಾರೆ. ಉತ್ತಮ ಜೀವನವನ್ನು ಆಕೆ ನಡೆಸುತ್ತಿದ್ದಳು. ಆದರೆ, ಅವಳು ಯಾಕೆ ಹೀಗೆ ಮಾಡಿದಳು ಎಂಬುದು ನನಗೆ ಗೊತ್ತಿಲ್ಲ. ಅವಳ ಸಾವಿನ ಹಿಂದೆ ನಾನಿಲ್ಲ" ಎಂದು ಬಲವಾಗಿ ಹೇಳಿದ್ದಾರೆ. ಸದ್ಯ ಸಮರ್​ ಸಿಂಗ್​ ಅವರ ವಿಚಾರಣೆ ನಡೆಯುತ್ತಿದ್ದು, ಇಂದು ಕೂಡ ರಹಸ್ಯ ಸ್ಥಳದಲ್ಲಿ ಅವರ ವಿಚಾರಣೆ ಪ್ರಾರಂಭವಾಗಿದೆ.

ಏನಿದು ಪ್ರಕರಣ?: ಮಾರ್ಚ್ 25 ರಂದು ನಟಿ ಆಕಾಂಕ್ಷಾ ದುಬೆ ಅವರ ಮೃತದೇಹವು ವಾರಾಣಸಿಯ ಸಾರನಾಥ್ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೋಟೆಲ್​ನವರು ಮಾಸ್ಟರ್ ಕೀ ಬಳಸಿ ಹೋಟೆಲ್ ರೂಂ ತೆರೆದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ.

ಎರಡು ದಿನಗಳ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆಕಾಂಕ್ಷಾ ದುಬೆ ಅವರ ತಾಯಿ ಮಧು ದುಬೆ ಅವರು ಭೋಜ್‌ಪುರಿ ಗಾಯಕ ಸಮರ್ ಸಿಂಗ್ ಮತ್ತು ಆತನ ಸಹೋದರ ಸಂಜಯ್ ಸಿಂಗ್ ತನ್ನ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿದ್ದರು. ಅವರಿಬ್ಬರು ನನ್ನ ಮಗಳನ್ನು ಕೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿ: ನಟ ಚೇತನ್ ಟ್ವೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.