ETV Bharat / entertainment

'ಖುಷಿ' ಶೂಟಿಂಗ್​ ಕಂಪ್ಲೀಟ್​​: ಸಿನಿಮಾಗಳಿಂದ ಬ್ರೇಕ್​​ - ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿರುವ ಸಮಂತಾ! - ಸಮಂತಾ ಲೇಟೆಸ್ಟ್ ನ್ಯೂಸ್

ನಟಿ ಸಮಂತಾ ರುತ್ ಪ್ರಭು ಅವರು ಸಿನಿಮಾಗಳಿಂದ ಒಂದು ವರ್ಷ ಬ್ರೇಕ್​ ಪಡೆಯಲಿದ್ದಾರೆ.

Samantha Ruth Prabhu
ನಟಿ ಸಮಂತಾ ರುತ್ ಪ್ರಭು
author img

By

Published : Jul 7, 2023, 5:32 PM IST

ತೆಲುಗು ಚಿತ್ರರಂಗದ ಟಾಪ್ ನಟಿ ಸಮಂತಾ ರುತ್ ಪ್ರಭು ಅವರು ಸದ್ಯ ತಾವು ಒಪ್ಪಿಕೊಂಡಿರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದು, ನಟನೆಯಿಂದ ಕೆಲ ಕಾಲ ವಿರಾಮ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ಇಂದು ಪಾಪರಾಜಿ ಮತ್ತು ಫ್ಯಾನ್ಸ್​ ಪೇಜ್​ಗಳು ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ನಟಿ ಹೈದರಾಬಾದ್‌ಗೆ ಹಿಂದಿರುಗಿರುವ ವಿಡಿಯೋಗಳಿವು. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ನಟಿಸಿರುವ ಕುಶಿ ಚಿತ್ರೀಕರಣ ಪೂರ್ಣಗೊಂಡಿದ್ದು, ನಟಿ ಸಮಂತಾ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ತಂಡವು ಅವರಿಗೆ ಸಹಾಯ ಮಾಡಲು ಏರ್​ಪೋರ್ಟ್ ತಲುಪಿತ್ತು.

ಸಿನಿಮಾಗಳಿಂದ ಒಂದು ವರ್ಷ ಬ್ರೇಕ್​​: ನಟಿ ಸಮಂತಾ ರುತ್ ಪ್ರಭು ಅವರು ಮುಂದಿನ ಬಹುನಿರೀಕ್ಷಿತ ಚಿತ್ರಗಳು ಕುಶಿ ಮತ್ತು ಸಿಟಾಡೆಲ್. ಸಿನಿಮಾ, ಸರಣಿಗೆ ಸಂಬಂಧಿಸಿದಂತೆ ತಮ್ಮ ಸಿನಿ ಕೆಲಸ ಸಂಬಂಧಿತ ಎಲ್ಲಾ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಆರೋಗ್ಯ ಚೇತರಿಕೆಗಾಗಿ ನಟಿ ಸಿನಿಮಾಗಳಿಂದ ಒಂದು ವರ್ಷ ಬ್ರೇಕ್​​ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಹೈದರಾಬಾದ್​ ಏರ್​ಪೋರ್ಟ್​ ವಿಡಿಯೋ ವೈರಲ್​: ಗುರುವಾರ ಸಂಜೆ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಮುಂದಿನ ಕುಶಿ ಚಿತ್ರದ ಫೈನಲ್​ ಶೆಡ್ಯೂಲ್​ ಮುಗಿಸಿ, ವಾಪಸ್​ ಮನೆಗೆ ತೆರಳುವ ವೇಳೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳು ಶೇರ್ ಮಾಡಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲೀಗ ವೈರಲ್​ ಆಗುತ್ತಿದೆ. ಸಮಂತಾ ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರ ಹೈದರಾಬಾದ್​ ಏರ್​ಪೋರ್ಟ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕ್ಯಾಮರಾಗಳಿಗೆ ಪೋಸ್ ನೀಡಲು ನಿರಾಕರಣೆ: ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಸೆರೆ ಹಿಡಿದಿರುವ ವಿಡಿಯೋಗಳಲ್ಲಿ, ಸಮಂತಾ ಮತ್ತು ಅವರ ತಂಡವನ್ನು ಕಾಣಬಹುದು. ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಲು ನಟಿ ನಿರಾಕರಿಸಿದರು. ಸಮಂತಾ ಬಿಳಿ ಟಿ-ಶರ್ಟ್, ಕಪ್ಪು ಜಾಕೆಟ್, ಕಪ್ಪು ಕ್ಯಾಪ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು.

ಇದನ್ನೂ ಓದಿ: 'ಶಾರುಖ್ ಖಾನ್​​ಗೆ ನಟನೆ ಗೊತ್ತಿಲ್ಲ, ಸುಂದರವಾಗಿಲ್ಲ': ಪಾಕಿಸ್ತಾನಿ ನಟಿ ತರಾಟೆಗೆ ತೆಗೆದುಕೊಂಡ ಫ್ಯಾನ್ಸ್

ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿರುವ ನಟಿ: ವೆಬ್ ಸರಣಿಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ ಸಮಂತಾ ಕನಿಷ್ಠ ಒಂದು ವರ್ಷದವರೆಗೆ ನಟನೆಯಿಂದ ದೂರ ಉಳಿಯಲಿದ್ದಾರೆ. ನಟಿಯ ಆಪ್ತರ ಪ್ರಕಾರ, ಸಮಂತಾ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲಿದ್ದಾರೆ. ಮೈಯೋಸಿಟಿಸ್ ಕಾಯಿಲೆ ವಿರುದ್ಧ ಹೋರಾಡುತ್ತಿರುವುದರಿಂದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವ ಯೋಜನೆಯಲ್ಲಿದ್ದಾರೆ. ಕೆಲವು ತಿಂಗಳ ಹಿಂದೆಯೇ ನಟನೆಯಿಂದ ಬ್ರೇಕ್​ ಪಡೆಯುವ ನಿರ್ಧಾರವನ್ನು ಸಮಂತಾ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ನಟಿ ಪ್ರಸ್ತುತ ಯಾವುದೇ ಸಿನಿಮಾಗಳಿಗೆ ಸಹಿ ಹಾಕಿಲ್ಲ. ಆಗಸ್ಟ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ.

ಇದನ್ನೂ ಓದಿ: Rishab Shetty Birthday: ಅಭಿಮಾನಿಗಳೊಂದಿಗೆ ಇಂದು 'ಕಾಡುಬೆಟ್ಟು ಶಿವ'ನ ಜನ್ಮದಿನ ಡಿವೈನ್​ ಸ್ಟಾರ್ ರಿಷಬ್‌ ಶೆಟ್ಟಿ ಮುಂದಿನ ಸಿನಿಮಾಗಳಿವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.