ETV Bharat / entertainment

ಅಂತ್ಯಗೊಂಡ ದಾಂಪತ್ಯ, ಅನಾರೋಗ್ಯ: ಕಠಿಣ ದಿನಗಳ ಬಗ್ಗೆ ಸಮಂತಾ ರುತ್​​ ಪ್ರಭು ಮನದಾಳ - Samantha personal life

Samantha Ruth Prabhu: ಸಂದರ್ಶನವೊಂದರಲ್ಲಿ ನಟಿ ಸಮಂತಾ ರುತ್​ ಪ್ರಭು ತಮ್ಮ ಕಠಿಣ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ.

Samantha Ruth Prabhu
ಸಮಂತಾ ರುತ್​​ ಪ್ರಭು
author img

By ETV Bharat Karnataka Team

Published : Nov 9, 2023, 12:20 PM IST

ಸಮಂತಾ ರುತ್ ಪ್ರಭು ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸದ್ದು ಮಾಡಿರುವ ಚೆಲುವೆ. ನಟಿಯ ಕೊನೆಯ ಚಿತ್ರ 'ಖುಷಿ'. ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಘೋಷಿಸಿಲ್ಲ. ತಮ್ಮ ಆರೋಗ್ಯ ಚೇತರಿಕೆಗೆ ಸಮಯ ಮೀಸಲಿಟ್ಟಿದ್ದಾರೆಂದು ನಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳ ಮೂಲಕ ಗಮನ ಸೆಳೆಯುತ್ತಾರೆ. ಅಪರೂಪಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

ಈಗಾಗಲೇ ವಿವಿಧ ಸಂದರ್ಶನಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ 'ಮಯೋಸಿಟಿಸ್‌'ನಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡಿರುವ ನಟಿ ಸಮಂತಾ ರುತ್ ಪ್ರಭು ಅವರು ಕಳೆದ ಎರಡು ವರ್ಷಗಳಲ್ಲಿ ಎದುರಿಸಿದ ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳ ಕುರಿತು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ನಟ ನಾಗ ಚೈತನ್ಯ ಅವರೊಂದಿಗಿನ ದಾಂಪತ್ಯ ಜೀವನ ಅಂತ್ಯ ಕಂಡಾಗ ಮತ್ತು ಸಿನಿಮಾಗಳ ಹಿನ್ನೆಡೆ ವಿಚಾರವಾಗಿ ನಟಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಸಮಂತಾ ರುತ್​ ಪ್ರಭು ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ದಾಂಪತ್ಯ ಜೀವನ ಅಂತ್ಯಗೊಂಡ ಸಂದರ್ಭ ಆರೋಗ್ಯ ಹದಗೆಟ್ಟಿತು. ಸಿನಿ ವೃತ್ತಿಜೀವನಕ್ಕೂ ಹಿನ್ನಡೆಯಾಗಿತ್ತು. ಎಲ್ಲಾ ಸಮಸ್ಯೆಗಳೂ ಒಂದೇ ಬಾರಿ ತಮ್ಮ ಮೇಲೆ ಅಪ್ಪಳಿಸುತ್ತಿವೆ ಎಂದು ಸಮಂತಾ ಭಾವಿಸಿದ್ದರಂತೆ. ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ, ಪುಟಿದೇಳುವ, ಆನ್‌ಲೈನ್ ಟ್ರೋಲಿಂಗ್‌ ಅನ್ನು ಎದುರಿಸಿದ, ಅತ್ಯಂತ ಆತಂಕದ ಕ್ಷಣಗಳನ್ನು ಅನುಭವಿಸಿದ ನಟರ ಬಗೆಗಿನ ಬರಹಗಳನ್ನು ನಾನು ಓದಿ ತಿಳಿದುಕೊಂಡೆ. ಅವರ ಕಥೆಗಳು ನನಗೆ ಸಹಕಾರಿಯಾದವು. ನನ್ನ ಶಕ್ತಿಯನ್ನು ಮರಳಿ ಪಡೆಯಲು ಅವು ಸಹಾಯ ಮಾಡಿವೆ ಎಂದು ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

'ಕೆಜಿಎಫ್​ಗೂ ಮುನ್ನ ಯಶ್​ ಯಾರು?': ನಟ ಅಲ್ಲು ಅರ್ಜುನ್​ ತಂದೆ ಹೀಗೆ ಹೇಳಿದ್ದೇಕೆ?

ಈ ದೇಶದಲ್ಲಿ 'ಅತ್ಯಂತ ಪ್ರೀತಿಯ ಸೆಲೆಬ್ರಿಟಿ'ಯಾಗಿರುವುದು 'ಅದ್ಭುತ ಕೊಡುಗೆ' ಎಂಬುದನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಅದಕ್ಕೆ ಜವಾಬ್ದಾರರಾಗಿರಿ, ಪ್ರಾಮಾಣಿಕವಾಗಿರಿ, ನೈಜವಾಗಿರಿ ಮತ್ತು ನಿಮ್ಮ ಕಥೆಯನ್ನು ಹೇಳಿ ಎಂದು ನಟಿ ಸಂದರ್ಶನದಲ್ಲಿ ತಿಳಿಸಿದರು. ಯಶಸ್ಸನ್ನು ಕೇವಲ ಬಾಕ್ಸ್ ಆಫೀಸ್ ಹಿಟ್‌ಗಳು, ಪ್ರಶಸ್ತಿಗಳು, ಪರ್ಫೆಕ್ಟ್​​ ಫಿಸಿಕಲ್​ ಲುಕ್​​ ಅಥವಾ ಫ್ಯಾಷನ್​ನಿಂದ ಮಾತ್ರ ಅಳೆಯಬಾರದು. ಬದಲಿಗೆ ಹೋರಾಟ, ಕಷ್ಟ ಮತ್ತು ಏರಿಳಿತಗಳು ನಮ್ಮನ್ನು ಗಟ್ಟಿಯಾಗಿಸುತ್ತವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬದಲಾಯ್ತು ವೇಷ, ಶುರುವಾಯ್ತು 'ತುಕಾಲಿ' ಹಾಸ್ಯ: ಕನ್ನಡ ಬಿಗ್‌ಬಾಸ್ ಪ್ರೋಮೋ ನೋಡಿ

ಸಮಂತಾ ರುತ್ ಪ್ರಭು ಹಾಗೂ ನಾಗ ಚೈತನ್ಯ ಜೋಡಿ 2017ರ ಅಕ್ಟೋಬರ್​ನಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಸುಮಾರು ನಾಲ್ಕು ವರ್ಷಗಳ ನಂತರ, 2021ರ ಅಕ್ಟೋಬರ್​​ನಲ್ಲಿ ತಾವು ಬೇರ್ಪಡುವುದಾಗಿ ಘೋಷಿಸಿದ್ದರು. ಈ ಸುದ್ದಿಯನ್ನು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದರು. ಮತ್ತೊಂದೆಡೆ ಸಮಂತಾ ಅವರು ವಿಚ್ಛೇದನದ ನಂತರ ತಮ್ಮ ಆರೋಗ್ಯ ಮತ್ತು ವೃತ್ತಿಜೀವನಕ್ಕೆ ಪ್ರಮುಖ ಆದ್ಯತೆ ನೀಡಿ, ಮುಂದುವರೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.